ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಳ್ಳಬೇಕು: ಪ್ರೊ.ಎನ್‌.ಕೆ.ಲೋಕನಾಥ್

KannadaprabhaNewsNetwork |  
Published : Sep 26, 2025, 01:00 AM IST
44 | Kannada Prabha

ಸಾರಾಂಶ

ಪ್ರಸ್ತುತ ಸಂದರ್ಭದಲ್ಲಿ ಜ್ಞಾನ ಎಂಬುದು ಮುಖ್ಯ ಸಾಧನವಾಗಿದ್ದು, ಮುಖ್ಯ ಸಾಧನವಾಗಿದ್ದು, ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಂದು ವಿಷಯದಲ್ಲೂ ಪರಿಣಿತರಾಗಬೇಕು. ಇವುಗಳೊಂದಿಗೆ ಕೌಶಲವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಸದಾ ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಕಾಲೇಜಿನ ಎನ್‌.ಎಸ್‌.ಎಸ್‌. ಘಟಕಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಕಿವಿಮಾತು ಹೇಳಿದರು.

ನಗರದ ಸರಸ್ವತಿಪುರಂನ ಎನ್‌.ಎಸ್‌.ಎಸ್‌. ಭವನದಲ್ಲಿ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬುಧವಾರ ಆಯೋಜಿಸಿದ್ದ ಎನ್‌.ಎಸ್‌.ಎಸ್‌ದಿನಾಚರಣೆ ಹಾಗೂ 2023- 24, 2024- 25ನೇ ಸಾಲಿನ ಎನ್.ಎಸ್‌.ಎಸ್‌. ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಜ್ಞಾನ ಎಂಬುದು ಮುಖ್ಯ ಸಾಧನವಾಗಿದ್ದು, ಮುಖ್ಯ ಸಾಧನವಾಗಿದ್ದು, ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಂದು ವಿಷಯದಲ್ಲೂ ಪರಿಣಿತರಾಗಬೇಕು. ಇವುಗಳೊಂದಿಗೆ ಕೌಶಲವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಕಾಲೇಜಿನಲ್ಲಿ ಎನ್‌.ಎಸ್‌.ಎಸ್‌ಗೆ ಸೇರಿವುದರಿಂದ ಎಲ್ಲರನ್ನು ಒಳಗೊಂಡು ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ವಿವಿ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಡೆಯಬೇಕು ಎಂದು ಉತ್ತೇಜಿಸಿದರು.

ವಿಶ್ವವಿದ್ಯಾನಿಲಯ ಮಟ್ಟದ ಪ್ರಶಸ್ತಿಗಳಲ್ಲಿ ಉತ್ತಮ ಘಟಕಗಳು ಪ್ರಶಸ್ತಿಯನ್ನು ಎಚ್‌.ಡಿ. ಕೋಟೆಯ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ರತ್ನಾಪುರಿಯ ವಿ.ಎಸ್‌.ಎಸ್‌. ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ಟೆರೀಷಿಯನ್‌ಕಾಲೇಜು ಪಡೆದುಕೊಂಡಿದೆ.

ಉತ್ತಮ ಕಾರ್ಯಾಕ್ರಮಾಧಿಕಾರಿ ಪ್ರಶಸ್ತಿಯನ್ನು ಎಚ್‌.ಡಿ. ಕೋಟೆಯ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಎಂ.ಆರ್‌. ರಾಮಚಂದ್ರ, ರತ್ನಾಪುರಿಯ ವಿ.ಎಸ್‌.ಎಸ್‌. ಪ್ರಥಮ ದರ್ಜೆ ಕಾಲೇಜಿನ ಸುಧಾಕರ, ಟೆರೀಷಿಯನ್‌ಕಾಲೇಜಿನ ಬಿ. ರೇಖಾ ಪಡೆದುಕೊಂಡರೆ, ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ. ತೇಜಸ್‌, ಮಹಾರಾಜ ಕಾಲೇಜಿನ ಯಶಸ್‌ಕೆ. ರಾಜ್‌ಪಡೆದುಕೊಂಡರು. ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಶೇಷಾದ್ರಿಪುರಂ ಪದವಿ ಕಾಲೇಜಿನ ಲತಾ ಸಿಂಗ್‌ಪಡೆದರು.

ಉ.ಕಾ. ಸುಬ್ಬರಾಯಚಾರ್‌ಸ್ಮರಣಾರ್ಥ ಪ್ರಶಸ್ತಿಯನ್ನು ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್‌.ಕೆ. ಪ್ರಶಾಂತ್‌ಕುಮಾರ್‌, ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕೆ. ಸಹನಾ ಪಡೆದುಕೊಂಡರು.

2024- 25ನೇ ಸಾಲಿನ ವಿವಿ ಮಟ್ಟದ ಪ್ರಶಸ್ತಿಯ ಉತ್ತಮ ಘಟಕ ಬಹುಮಾನವನ್ನು ನಗರದ ಎಸ್‌.ಬಿ.ಆರ್‌.ಆರ್‌. ಮಹಾಜನ ಪ್ರಥಮ ದರ್ಜೆ ಕಾಲೇಜು, ಮಹಾರಾಜ ಕಾಲೇಜು ಘಟಕ 1 ಮತ್ತು ಮಹಾರಾಜ ಕಾಲೇಜು ಘಟಕ 2 ಪ್ರಶಸ್ತಿ ಪಡೆದವು.

ಉತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ಎಸ್‌.ಬಿ.ಆರ್‌.ಆರ್‌. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ.ಜಿ. ದೊಡ್ಡರಸಯ್ಯ, ಮಹಾರಾಜ ಕಾಲೇಜಿನ ಡಾ.ಎಸ್‌. ಕೃಷ್ಣಪ್ಪ ಮತ್ತು ಡಾ.ಪಿ.ಎಸ್‌. ಮಧುಸೂದನ್‌ ಅವರು ಪಡೆದುಕೊಂಡರು.

ಉತ್ತಮ ಸ್ವಯಂ ಸೇವಕರು, ಸ್ವಯಂ ಸೇವಕಿಯರು ಪ್ರಶಸ್ತಿಯನ್ನು ಮಹಾರಾಜ ಕಾಲೇಜಿನ ಎಂ. ಭಾರ್ಗವ್‌ಮತತ್ು ಎಂಐಟಿ ಪ್ರಥಮ ದರ್ಜೆ ಕಾಲೇಜಿನ ಪಿ.ಎನ್‌. ಸೋಹಾನ್‌, ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಕಾವೇರಿ ಪ್ರಥಮ ದರ್ಜೆ ಆಕಲೇಜಿನ ಭಾಗ್ಯಲಕ್ಷ್ಮೀ ಮತ್ತು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಎಸ್‌. ಲೇಖನ ಅರಸು ಪಡೆದುಕೊಂಡರು.

ಉ.ಕಾ. ಸುಬ್ಬರಾಯಚಾರ್‌ ಸ್ಮರಣಾರ್ಥ ಪ್ರಶಸ್ತಿಯಲ್ಲಿ ಉತ್ತಮ ಸ್ವಯಂ ಸೇವಕರು ಪ್ರಶಸ್ತಿಯನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ಕೆ.ಎಸ್‌. ಚಂದನ್‌ಪಡೆದುಕೊಂಡರೆ, ಶೇಷಾದ್ರಿಪುರಂ ಪದವಿ ಕಾಲೇಜಿನ ಸಿ. ದಿವಿತ್‌ ಪಡೆದುಕೊಂಡರು.

ವಿಶ್ರಾಂತ ಎನ್‌.ಎಸ್‌.ಎಸ್‌. ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಬಿ.ಕೆ. ಶಿವಣ್ಣ, ಪ್ರೊ.ಎಂ. ರುದ್ರಯ್ಯ, ಪ್ರೊ.ಎಂ.ಬಿ. ಸುರೇಶ ಇದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ