ಕನ್ನಡಪ್ರಭ ವಾರ್ತೆ ಹನೂರು
ಶಾಸಕರ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ನಡೆಸುತ್ತಿದ್ದ ಯುವಕರನ್ನು ಮನವೊಲಿಸಲು ಪ್ರಯತ್ನಿಸಿದರೂ ಕೂಡ ಯುವಕರು ಒಪ್ಪಲಿಲ್ಲ. ನಂತರ ಅನಿರೀಕ್ಷಿತವಾಗಿ ಇದೇ ಮಾರ್ಗವಾಗಿ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮನವೊಲಿಸಿ ಚಾಲಕ, ನಿರ್ವಾಹಕರಿಗೆ ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿ ಡಿಪೋ ವ್ಯವಸ್ಥಪಕಾರ ಜೊತೆಗೆ ಇನ್ನೊಮ್ಮೆ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಹೆಚ್ಚುವರಿ ಬಸ್ ನಿಯೋಜನೆ ಮಾಡುವಂತೆ ದೂರವಾಣಿ ಮೂಲಕ ಮಾತನಾಡಿದರು. ರಸ್ತೆ ತಡೆ ಹಿನ್ನೆಲೆಯಲ್ಲಿ ಸುಮಾರು 45 ನಿಮಿಷಗಳ ಸಮಯ ಬಸ್ಸುಗಳಲ್ಲಿದ್ದ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.ತಾಲೂಕಿನಲ್ಲಿ ದಿನನಿತ್ಯದ ಸಮಸ್ಯೆ:
ತಾಲೂಕಿನ ಚನ್ನಾ ಲಿಂಗನಹಳ್ಳಿಯಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದರು. ಇದೇ ರೀತಿ ಬಂಡಳ್ಳಿ ರಾಮಪುರ ಹಾಗೂ ಗಡಿ ಗ್ರಾಮದ ವಿವಿಧ ಗ್ರಾಮಗಳಲ್ಲಿ ಸಹ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿ ಇದ್ದು ಸಂಬಂಧಪಟ್ಟ ಜನಪ್ರತಿನಿಧಿ ಸಾರಿಗೆ ಇಲಾಖೆ ಅಧಿಕಾರಿಗಳು ಶಾಲಾ ಕಾಲೇಜಿನ ವೇಳೆಯಲ್ಲಿ ಬರುವಾಗ ಮತ್ತು ಹೋಗುವಾಗ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಮಗೆರೆ ಕೊಂಗರಹಳ್ಳಿ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯರು ಇನ್ನಿತರರಿದ್ದರು.