ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಅವಶ್ಯ

KannadaprabhaNewsNetwork |  
Published : Jun 03, 2024, 12:31 AM IST
(1ಎನ್.ಆರ್.ಡಿ3 ಸಂಸ್ಥೆಯವರು ಶಾಲಾ ಮಕ್ಕಳಿಂದ ಶಾಲೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.) | Kannada Prabha

ಸಾರಾಂಶ

ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಧನಾತ್ಮಕವಾಗಿ ಯೋಚಿಸಬೇಕು

ನರಗುಂದ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಅಭ್ಯಾಸ ಮಾಡಿ ಶಾಲೆ ಹಾಗೂ ಶಿಕ್ಷಕರಿಗೆ ಗೌರವ ತರಬೇಕು ಎಂದು ಸಂಸ್ಥೆಯ ಅಧ್ಯಕ್ಷ ವಿ.ಜಿ. ಮಮಟಗೇರಿ ಹೇಳಿದರು.

ಅವರು ಪಟ್ಟಣದ ಜ್ಞಾನಮುದ್ರಾ ಪಬ್ಲಿಕ್ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವಾಗದಂತೆ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ಕ್ರಿಯಾತ್ಮಕ, ಗುಣಾತ್ಮಕ ಶಿಕ್ಷಣದ ಅವಶ್ಯವಿದ್ದು, ಶಿಕ್ಷಕರು ಶಾಲೆ ಪ್ರಾರಂಭದಿಂದಲೇ ಮಕ್ಕಳಲ್ಲಿರುವ ಕೌಶಲ್ಯ ಗುರುತಿಸಿ ಪ್ರೋತ್ಸಾಹಿಸಿ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಎ.ಸಿ.ವಿರಕ್ತಮಠ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಧನಾತ್ಮಕವಾಗಿ ಯೋಚಿಸಬೇಕು, ಪಾಲಕರು ಮತ್ತು ಪೋಷಕರು ಮಕ್ಕಳನ್ನು ಅಂಕಗಳಿಸುವ ಯಂತ್ರ ಮಾಡದೆ ಅವರ ಭಾವನೆಗಳಿಗೆ ಸ್ಪಂದಿಸಿ ಕಲಿಕೆಗೆ ಪೂರಕ ವಾತಾವರಣ ಒದಗಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಮಹಾಸರಸ್ವತಿ ಹಾಗೂ ಮಹಾಗಣಪತಿಗೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಂದ ರಿಬ್ಬನ್ ಕತ್ತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಿ.ಎನ್. ಮಂಟೂರ, ಸದಸ್ಯರುಗಳಾದ ಗಿರೀಶ ಜವಳಿ, ಮಾರುತಿ ಚವ್ಹಾಣ, ಶಿವಪ್ರಕಾಶ ಹೊಸಕೇರಿಮಠ, ಅನಿತಾ ಕಲ್ಮಠ, ಪ್ರಾಚಾರ್ಯೆ ದೀಪಾ ಕುಲಕರ್ಣಿ, ಶಿಕ್ಷಕ/ಶಿಕ್ಷಕಿಯರಾದ ಸುಭಾಸಗೌಡ ಮಳ್ಳಪ್ಪಗೌಡ್ರ, ಬಹದ್ಧೂರ ಖಾನ, ಬಾಳು ನರಗುಂದ, ಅರವಿಂದ ಕುಲಕರ್ಣಿ, ಬಸವರಾಜ ಭಿಂಗಿ, ರಾಘವೇಂದ್ರ ಚಟ್ರಿ, ಕಿರಣ ಕುಂಬಾರ, ಖತೀಬ, ತಾಯಪ್ಪ, ಮುದಿಯಪ್ಪ, ವಿನಯಗೌಡ, ಪಲ್ಲವಿ, ಆಶಾ ಗಿರಿಜಾ, ರಜೀಯಾ, ಭಾಗ್ಯಶ್ರೀ, ಮಹಾಲಕ್ಷ್ಮೀ, ಅನು, ಸುಜಾತ, ದೀಪಾ, ವಿದ್ಯಾ,ಶಿವಲೀಲಾ, ಶೀಲಾ, ರೇಣುಕಾ, ಅಶ್ವೀನಿ, ವಿಜಯಲಕ್ಷ್ಮೀ, ಅಕ್ಷತಾ, ಮಮತಾಜ, ಪೂರ್ಣಿಮಾ, ವಾಣಿಶ್ರೀ, ಸ್ವಾತಿ, ಶ್ವೇತಾ,ಸೌಮ್ಯ, ಸೌಜನ್ಯ ರೂಪಾ, ಸಕ್ಕುಬಾಯಿ, ಗಿರಿಜಾದೇವಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು