ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ರಥಬೀದಿಯಲ್ಲಿರುವ ಶಂಕರಮಠದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ವೈಷ್ಣವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣದಲ್ಲಿ ನೀವು ತೋರುವ ಕಲಿಕಾ ಸಾಮರ್ಥ್ಯ ಹಾಗೂ ಜ್ಞಾನವು ನಿಮ್ಮ ಜೀವನ ಶೈಲಿಯನ್ನೇ ಬದಲಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಗೀಳು ಎಂಬುದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಿಂದ ಮಕ್ಕಳನ್ನು ವಿಮುಖ ಗೊಳಿಸುವ ಜತೆಗೆ ಅವರ ಆರೋಗ್ಯ, ಕಲಿಕಾ ಸಾಮರ್ಥ್ಯ ಹಾಗೂ ಸರ್ವಸ್ವವನ್ನು ನಾಶ ಮಾಡುತ್ತಿದೆ. ಆದ್ದರಿಂದ ಕಲಿಕೆಗೆ ಪೂರಕವಾಗಿ ಜ್ಞಾನಾರ್ಜನೆಗೆ ಮಾತ್ರ ಮೊಬೈಲ್ ಬಳಸಿಕೊಂಡು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಜೀವನ ರೂಪಿಸಿಕೊಂಡು, ಸಮಾಜಕ್ಕೆ ಆಸ್ತಿಯಾಗುವಂತೆ ಕರೆಕೊಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ್‌ಮೂರ್ತಿ ಹಾಗೂ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.೨೦೨೪- ೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೫ ಕ್ಕಿಂತ ಹೆಚ್ಚಿನ ಅಂಕ ಪಡೆದ ೫೩ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಡಿ.ರವೀಶ್, ವೈಷ್ಣವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಕಾಮಾಕ್ಷಿ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಕುಮುದಾ ರಂಗನಾಥ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಸಾಹಿತಿ ನಾಗೇಶ್ ಕೌಂಡಿನ್ಯ, ನಿ. ಪ್ರಾಂಶುಪಾಲ ಪ್ರಭುಶಂಕರ್, ನಿ. ಶಿಕ್ಷಕಿ ರಮಾಮಣಿ, ಶಂಕರನಾರಾಯಣ ಐತಾಳ್, ಜಿ.ಪಿ.ಮಂಜುನಾಥ್ ಗುಪ್ತ, ವಕೀಲರಾದ ರಾಮಪ್ರಸನ್ನ, ಪೋಷಕರು, ಇತರರು ಇದ್ದರು.