ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪರಿಶ್ರಮಕ್ಕೆ ತಕ್ಕ ಪ್ರತಿಫಲ
ಭಾರತದ ಅಂತಃಶಕ್ತಿಯಾಗಿರುವ ಯುವಶಕ್ತಿ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಮುನ್ನಡೆದಲ್ಲಿ ಬಲಿಷ್ಠ ಭಾರತ ನಿರ್ಮಾಣ ಸುಲಭ ಸಾಧ್ಯವಾಗಲಿದೆ. ಕಾಲೇಜು ಶಿಕ್ಷಣವು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಪದವಿ ಪೂರ್ವ ಮತ್ತು ಪದವಿ ಎರಡೂ ಅವಧಿಯಲ್ಲಿ ನಮ್ಮನ್ನು ನಾವೇ ಸ್ವಯಂ ವಿಮರ್ಶೆಗೆ ಒಳಪಡಿಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ. ಈ ವೇಳೆಯಲ್ಲಿ ಗುರುಹಿರಿಯ ಮಾರ್ಗದರ್ಶನದೊಂದಿಗೆ ಸ್ಪಷ್ಟವಾದ ಗುರಿಯತ್ತ ಸಾಗಬೇಕು. ಕೀಳರಿಮೆ ಬಿಟ್ಟು ಸತತ ಅಭ್ಯಾಸದಲ್ಲಿ ತೊಡಗಿದರೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದರು.ರ‍್ಯಾಂಕ್ ಪಡೆದವರು ಮಾತ್ರ ಬುದ್ದಿವಂತರು, ಕಡಿಮೆ ಅಂಕ ಪಡೆದವರು ದಡ್ಡರು ಎಂದು ಭಾವಿಸುವ ಅಗತ್ಯವಿಲ್ಲ.ವಿದ್ಯಾದೇವತೆ ಸರಸ್ವತಿ ಬಂಡೆಯಮೇಲೆ ಕುಳಿತಿರುವ ಚಿತ್ರ. ಬರೀ ಚಿತ್ರ ಮಾತ್ರವಲ್ಲ.ವಿದ್ಯಾರ್ಥಿ ದಿಸೆಯಲ್ಲಿ ಯಾರು ಬಂಡೆಯಂತೆ ದೃಢವಿಶ್ವಾಸವನ್ನು ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗುವರೋ ಅವರು ಸಾಧಕರಾಗುತ್ತಾರೆ ಎನ್ನುವುದನ್ನು ತೋರಿಸುತ್ತಿದೆ. ಗೂಗಲ್ ಇಂದು ಮಾಹಿತಿಯ ಕಣಜವಾಗಿದ್ದು ಕುಳಿತಲ್ಲಿಯೇ ಬೇಕಾದ ಮಾಹಿತಿ ಪಡೆದು ಗುರಿಮುಟ್ಟಬಹುದು ಎಂದರು.ಸಾಧಕರಾಗಲು ಯತ್ನಿಸಿ
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮರಿಸ್ವಾಮಿ ಮಾತನಾಡಿ, ನಗರದ ಉತ್ತಮ ಫಲಿತಾಂಶ ನೀಡಿದ ಕಾಲೇಜುಗಳಲ್ಲಿ ಗೋಲ್ಡನ್ ಗ್ಲೀಮ್ಸ್ ಕಾಲೇಜು ಮೊದಲ ಸಾಲಿನಲ್ಲಿದೆ.ಆಹ್ವಾನ ಹೆಸರಿನಲ್ಲಿ ನಡೆಯುತ್ತಿರುವ ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಿರುವ ನಿಮಗೆಲ್ಲಾ ಏಕಲವ್ಯ ಗುರುವಾಗಲಿ. ಋಣಾತ್ಮಕ ಚಿಂತನೆ ಬಿಟ್ಟು ಗುಣಾತ್ಮಕ ಚಿಂತನೆ ಮಾಡಿದರೆ ಖಂಡಿತವಾಗಿ ನೀವೆಲ್ಲಾ ಸಾಧಕರಾಗುತ್ತೀರಿ ಎಂದರು.
ಕಾರ್ಯಕ್ರಮದಲ್ಲಿ ಸಾಧನೆ ಮಾಡಿರುವ ಕಾಲೇಜಿನ ವಿದ್ಯಾರ್ಥಿಗಳನ್ನು, ಕಾರ್ಯಕ್ರಮಕ್ಕೆ ಬಂದು ಯಶಸ್ಸಿಗೆ ಕಾರಣರಾದ ಗಣ್ಯರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಬಾಹುಬಲಿ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ರಾಜಣ್ಣ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಾಣಿಜ್ಯಮಂಡಳಿ ಅಧ್ಯಕ್ಷ ಡಾ.ಎಸ್.ಮುರಳೀಧರ್,ಕಾಲೇಜಿನ ಪ್ರಾಂಶುಪಾಲ ಸಿ.ಎಂ.ಮುನಿಕೃಷ್ಣ,ವಕೀಲರಾದ ಮಂಜುನಾಥರೆಡ್ಡಿ,ಸೃಜನ್ ಗಾಂಧಿ, ಭೋಧಕ, ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು ಇದ್ದರು.