ಚನ್ನಪಟ್ಟಣ: ವಿದ್ಯಾರ್ಥಿಗಳು ಓದಿನ ಜತೆಗೆ ಸಾಹಿತ್ಯ ಅಭಿರುಚಿ ಬೆಳಸಿಕೊಳ್ಳಬೇಕು ಎಂದು ಕೋಡಂಬಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಮಾದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ನಾಡಿನ ಸಮಸ್ಯೆಗಳ ಜತೆಗೆ ರೈತರಲ್ಲಿ ಕೃಷಿ ಮತ್ತು ನೀರಿನ ಸದ್ಬಳಕೆ ಮಾಡುವಲ್ಲಿ ಸದಾ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ತಂದೆ ತಾಯಿ, ಗುರುಗಳಿಗೆ ಗೌರವ ನೀಡಬೇಕು. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ತಾವು ದತ್ತಿ ನೀಡುವುದಾಗಿ ತಿಳಿಸಿದರು.
ನಿವೃತ್ತ ಕೃಷಿ ಸಹಾಯಕ ನಿರ್ದೇಶಕ ಬಿ.ಟಿ.ಚಿಕ್ಕಪುಟ್ಟೇಗೌಡ ಮಾತನಾಡಿ, ನೂರಾರು ಅಡಿಗಳಷ್ಟು ಭೂಮಿ ಕೊರೆದರು ನೀರು ಸಿಗುತ್ತಿಲ್ಲ. ಸಾಲಬಾಧೆಗೆ ಕಾರಣವಾಗಿ ರೈತ ಕಷ್ಟ ಪಟ್ಟು ಸಂಪಾದಿಸಿ ಹಣ ಖರ್ಚು ಮಾಡಿದರೂ ನೀರು ಸಿಗುತ್ತಿಲ್ಲ. ಜೀವರಾಶಿಗಳಿಗೆ ಹಾಗೂ ಸಸ್ಯ ಕ್ಷೇತ್ರಗಳಿಗೆ ನೀರು ಅತ್ಯಂತ ಅಮೂಲ್ಯ ಶಕ್ತಿ. ನೀರು. ಪ್ರಕೃತಿ, ಪರಿಸರ ಮತ್ತು ನೀರು ಈ ರಾಷ್ಟ್ರದ ಸಂಪತ್ತು, ಇವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ನಿರ್ವಹಣೆ ಮತ್ತು ಬಳಕೆ ಮಾಡಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ. ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ತಜ್ಞರಿಂದ ಉಪನ್ಯಾಸಗಳು, ವಿಚಾರ ಗೋಷ್ಠಿಗಳನ್ನು ಏರ್ಪಡಿಸುತ್ತಿರುವುದು ಉತ್ತಮ ಬೆಳವಣಿಗೆ. ವಿಶೇಷ ಉಪನ್ಯಾಸ ಏರ್ಪಡಿಸಲು ದತ್ತಿ ಇಟ್ಟ ದಾನಿಗಳ ಸದಾಶಯವನ್ನು ಈಡೇರಿಸುತ್ತಾ ಬಂದಿದ್ದೇವೆ. ದಾನಿಗಳು, ಪ್ರಸಕ್ತ ವಿಷಯಾಸಕ್ತರೂ ದತ್ತಿ ಹಣ ಇಡುವ ಮೂಲಕ ಸಾಹಿತ್ಯ ಸೇವೆಗೆ ಸಹಾಯಹಸ್ತ ನೀಡಬೇಕು ಎಂದು ಮನವಿ ಮಾಡಿದರು.
ಪೊಟೋ೧೫ಸಿಪಿಟ೪: