ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ಅಳವಡಿಸಿಕೊಳ್ಳಬೇಕು: ಭಾರತಿ

KannadaprabhaNewsNetwork |  
Published : Nov 25, 2025, 02:15 AM IST
್ಿ | Kannada Prabha

ಸಾರಾಂಶ

ಶೃಂಗೇರಿ, ಶಿಕ್ಷಣ ಬದುಕಿಗೆ ಪೂರಕವಾಗಿರಬೇಕು. ಶಿಕ್ಷಣ, ಸಂಸ್ಕಾರ ಬಹಳ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ, ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಹೇಳಿದರು.

- ಮೆಣಸೆ ಸರ್ಕಾರಿ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶಿಕ್ಷಣ ಬದುಕಿಗೆ ಪೂರಕವಾಗಿರಬೇಕು. ಶಿಕ್ಷಣ, ಸಂಸ್ಕಾರ ಬಹಳ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ, ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಹೇಳಿದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ವೇದಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ದರು. ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ, ಸಂಸ್ಕೃತಿ ಮೌಲ್ಯಗಳಿರಬೇಕು. ಆಗಲೇ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಸಿಗಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಶಿಸ್ತು, ಪ್ರಾಮಾಣಿಕತೆ, ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗ, ದೇಶದ ನಿಜವಾದ ಶಕ್ತಿ. ಈ ಯುವಶಕ್ತಿ ಬಲಿಷ್ಟವಾಗಿದ್ದರೆ ಉತ್ತಮ ಸಮಾಜ, ದೇಶಕಟ್ಟಲು ಸಾಧ್ಯ. ಯುವಪೀಳಿಗೆ ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಕ್ರೀಡಾ ಮನೋಭಾವ, ಏಕಾಗ್ರತೆ ರೂಡಿಸಿ ಕೊಳ್ಳಬೇಕು. ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ತ್ರಿಮೂರ್ತಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಇರುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ದೇಶದ ಮೌಲ್ಯ ಗಳನ್ನು ಮೊದಲು ಅರ್ಥೈಸಿಕೊಳ್ಳಬೇಕು. ಆಗ ಸಂವಿಧಾನ ಅರ್ಥವಾಗುತ್ತದೆ. ಗ್ರಾಮೀಣರಿಗೂ ಕಾನೂನಿನ ಜ್ಞಾನದ ಜೊತೆಗೆ ಮೂಲಭೂತ ಹಕ್ಕಿನ ಅರಿವು ಇರಬೇಕು. ರಾಷ್ಟ್ರಗೀತೆ, ಧ್ವಜ,ಲಾಂಛನ ಮೊದಲಾದ ರಾಷ್ಟ್ರೀಯತೆ ಪ್ರತಿಬಿಂಬಿಸುವ ಅನನ್ಯತೆಯನ್ನು ಸರ್ವರು ಗೌರವಿಸಬೇಕು ಎಂದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಗದಗ ಸರ್ಕಾರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕಿ ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು.

ಸದಸ್ಯರಾದ ಕೇಶವನಾಯಕ್, ಪ್ರದೀಪ್,ಉಪನ್ಯಾಸಕ ರಾಘವೇಂದ್ರ ರೆಡ್ಡಿ, ಡಾ.ಆಶಾ ಬಿ.ಜಿ.ಆಶಾಲತಾ, ಮಂಜುನಾಥ್, ಚಾಣುಕ್ಯರಾಜ್,ಶಿವಕುಮಾರ್,ಆಶಾ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.

23 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಉದ್ಧಾಟನೆಯನ್ನು ಪ್ರಾಂಶುಪಾಲರಾದ ಭಾರತಿ ಉದ್ಘಾಟಿಸಿದರು.ತ್ರಿಮೂರ್ತಿ,ಕೇಶವನಾಯಕ್,ತೇಜಸ್ವಿನಿ ಮತ್ತಿತರರು ಇದ್ದರು.

PREV

Recommended Stories

ದಿಲ್ಲಿಯಲ್ಲಿ ಈಗ ಡಿಕೆಶಿ ಪರ ಆಪ್ತ ಶಾಸಕರ ಬಹಿರಂಗ ಲಾಬಿ!
ಮನೆ ಬಳಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೇರಳಿಗರ ಗೂಂಡಾಗಿರಿ