ಕರ್ನಾಟಕ ಸಾಂಸ್ಕೃತಿಕ ವೈಭವಕ್ಕೆ ಮನಸೋತ ಫ್ರೆಂಚ್‌ ಡಿಸೈನಿಂಗ್‌ ವಿದ್ಯಾರ್ಥಿಗಳು

KannadaprabhaNewsNetwork |  
Published : May 04, 2024, 12:30 AM IST
29 | Kannada Prabha

ಸಾರಾಂಶ

ಹಲವು ತಲೆಮಾರುಗಳಿಂದ ಬಂದಿರುವ ಸಾಂಪ್ರಾದಾಯಿಕ ಕಲೆ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡರು. ಈ ವೇಳೆ ಕುಶಲಕರ್ಮಿಗಳ ಕಾರ್ಯಕ್ಷಮತೆ ಹಾಗೂ ಕಲೆಯನ್ನು ಗೌರವಿಸುವ ವಿಧಾನವನ್ನು ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದ ಸಾಂಸ್ಕೃತಿಕ ವೈಭವ ಹಾಗೂ ವಾಸ್ತುಶೈಲಿಯ ಪರಂಪರೆ ಕಂಡು ಫ್ರಾನ್ಸ್‌ ನ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ವಿದ್ಯಾರ್ಥಿಗಳು ಬೆರಗಾದರು.

ಇಂದು ಬೊಂಬೆಗಳ ನಗರ ಎಂದೇ ಖ್ಯಾತಿ ಗಳಿಸಿರುವ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚನ್ನಪಟ್ಟಣ ಕ್ರಾಫ್ಟ್‌ ನಲ್ಲಿರುವ ನುರಿತ ಕುಶಲಕರ್ಮಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು.

ಹಲವು ತಲೆಮಾರುಗಳಿಂದ ಬಂದಿರುವ ಸಾಂಪ್ರಾದಾಯಿಕ ಕಲೆ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡರು. ಈ ವೇಳೆ ಕುಶಲಕರ್ಮಿಗಳ ಕಾರ್ಯಕ್ಷಮತೆ ಹಾಗೂ ಕಲೆಯನ್ನು ಗೌರವಿಸುವ ವಿಧಾನವನ್ನು ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು.

ಈ ಪ್ರವಾಸದಲ್ಲಿ ಫ್ರೆಂಚ್ ವಿದ್ಯಾರ್ಥಿಗಳು ತಾವು ಕಂಡ ಅದ್ಭುತ ಕಲೆಯನ್ನು ಹಾಗೂ ಅಲ್ಲಿ ಪಡೆದುಕೊಂಡ ಅನುಭವವನ್ನು ವಿಡಿಯೋದಲ್ಲಿ ಸೆರೆ ಹಿಡಿದರು. ನಂತರ ಮೈಸೂರು ಅರಮನೆಗೆ ಭೇಟಿ ನೀಡಿ, ಅಲ್ಲಿರುವ ಕಣ್ಮನ ಸೆಳೆಯುವ ವಾಸ್ತುಶಿಲ್ಪಕ್ಕೆ ವಿದ್ಯಾರ್ಥಿಗಳು ಬೆರಗಾದರು.

ಈ ವೇಳೆ ಕರ್ನಾಟಕದ ಪರಂಪರೆ ಹಾಗೂ ಕರಕುಶಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರಿನ ವಾಸ್ತು ವೈಭವವು ಡಿಸೈನಿಂಗ್ ವಿದ್ಯಾರ್ಥಿಗಳ ವಿನ್ಯಾಸ ಕಲೆಗೆ ಮತ್ತಷ್ಟು ಹೊಸ, ಹೊಸ ಸಾಧ್ಯತೆಯನ್ನು ಯೋಚಿಸುವಂತೆ ಪ್ರೆರೇಪಿಸಿತು. ಈ ಮೂಲಕ ಫ್ರಾನ್ಸ್‌ ನ ವಿದ್ಯಾರ್ಥಿಗಳಿಗೆ ಭಾರತದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಶ್ರೀಮಂತಿಕೆಯ ಪರಿಚಯವಾಯಿತು.

ಗುರುವಾರದಂದು, ಬೆಂಗಳೂರಿನ ಲಿಸಾ ಸ್ಕೂಲ್ ಆಫ್ ಡಿಸೈನ್‌ ನಲ್ಲಿ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್‌ ನ ಈ 27ನೇ ಅಕ್ಷರವನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿದರು.

ಈ ಕಾರ್ಯಾಗಾರದಲ್ಲಿ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ ಬೆಂಗಳೂರಿನ 2ನೇ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಫ್ರಾನ್ಸ್ ನ ಸ್ಟ್ರಾಸ್‌ ಬರ್ಗ್ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ನ ಸಂದರ್ಶಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ