ವಿದ್ಯಾರ್ಥಿಗಳ ಗುರಿ ಉನ್ನತ ಹುದ್ದೆಯತ್ತ ಇರಲಿ: ಪ್ರೊ.ಗಂಗಾಧರ್ ದೇವರಮನೆ

KannadaprabhaNewsNetwork |  
Published : Oct 08, 2026, 01:30 AM IST
7 ಟಿವಿಕೆ 2 – ತುರುವೇಕೆರೆಯ ಗ್ಲೋಬಲ್ ಎಂಬಸಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಕಾರ್ಯಗಾರ ನಡೆಯಿತು. | Kannada Prabha

ಸಾರಾಂಶ

ಇದು ಸ್ಪರ್ಧಾತ್ಮಕ ಯುಗ. ಕೈ ಬೆರಳಿನ ತುದಿಯಲ್ಲೇ ಪ್ರಪಂಚವನ್ನು ತಮ್ಮೆದುರು ತೆರೆದಿಡಬಹುದಾಗಿದೆ. ತಂತ್ರಜ್ಞಾನದ ಮುಂದೆ ವಿಶ್ವವೇ ಒಂದು ಗ್ರಾಮವಾಗಿದೆ. ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆ ಹೊಂದಬೇಕು ಎಂಬ ಮನೋಭಾವದಿಂದ ಅಧ್ಯಯನ ಮಾಡಬೇಕೆಂದು ಗ್ಲೋಬಲ್ ಎಂಬಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಂಗಾಧರ್ ದೇವರಮನೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇದು ಸ್ಪರ್ಧಾತ್ಮಕ ಯುಗ. ಕೈ ಬೆರಳಿನ ತುದಿಯಲ್ಲೇ ಪ್ರಪಂಚವನ್ನು ತಮ್ಮೆದುರು ತೆರೆದಿಡಬಹುದಾಗಿದೆ. ತಂತ್ರಜ್ಞಾನದ ಮುಂದೆ ವಿಶ್ವವೇ ಒಂದು ಗ್ರಾಮವಾಗಿದೆ. ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆ ಹೊಂದಬೇಕು ಎಂಬ ಮನೋಭಾವದಿಂದ ಅಧ್ಯಯನ ಮಾಡಬೇಕೆಂದು ಗ್ಲೋಬಲ್ ಎಂಬಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಂಗಾಧರ್ ದೇವರಮನೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ಲೋಬಲ್ ಎಂಬಸಿ ಪ್ರಥಮ ದರ್ಜೆ ಕಾಲೇಜು, ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರಮವಿಲ್ಲದೇ ಯಾವುದೂ ಸಿಗುವುದಿಲ್ಲ. ಶ್ರಮಪಟ್ಟು, ಮನಸ್ಸಿಟ್ಟು ಓದಿದಲ್ಲಿ ಮಾತ್ರ ಯಶಸ್ಸುಗಳಿಸಲು ಸಾಧ್ಯ. ನಿಮ್ಮ ಗುರಿ ದೊಡ್ಡದಾಗಿರಲಿ. ಅಸಾಧ್ಯವೆಂಬುದೂ ಯಾವುದೂ ಇಲ್ಲ. ಸಾಧಿಸಬೇಕೆಂಬ ಛಲವಿದ್ದರೆ ಗೆದ್ದೇ ಗೆಲ್ಲುವಿರಿ. ಸತತ ಅಧ್ಯಯನವೇ ನಿಮಗೆ ಇರುವ ರಾಜ ಮಾರ್ಗ ಎಂದು ಹೇಳಿದರು.

ಕೃಷಿಕ್ ಸರ್ವೋದಯ ಫೌಂಡೇಷನ್ ನಿರ್ದೇಶಕ ಮಂಗೀಕುಪ್ಪೆ ಗಂಗಣ್ಣ ಮಾತನಾಡಿ ತಮ್ಮ ಸಂಸ್ಥೆ ನಿವೃತ್ತ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳ ಸಹಕಾರದಿಂದ ನಡೆಯುತ್ತಿದೆ. ನಾವೆಲ್ಲರೂ ಗ್ರಾಮಾಂತರ ಪ್ರದೇಶದಿಂದಲೇ ಬಂದವರಾಗಿದ್ದೇವೆ. ಶ್ರಮಪಟ್ಟು ಓದಿದ ಫಲವಾಗಿ ಇಂದು ಕೆಎ ಎಸ್ ನಂತಹ ಹುದ್ದೆ ಅಲಂಕರಿಸಿ ಸಾವಿರಾರು ಬಡ ಜನರ ನೆರವಿಗೆ ಬಂದಿದ್ದೇವೆ ಎಂದು ತಿಳಿಸಿದರು.

ಗ್ರಾಮಾಂತರ ಪ್ರದೇಶದ ಮಕ್ಕಳ ತರಬೇತಿಗಾಗಿ ತಾವು ಓರ್ವ ತರಬೇತುದಾರರನ್ನು ಕಾಲೇಜಿಗೆ ಕಳಿಸಿ ಅವರ ಖರ್ಚುವೆಚ್ಚವನ್ನು ಭರಿಸುವುದಾಗಿ ಮಂಗೀಕುಪ್ಪೆ ಗಂಗಣ್ಣ ಘೋಷಿಸಿದರು.

ಸಂಸ್ಥೆಯ ಅಧ್ಯಕ್ಷ ಆಡಿಟರ್ ಯಲಚವಾಡಿ ನಾಗರಾಜು ಮಾತನಾಡಿ ನಮ್ಮ ಸಂಸ್ಥೆ ಗ್ರಾಮಾಂತರ ಪ್ರದೇಶದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಆರಂಭವಾಗಿದೆ. ಬೆಂಗಳೂರು, ತುಮಕೂರಿನಲ್ಲಿ ಶಾಖೆ ಪ್ರಾರಂಭವಾಗಿದೆ. ಶೀಘ್ರವೇ ತಿಪಟೂರಿನಲ್ಲೂ ಶಾಖೆ ಪ್ರಾರಂಭಿಸಲಾಗುವುದು. ತುಮಕೂರಿನಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ, ಊಟ ಮತ್ತು ವಸತಿಯನ್ನೂ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಮ್ಮ ಸಂಸ್ಥೆಯಲ್ಲಿ ಸರ್ಕಾರಿ ನೌಕರಿ, ಬ್ಯಾಂಕ್, ಐಎಎಸ್, ಐಪಿಎಸ್, ಕೆಪಿಎಸ್, ಕೆಎಎಸ್ ಸೇರಿದಂತೆ ಎಲ್ಲಾ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮತ್ತು ಆಫ್ ಲೈನ್ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಪ್ರೊ.ಕೆ.ಚಂದ್ರಣ್ಣ, ಕಾರ್ಯದರ್ಶಿ ಎಚ್. ಎಸ್. ಹನುಮೇಗೌಡ, ಶೈಕ್ಷಣಿಕ ಸಂಯೋಜಕರಾದ ಡಾ.ಬಿ.ಟಿ. ಗುರುರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟಕ ಪ್ರಹ್ಲಾದ್, ರೈತ ಮುಖಂಡ ಅಶೋಕ್ ಕುಮಾರ್, ಉಪನ್ಯಾಸಕರಾದ ಬಸವರಾಜು, ಶ್ವೇತಾ, ಚಂದನ್, ಪ್ರವೀಣ್, ಭವ್ಯಶ್ರೀ, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಷಯದ ಉಪನ್ಯಾಸಕ ಪಿ.ಚೇತನ್ ಕುಮಾರ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಪವಿತ್ರ ತರಬೇತುದಾರರ ಪರಿಚಯ ಮಾಡಿಕೊಟ್ಟರು. ಭೂಮಿಕಾ ಸ್ವಾಗತಿಸಿದರು. ಅಮೂಲ್ಯ ನಿರೂಪಿಸಿದರು. ನಮ್ರತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಂದ್ರ ಮೋದಿ ಆಡಳಿತ ಕುರಿತು ಬೀದಿ ನಾಟಕ
ಕುರುಹಿನಶೆಟ್ಟಿ ಭಜನಾ ಮಂಡಳಿಯಿಂದ ಭಕ್ತಿಗೀತೆ