ಕುಕನೂರು: ಸ್ಪಷ್ಟ ಓದು,ಶುದ್ಧ ಬರಹ ಮತ್ತು ಸರಳ ಗಣಿತದ ಪ್ರಾವೀಣ್ಯತೆ ಮಕ್ಕಳಲ್ಲಿ ಹೆಚ್ಚಿಸಲು ಕಲಿಕಾ ಹಬ್ಬ ಉತ್ತಮ ವೇದಿಕೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಹೇಶ ಸಬರದ ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಾರುತಿ ತಳವಾರ ಮಾತನಾಡಿ, ಇತರ ಶಾಲೆಗಳಿಗಿಂತ ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆಯೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಯಲು ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದರು.
ಸಿಆರ್ ಪಿ ಪೀರಸಾಬ್ ದಫೇದಾರ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕಗಳ ಜ್ಞಾನವಲ್ಲ. ಅದು ಮಗುವಿನ ಆತ್ಮವಿಶ್ವಾಸ ಬೆಳೆಸುವ ಶಕ್ತಿ. ಅವನ ಭವಿಷ್ಯ ರೂಪಿಸುವ ದೀಪವಾಗಿದೆ. ಕಲಿಕಾ ಹಬ್ಬ ಮಕ್ಕಳಲ್ಲಿ ಮೂಲ ಓದು, ಬರವಣಿಗೆ ಮತ್ತು ಗಣಿತದ ಬಲಿಷ್ಠ ಅಡಿಪಾಯ ನಿರ್ಮಿಸುವ ಅತ್ಯಂತ ಮಹತ್ವದ ಪ್ರಯತ್ನವಾಗಿದೆ. ಬಲವಾದ ಅಡಿಪಾಯವಿದ್ದರೆ ಭವಿಷ್ಯದ ಕಟ್ಟಡವು ಸದೃಢವಾಗಿರುತ್ತದೆ. ಒಂದು ಮಗು ಚೆನ್ನಾಗಿ ಓದಲು ಕಲಿತರೆ ಅದು ತನ್ನ ಬದುಕನ್ನು ತಾನೇ ಓದಲು ಕಲಿತಂತೇ.ಒಂದು ಮಗು ಲೆಕ್ಕ ಮಾಡಲು ಕಲಿತರೆ ಜೀವನದ ಸಮಸ್ಯೆ ಪರಿಹರಿಸುವ ಧೈರ್ಯ ಅದು ಗಳಿಸಿಕೊಂಡಂತೆ ಎಂದರು.ಎಸ್ ಡಿಎಂಸಿ ಅಧ್ಯಕ್ಷ ವೀರಣ್ಣ ಚೌಡಿ ಮಾತನಾಡಿ, ಕಲಿಕೆಯಿಂದ ಹಿಂದುಳಿದ ಮಕ್ಕಳು ಕಲಿಯಲು ಚೈತನ್ಯ ತುಂಬುವ ಕಾರ್ಯ ಆಗುತ್ತಿದೆ ಎಂದರು.
ಹಿರಿಯ ದೇವೇಂದ್ರಪ್ಪ ಶಿರೂರು ಮಾತನಾಡಿ, ಮನುಷ್ಯನಾಗಿ ಜನ್ಮ ತಾಳಿದ ಮೇಲೆ ಸಾರ್ಥಕ ಬದುಕು ನಡೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಏನಾದರೂ ಸಾಧಿಸುವ ಮೂಲಕ ಜೀವನ ಸಾರ್ಥಕತೆಪಡಿಸಿಕೊಳ್ಳಬೇಕು ಎಂದರು.ಮುಖ್ಯ ಶಿಕ್ಷಕರ ಸಂಗಪ್ಪ ಕಿಂದ್ರಿ, ಲಿಂಗರಡ್ಡಿ ಕರುಮುಡಿ, ಪಿಡಿಒ ಸಿದ್ದನಗೌಡ ರಬ್ಬನಗೌಡ, ಶಾಂತಾ ಹಿರೇಮಠ, ಪ್ರಭು ವಕ್ಕಳದ, ಪ್ರಭು ಶಿವನಗೌಡ, ಉಮೇಶ ಕಂಬಳಿ, ಅಬ್ದುಲ್ ಕಲೀಲ್, ಸಂಗಪ್ಪ ರಾಜೂರ, ರಾಜಶೇಖರ ಹಿರೇಮಠ, ನಾಗರಾಜ ಹನಸಿ, ಶಿವಕುಮಾರ ಮುತ್ತಾಳ, ಮಹೇಶ ಬೆದವಟ್ಟಿ, ಸಂಗಪ್ಪ ಕೊಪ್ಪದ, ಪ್ರಭುರಾಜ್ ಮುತ್ತಾಳ, ಚಾಂದಾಹುಸೇನ್ ಮುಕ್ಕಪ್ಪನವರ್, ಮೌನೇಶ ಪತ್ತಾರ್, ರಮೇಶ ನಾಗೋಜಿ, ಫಕೀರಪ್ಪ ಚಲವಾದಿ, ಕೊಟ್ರೇಶಿ ಗೊಂದಿ, ಶರಣಪ್ಪ ತೊಂಡಿಹಾಳ, ಸುರೇಶ ಹೊಸಮನಿ, ಯಮನೂರಪ್ಪ ನಾಯಕ, ಶಿಕ್ಷಕರಾದ ಕಲ್ಮೇಶ ಹಿರೇಮಠ, ಅಕ್ಕಮಹಾದೇವಿ ಇತರರಿದ್ದರು.