- ಅಜ್ಜನ ತಿಥಿಗೆಂದು ತವರಿಗೆ ಬಂದುಹೋದ ಮಹಿಳೆ ಅನುಮಾನಾಸ್ಪದ ಸಾವು - ಪತ್ನಿ ಸಾವಿನ ಬೆನ್ನಲ್ಲೇ ಗಂಡ, ಅತ್ತೆ, ಮಾವ ನಾಪತ್ತೆ: ಪೊಲೀಸರಿಂದ ಶೋಧ
ಕನ್ನಡಪ್ರಭ ವಾರ್ತೆ ದಾವಣಗೆರೆ
ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ತಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೃತಳ ಪಾರ್ಥಿವ ಶರೀರವನ್ನು ಆಕೆಯ ಕುಟುಂಬಸ್ಥರು ನಗರದ ಜಿಲ್ಲಾ ಎಸ್‌ಪಿ ಕಚೇರಿ ಬಳಿ ತಂದು ನ್ಯಾಯಕ್ಕಾಗಿ ಕಣ್ಣೀರು ಹಾಕಿದ ಘಟನೆ ನಗರದಲ್ಲಿ ಬುಧವಾರ ನಡೆದಿದೆ.ಹರಿಹರ ತಾ. ಕಡ್ಲೆಗೊಂದಿ ಗ್ರಾಮದ ವಿನುತಾ (26) ಮೃತ ಮಹಿಳೆ. ಅದೇ ಗ್ರಾಮದ ಶಿವಶಂಕರ್ ಎಂಬಾತನ ಜೊತೆಗೆ 5 ವರ್ಷಗಳ ಹಿಂದೆ ವಿನುತಾ ವಿವಾಹವಾಗಿತ್ತು. ವಿನುತಾ ತಾಯಿಯ ಚಿಕ್ಕಮ್ಮನ ಮಗನಾಗಿದ್ದ ಶಿವಶಂಕರ ವರದಕ್ಷಿಣೆ ತರುವಂತೆ, ನಿನಗೆ ಮಕ್ಕಳಾಗಿಲ್ಲ, ಬಂಜೆ ಅಂತೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದ.
ಮೃತ ವಿನುತಾ ಶವದ ಮರಣೋತ್ತರ ಪರೀಕ್ಷೆ ನಂತರ ಶವವನ್ನು ದಾವಣಗೆರೆ ಎಸ್ಪಿ ಕಚೇರಿಗೆ ತಂದ ಕುಟುಂಬಸ್ಥರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟರು. ಮೃತ ಮಗಳ ಗಂಡ ಶಿವಶಂಕರ ಹಾಗೂ ಆತನ ಕುಟುಂಬಸ್ಥರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಒತ್ತಾಯಿಸಿದರು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ವಿನುತಾ ಪತಿ ಶಿವಶಂಕರ, ಅತ್ತೆ ಶಾಂತಮ್ಮ, ಮಾವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
-7ಕೆಡಿವಿಜಿ11; ವಿನುತಾ