ಬದುಕು ಕಟ್ಟಿಕೊಡುವ ಜೀವಂತ ಭಾಷೆ ಕನ್ನಡ: ಮುರುಗೇಶ ಕಡ್ಲಿಮಟ್ಟಿ

KannadaprabhaNewsNetwork |  
Published : Nov 25, 2024, 01:01 AM IST
24ಕೆಎಂಜಿ-1 | Kannada Prabha

ಸಾರಾಂಶ

ಕಮತಗಿ ಪಟ್ಟಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಭುವನೇಶ್ವರಿದೇವಿ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಕನ್ನಡ ವಿಶ್ವದ ಶ್ರೀಮಂತ ಭಾಷೆ, ಬದುಕು ಕಟ್ಟಿಕೊಡುವ ಜೀವಂತ ಭಾಷೆ, ಸಂಸ್ಕೃತಿ ಪ್ರತೀಕವಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಹೇಳಿದರು.

ಪಟ್ಟಣದಲ್ಲಿನ ಕನ್ನಡ ರಾಜ್ಯೋತ್ಸವ ವೇದಿಕೆಯಿಂದ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಭುವನೇಶ್ವರಿದೇವಿ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿ, ಕನ್ನಡ ಭಾಷೆಯು ಎರಡು ಸಾವಿರ ವಷಕ್ಕಿಂತಲೂ ಹಳೆಯದಾದ ಭಾಷೆಯಾಗಿದೆ. ಆದ್ದರಿಂದ ನಾವೆಲ್ಲರೂ ನಮ್ಮ ಮಾತೃ ಭಾಷೆಯಾದ ಕನ್ನಡ ಊಳಿಸಿ ಬೆಳೆಸುವುದರ ಜೊತೆಗೆ ನಮ್ಮ ಸಂಸ್ಕೃತಿ, ನೆಲ, ಜಲ ರಕ್ಷಣೆಗಾಗಿ ಸದಾ ಸಿದ್ಧರಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಮತಗಿ ಪಪಂ ಅಧ್ಯಕ್ಷ ರಮೇಶ ಜಮಖಂಡಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಕೇವಲ ನವಂಬರ್ 1ಕ್ಕೆ ಅಷ್ಟೇ ಸೀಮಿತಗೊಳಿಸದೆ ಅದನ್ನು ನಿರಂತರವಾಗಿ ಆಚರಣೆ ಮಾಡಬೇಕು. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಆದ್ದರಿಂದ ನಾವೆಲ್ಲರೂ ಕನ್ನಡ ಭಾಷೆ ಊಳಿಸಿ ಬೆಳೆಸೋಣ ಎಂದರು.

ಪಪಂ ಸದಸ್ಯರಾದ ಗುರಲಿಂಗಪ್ಪ ಪಾಟೀಲ, ದೇವಿಪ್ರಸಾದ ನಿಂಬಲಗುಂದಿ, ಬಸವರಾಜ ಕುಂಬಳಾವತಿ, ಚಂದು ಕುರಿ, ಲಕ್ಷ್ಮಣ ಮಾದರ, ಬಸವರಾಜ ದಂಡಾವತಿ, ಮುಖಂಡರಾದ ಹುಚ್ಚಪ್ಪ ಸಿಂಹಾಸನ, ವಿಶ್ವನಾಥ ಲೆಕ್ಕದ, ನೂರಂದಪ್ಪ ಗೌಡ್ರ, ಯಲ್ಲಪ್ಪ ವಡ್ಡರ, ಶಂಕ್ರಪ್ಪ ಹೆಬ್ಬಾಳ, ಹನಮಂತ ಕಡಿವಾಲ, ನಬಿ ತಹಸೀಲ್ದಾರ್‌, ಲಕ್ಷ್ಮಣ ದ್ಯಾಮಣ್ಣವರ, ಶಶೀಧರ ಅರಶೀಣಗೋಡಿ, ರಮೇಶ ಲಮಾಣಿ ಹಾಗೂ ಕನ್ನಡ ರಾಜ್ಯೋತ್ಸವ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಸನ್ಮಾನ:

ಇದೇ ಸಂದರ್ಭದಲ್ಲಿ ವೇದಿಕೆಯಿಂದ ಸಹಕಾರ ರತ್ನ ಪ್ರಶಸ್ತಿ ಪಡೆದ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ, ಪಪಂ ಸದಸ್ಯ ದೇವಿಪ್ರಸಾದ ನಿಂಬಲಗುಂದಿ, ಹುನಗುಂದ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಸಂಗಮೇಶ ಶಿನ್ನೂರಗೆ ಸನ್ಮಾನಿಸಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!