ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಅಳವಡಿಸಿಕೊಳ್ಳಿ: ಎಂ.ಎಂ. ಸುರೇಶ್ ಕಿವಿಮಾತು

KannadaprabhaNewsNetwork |  
Published : Jun 02, 2025, 01:09 AM IST
1ಎಚ್ಎಸ್ಎನ್7 : ಬಸವಪಟ್ಟಣ ಶ್ರೀ ತೋಂಟದಾರ್ಯ ಸಭಾ ಭವನದಲ್ಲಿ ನಡೆದ ವಯೋನಿವೃತ್ತ ಹೊಂದಿರುವ ಶಿಕ್ಷಕರ ಗೌರವ ಸಮಾರಂಭದಲ್ಲಿ  ಮಹಾಸಭಾ ತಾಲ್ಲೂಕು ಅಧ್ಯಕ್ಷರು ಎಂ.ಎಂ. ಸುರೇಶ್ ಉದ್ಘಾಟನೆ ಮಾಡಿದರು.  | Kannada Prabha

ಸಾರಾಂಶ

ದೇವರು ಕಣ್ಣಿಗೆ ಕಾಣದಿದ್ದರೂ ತಂದೆ- ತಾಯಿ, ಗುರು, ಹಿರಿಯರಲ್ಲಿ ದೇವರನ್ನು ಕಾಣುವ ಹಾಗೂ ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ.

ಕನ್ನಡಪ್ರಭವಾರ್ತೆ ರಾಮನಾಥಪುರ

ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನದ ಜೊತೆ ಮಾನವೀಯ ಮೌಲ್ಯಗಳ ಸಂಸ್ಕಾರಯುತ ಶಿಕ್ಷಣವನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಅರಕಲಗೂಡು ತಾಲೂಕಿನ ಅಖಿಲ ಭಾರತ ಮಹಾಸಭಾ ಅಧ್ಯಕ್ಷರು ಎಂ.ಎಂ. ಸುರೇಶ್ ಕಿವಿಮಾತು ಹೇಳಿದರು.

ಅವರು ರಾಮನಾಥಪುರ ಹೋಬಳಿ ಬಸವಾಪಟ್ಟಣ ಗ್ರಾಮದಲ್ಲಿರುವ ಎಸ್.ಸಿ.ವಿ.ಡಿ.ಎಸ್ ಪ್ರೌಢಶಾಲೆಯಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಶಿಕ್ಷಕರಿಗೆ ಬಸವಾಪಟ್ಟಣದ ಶ್ರೀ ತೋಂಟದಾರ್ಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.ಬಸವಾಪಟ್ಟಣ ಗ್ರಾಮದಲ್ಲಿ ಎಸ್.ಸಿ.ವಿ.ಡಿ.ಎಸ್. ಪ್ರೌಢಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಮೇಲೆತ್ತರಕ್ಕೆ ಬೆಳೆಯಲು ಕನ್ನಡಮಠ ಹಾಗೂ ಬೆಟ್ಟದಪುರ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮೀಜಿಯವರು ಸಹಕರಿಸಿದ್ದಾರೆ ಎಂದ ಅವರು, ದೇವರು ಕಣ್ಣಿಗೆ ಕಾಣದಿದ್ದರೂ ತಂದೆ- ತಾಯಿ, ಗುರು, ಹಿರಿಯರಲ್ಲಿ ದೇವರನ್ನು ಕಾಣುವ ಹಾಗೂ ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ. ಮಕ್ಕಳಿಗೆ ಶಿಸ್ತುಬದ್ಧ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಭಾರತದ ಸತ್ಪ್ರಜೆಗಳನ್ನಾಗಿ ಬೆಳೆಸಬೇಕು ಎಂದರು.

ಗ್ರಾಮದ ಹಿರಿಯರು ಟಿ.ಸಿ. ಅಂಬರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಯೋನಿವೃತ್ತಿ ಹೊಂದಿರುವ ಶಿಕ್ಷಕರಾದ ಎಚ್.ಬಿ. ಲಿಂಗಮೂರ್ತಿ, ಕೆ.ವಿ. ಚಂದ್ರಶೇಖರ, ಎಸ್.ಎಚ್. ಶಿವಮೂರ್ತಿ, ಬಿ.ಎಂ. ಜಯಣ್ಣ, ಜಿ. ಮಹೇಶ್, ನಳಿನಿ, ಕೆ.ಟಿ. ಅಶೋಕ್ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರು ಟಿ. ಮಲ್ಲೇಶ್, ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವಕುಮಾರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಂದ್ರಕುಮಾರ್, ವಿ.ವೀ.ಲಿಂ. ಮಹಾವೇದಿಕೆ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸಂಯೋಜಕರಾದ ಸದಾಶಿವಪ್ಪ, ಸಿ.ಆರ್.ಪಿ. ವಿಶ್ವೇಶ್ವರಯ್ಯ ಮುಂತಾದವರು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿ ವೃಂದದ ಸದಸ್ಯರಾದ ವೇ. ದಿನೇಶಶಾಸ್ತ್ರಿ, ಬಿ.ಎಸ್. ಹೇಮಂತ್ ಕುಮಾರ್, ಧರ್ಮ, ಹರಿಪ್ರಸಾದ್, ದಿನೇಶ್, ವೆಂಕಟೇಶ್, ನಂಜಪ್ಪ, ಮಧು, ಟಿ.ವಿ. ಲೋಕೇಶ್, ಟಿ.ವಿ. ಲೋಕೇಶ್, ಶೃತಿ ಮುಂತಾದವರು ಇದ್ದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು