ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಓದುವ ಹವ್ಯಾಸವೂ ಇರಬೇಕು: ಡಾ.ರಾಜಶೇಖರ್‌

KannadaprabhaNewsNetwork | Published : Nov 13, 2024 12:51 AM

ಸಾರಾಂಶ

ಜೀವನದಲ್ಲಿ ಪುಸ್ತಕಗಳ ಪ್ರಾಮುಖ್ಯತೆಯನ್ನು ಇತಿಹಾಸದಿಂದ ಗಮನಿಸಬಹುದಾಗಿದೆ. ಪ್ರಾಚೀನ ಕಾಲದ ಜನರು ತಮ್ಮ ಕಲ್ಪನೆಗಳನ್ನು ಬಂಡೆಗಳು, ಪುಸ್ತಕಗಳ ಮೇಲೆ ರಚಿಸುತ್ತಿದ್ದರು. ಆದ್ದರಿಂದ ಇಂದಿನ ಭವಿಷ್ಯದ ಪೀಳಿಗೆಯು ಅವರ ಕಲ್ಪನೆಯ ಇತಿಹಾಸದ ಪುಸ್ತಕಗಳನ್ನು ಓದುವುದರಿಂದ ಪೂರ್ವಜರ ಬಗ್ಗೆ ಜ್ಞಾನ ಪಡೆಯಬಹುದು ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ಡಾ.ರಾಜಶೇಖರ್‌ ಜಿ. ನ್ಯಾಮತಿಯಲ್ಲಿ ಹೇಳಿದ್ದಾರೆ.

- ನ್ಯಾಮತಿ ಸರ್ಕಾರಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ - - - ನ್ಯಾಮತಿ: ಜೀವನದಲ್ಲಿ ಪುಸ್ತಕಗಳ ಪ್ರಾಮುಖ್ಯತೆಯನ್ನು ಇತಿಹಾಸದಿಂದ ಗಮನಿಸಬಹುದಾಗಿದೆ. ಪ್ರಾಚೀನ ಕಾಲದ ಜನರು ತಮ್ಮ ಕಲ್ಪನೆಗಳನ್ನು ಬಂಡೆಗಳು, ಪುಸ್ತಕಗಳ ಮೇಲೆ ರಚಿಸುತ್ತಿದ್ದರು. ಆದ್ದರಿಂದ ಇಂದಿನ ಭವಿಷ್ಯದ ಪೀಳಿಗೆಯು ಅವರ ಕಲ್ಪನೆಯ ಇತಿಹಾಸದ ಪುಸ್ತಕಗಳನ್ನು ಓದುವುದರಿಂದ ಪೂರ್ವಜರ ಬಗ್ಗೆ ಜ್ಞಾನ ಪಡೆಯಬಹುದು ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ಡಾ.ರಾಜಶೇಖರ್‌ ಜಿ. ಹೇಳಿದರು.

ನ್ಯಾಮತಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯದಲ್ಲಿ ಮಾಹಿತಿ ಕೇಂದ್ರ ವಿಭಾಗದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು, ಆಸಕ್ತಿ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ತಮ್ಮ ಮುಂದಿನ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಸಿ. ಭಾರತಿ ಮಾತನಾಡಿ, ಗ್ರಂಥಾಲಯ ಎಂಬುದು ಜ್ಞಾನಭಂಡಾರದ ದೇಗುಲವಿದ್ದಂತೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಓದಿನ ಜೊತೆ ಕನ್ನಡ ಕಲೆ, ಸಾಹಿತ್ಯ ವಿಷಯಕ್ಕೆ ಸಂಬಂಧಿತ ಪುಸ್ತಕಗಳನ್ನೂ ಓದಬೇಕು ಎಂದು ಸಲಹೆ ನೀಡಿದರು.

ಕಾಲೇಜು ಸಿಡಿಸಿ ಸದಸ್ಯ, ಹೊಸಮನೆ ಮಲ್ಲಿಕಾರ್ಜುನಪ್ಪ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಜ್ಯೋತಿ, ಗೀರೀಶ್‌, ಬಸವರಾಜ್‌, ರೇವಣಸಿದ್ಧಪ್ಪ, ಇಮ್ರಾನ್‌ ತಾಸಿರ್‌, ರಾಜೇಶ್‌, ಸುರೇಶ್‌, ಕುಬೇರಪ್ಪ, ಹನುಮಂತಪ್ಪ ಮತ್ತಿತರರಿದ್ದರು.

ಪುಸ್ತಕ ಪ್ರದರ್ಶನದಲ್ಲಿ ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ವಿವಿಧ ಕವಿಗಳ ಹಾಗೂ ಲೇಖಕರ ಪುಸ್ತಕಗಳ ಪ್ರದರ್ಶನ ಆಯೋಜನೆ ವೀಕ್ಷಿಸಿ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

- - - (-ಫೋಟೋ:)

Share this article