ವಿದ್ಯಾರ್ಥಿಗಳು ಸುಭದ್ರ ಭಾರತ ಕಟ್ಟಬೇಕು-ಮಾಕಣ್ಣವರ

KannadaprabhaNewsNetwork |  
Published : Aug 04, 2025, 12:30 AM IST
(2ಎನ್.ಆರ್.ಡಿ5 ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕೆಂದು ಬಿ.ಎಫ್.ಕರಿಗಾರ ಪ್ರತಿಜ್ಞಾ ವಿಧಿಯನ್ನು  ಬೋಧಿಸಿದರು.) | Kannada Prabha

ಸಾರಾಂಶ

ಭಾರತ ದೇಶದ ಪ್ರಗತಿಯಲ್ಲಿ ಯುವ ಜನಾಂಗದ ಪಾತ್ರ ಬಹಳ ದೊಡ್ಡದಿದೆ. ಆದ್ದರಿಂದ ವಿದ್ಯಾರ್ಥಿಗಳು ಸುಭದ್ರ ಭಾರತವನ್ನು ಕಟ್ಟಲು ಸಂಕಲ್ಪ ಮಾಡಬೇಕೆಂದು ಪ್ರಾಚಾರ್ಯ ಕೆ.ಎಂ. ಮಾಕಣ್ಣವರ ಹೇಳಿದರು.

ನರಗುಂದ: ಭಾರತ ದೇಶದ ಪ್ರಗತಿಯಲ್ಲಿ ಯುವ ಜನಾಂಗದ ಪಾತ್ರ ಬಹಳ ದೊಡ್ಡದಿದೆ. ಆದ್ದರಿಂದ ವಿದ್ಯಾರ್ಥಿಗಳು ಸುಭದ್ರ ಭಾರತವನ್ನು ಕಟ್ಟಲು ಸಂಕಲ್ಪ ಮಾಡಬೇಕೆಂದು ಪ್ರಾಚಾರ್ಯ ಕೆ.ಎಂ. ಮಾಕಣ್ಣವರ ಹೇಳಿದರು.

ಅವರು ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಎನ್‌ಎಸ್ ಎಸ್ ಘಟಕದ ಸಹಯೋಗದಲ್ಲಿ ವ್ಯಸನ ಮುಕ್ತ ದಿನಾಚರಣೆ ಹಾಗೂ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ವ್ಯಸನ ಮುಕ್ತಾರಾಗಿ ಸುಭದ್ರ ಭಾರತವನ್ನು ಕಟ್ಟುವಲ್ಲಿ ನಿರತರಾಗಬೇಕು ಎಂದು ಹೇಳಿದರು. ಪ್ರೊ. ಎ.ಕೆ. ಬಂಡಗರ ಮಾತನಾಡಿ, ತಂಬಾಕು ಹಾಗೂ ಮಾದಕ ಪದಾರ್ಥಗಳನ್ನು ವಿದ್ಯಾರ್ಥಿಗಳು ಸೇವಿಸುವುದರಿಂದ ತಮ್ಮ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳು ಉಂಟಾಗಿ ಅವರು ಅಲ್ಪ ಆಯುಷಿಗಳಾಗುತ್ತಿದ್ದಾರೆ. ಇಂತಹ ಮಾದಕ ವಸ್ತುಗಳಿಂದ ದೂರವಿದ್ದು ಮಕ್ಕಳು ಉತ್ತಮ ಗುಣಮಟ್ಟದ ಜೀವನ ಸಾಗಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್.ಎಸ್. ಶಿವಪ್ಪಯ್ಯನಮಠ, ಎಂ.ಡಿ. ಚಲವಾದಿ, ಬಿ.ಎಫ್. ಕರಿಗಾರ, ಆರ್.ಎಂ. ಜೂಲಕಟ್ಟಿ, ಕೆ.ಬಿ.ಅತ್ತಾರ, ಎಸ್.ಎಚ್. ಕಂದಗಲ್ಲ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಇದ್ದರು. ಆರ್.ಎಂ. ಜೂಲಕಟ್ಟಿ ಸ್ವಾಗತಿಸಿದರು. ಕೆ.ಬಿ. ಅತ್ತಾರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ