ವಿದ್ಯಾರ್ಥಿಗಳಿಗೆ ಕಾವ್ಯಗಳ ಅರಿವು ಅಗತ್ಯ: ಎಂ.ವಿನಯ್‌ಕುಮಾರ್

KannadaprabhaNewsNetwork |  
Published : Jul 16, 2026, 01:45 AM IST
೧೫ಕೆಎಂಎನ್‌ಡಿ-೨ಮಂಡ್ಯದ ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಮಕ ಕಾರ್ಯಕ್ರಮವನ್ನು ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯ್‌ಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಾಕಾವ್ಯಗಳಲ್ಲಿ ಬರುವ ಮಹನೀಯರ ಆದರ್ಶ, ತ್ಯಾಗ ಬಲಿದಾನ, ಇತ್ಯಾದಿಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಮಾನಸಿಕ ಸದೃಢತೆ ಸಾಧ್ಯವಾಗಲಿದೆ. ಸಂಸ್ಕಾರ, ಸಂಸ್ಕೃತಿ ಬೆಳವಣಿಗೆ ಕಾಣುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಮಹಾಕಾವ್ಯಗಳ ಬಗ್ಗೆ ಅರಿವು ಹೊಂದಬೇಕು. ಇದು ಅವರ ಜೀವನವನ್ನು ಸುಭದ್ರಗೊಳಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದು ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಅಭಿಪ್ರಾಯಿಸಿದರು.

ನಗರದ ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕ ಹಾಗೂ ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾಕಾವ್ಯಗಳಲ್ಲಿ ಬರುವ ಮಹನೀಯರ ಆದರ್ಶ, ತ್ಯಾಗ ಬಲಿದಾನ, ಇತ್ಯಾದಿಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಮಾನಸಿಕ ಸದೃಢತೆ ಸಾಧ್ಯವಾಗಲಿದೆ. ಸಂಸ್ಕಾರ, ಸಂಸ್ಕೃತಿ ಬೆಳವಣಿಗೆ ಕಾಣುತ್ತದೆ ಎಂದರು.

ಯಶಸ್ವಿ ಜೀವನ ಶೈಲಿ, ಉತ್ತಮ ಸಾಂಸ್ಕೃತಿಕ ಪ್ರಜೆಯಾಗಿ, ದೇಶಕ್ಕೆ ಮಾದರಿಯಾಗಿ ಬದುಕಿ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಲು ಮಹಾಕಾವ್ಯಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದ ಅವರು, ಈ ಎಲ್ಲಾ ಅವಕಾಶಗಳನ್ನು ಪ್ರಾಚೇನ ಶ್ರೇಷ್ಠ ಕಲೆಯಾದ ಗಮಕದ ಕಲಿಕೆ ಮತ್ತು ಆಸ್ವಾಧನೆಯಿಂದ ಸಾಹಿತಿಕ ಪ್ರೀತಿ ಗಳಿಸಲು ಸಾಧ್ಯ ಎಂದರು.

ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಸುಜಾತ ಕೃಷ್ಣ ಮಾತನಾಡಿ, ಪ್ರಾಚೀನ ಪಾರಂಪರಿಕ ಕಲೆಯಾದ ಗಮಕ ( ಕಾವ್ಯವಾಚನ)ಕ್ಕೆ ೩ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ತ್ರೇತಾಯುಗದಿಂದ ಅರಳಿದ ಶ್ರೇಷ್ಠ ಗಮಕ ಕಲೆ ಕನ್ನಡ ಭಾಷೆಯ ಅಸ್ಮಿತೆಯಾಗಿದೆ. ಕಲೆಯ ಪ್ರಸಾರಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆ ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಸದಾ ಬೆಂಬಲವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ. ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ನಯನ ಭಾಗವಹಿಸಿದ್ದರು.

ಗಮಕ ಕಾರ್ಯಕ್ರಮವಾಗಿ ಡಿವಿಜಿಯವರ ಮಂಕುತಿಮ್ಮನ ಕಗ್ಗ ಹಾಗೂ ೧೦ ನೇ ತರಗತಿಯ ಕಾವ್ಯ ಭಾಗ ವೀರಲವವನ್ನು ಹಿರಿಯ ಗಮಕಿ ಕಲಾಶ್ರೀ ಸಿ.ಪಿ.ವಿದ್ಯಾಶಂಕರ್ ವಾಚಿಸಿದರೆ, ಡಾ.ಎಸ್.ಶ್ರೀನಿವಾಸ ಶೆಟ್ಟಿ ವ್ಯಾಖ್ಯಾನಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಮಂಡ್ಯ ಜಿಲ್ಲಾ ಗಮಕ ಪರಿಷತ್ತಿನ ಪ್ರತಿನಿಧಿ ವಿದ್ಯಾಶಂಕರ್ ಸ್ವಾಗತಿಸಿ ಕಾರ್ಯಕ್ರಮದ ಸದುದ್ದೇಶವನ್ನು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಪತ್ರಿಕೆ ಓದುವ ಹವ್ಯಾಸದಿಂದ ಜ್ಞಾನದ ವೃದ್ಧಿ: ಅಷ್ಟೂರೆ
ರೈತ ಸಂಘದ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ರಾಜಣ್ಣ ಆಯ್ಕೆ