ವಿದ್ಯಾರ್ಥಿಗಳು ಜಿಲ್ಲೆಯ ಇತಿಹಾಸ ಅರಿಯಲಿ: ಶಾಸಕ ದಿನಕರ ಶೆಟ್ಟಿ

KannadaprabhaNewsNetwork | Published : Dec 21, 2024 1:17 AM

ಸಾರಾಂಶ

ಜಿಲ್ಲೆಯ ಸಮಗ್ರ ಇತಿಹಾಸವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಇದರಿಂದ ಇತಿಹಾಸದ ಅಭಿಮಾನದ ಕ್ಷಣಗಳ ಅರಿವಿನ ಜತೆಗೆ ಭವಿಷ್ಯದ ಪ್ರೇರಣೆಯೂ ಸಿಗುತ್ತದೆ.

ಕುಮಟಾ: ಉತ್ತರ ಕನ್ನಡ ಜಿಲ್ಲೆಗೂ ಅತ್ಯಂತ ಶ್ರೀಮಂತ ಇತಿಹಾಸವಿದೆ. ಜಿಲ್ಲೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು ಸದಾ ಸ್ಮರಣೀಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ಐಕ್ಯುಎಸಿ, ಇತಿಹಾಸ ವಿಭಾಗ, ಇತಿಹಾಸ ಸಂಘ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಾತ್ರ ವಿಷಯವಾಗಿ ಆಯೋಜಿಸಿದ್ದ ಇತಿಹಾಸ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಸಮಗ್ರ ಇತಿಹಾಸವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಇದರಿಂದ ಇತಿಹಾಸದ ಅಭಿಮಾನದ ಕ್ಷಣಗಳ ಅರಿವಿನ ಜತೆಗೆ ಭವಿಷ್ಯದ ಪ್ರೇರಣೆಯೂ ಸಿಗುತ್ತದೆ ಎಂದರು.

ನಮ್ಮ ಉತ್ತರ ಕನ್ನಡ ಜಿಲ್ಲೆ ಬಹಳ ಹಿಂದುಳಿದ ಜಿಲ್ಲೆಯಾಗಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನವನ್ನು ನಿರಂತರ ಮಾಡುತ್ತಿದ್ದೇವೆ. ಬೆಳಗಾವಿ ಅಧಿವೇಶನದಲ್ಲೂ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ನಾನು ಯಾವತ್ತೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಗತ್ಯತೆಗಳಿಗೆ ಮೊದಲ ಆದ್ಯತೆ ನೀಡಿದ್ದು, ಸರ್ವತೋಮುಖ ಅಭಿವೃದ್ಧಿಯ ಕನಸು ಸಾಕಾರಗೊಳ್ಳಬೇಕಿದೆ ಎಂದರು. ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ, ಸಂಚಾಲಕ ಪ್ರೊ. ಪ್ರಮೋದ ಹೆಗಡೆ, ಸಹಸಂಚಾಲಕ ಪ್ರೊ. ಕೃಷ್ಣ ನಾಯ್ಕ, ಡಾ. ಸಂದೇಶ ಎಚ್., ಎಸ್.ವೈ. ಮುಗುಳಿ, ಶ್ರೀಧರ ಎಸ್. ಹೆಗಡೆ, ಡಾ. ಗೀತಾ ನಾಯ್ಕ, ಡಾ. ವಿ.ಎಂ. ನಾಯ್ಕ, ಡಾ. ಐ.ಕೆ. ನಾಯ್ಕ, ಪ್ರೊ. ವಿನಾಯಕ ನಾಯಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಣೇಶ ಪಟಗಾರ, ಮಮತಾ ಮರಾಠಿ, ವಿಕಾಸ ನಾಯ್ಕ ಇತರರು ಇದ್ದರು. ಸಮ್ಮೇಳನದಲ್ಲಿ ತಾಲೂಕಿನ ರಾಜಕೀಯ ಇತಿಹಾಸ, ತಾಲೂಕಿನ ಮೂರ್ತಿ ಶಿಲ್ಪ ಹಾಗೂ ವಾಸ್ತುಶಿಲ್ಪ, ಉತ್ತರ ಕನ್ನಡದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ತಾಲೂಕಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು. ಲಕ್ಷ್ಮಣ ಪಟಗಾರ ಅವರಿಂದ ಜಾದೂ ಪ್ರದರ್ಶನ ಗಮನ ಸೆಳೆಯಿತು. 31ರಂದು ನಾಲ್ಕನೇ ತ್ರೈಮಾಸಿಕ ಅಂಚೆ ಅದಾಲತ್

ಕಾರವಾರ: ಕಾರವಾರ ಅಂಚೆ ವಿಭಾಗದ ಪ್ರಸಕ್ತ ಸಾಲಿನ 4ನೇ ತ್ರೈಮಾಸಿಕ ಅಂಚೆ ಅದಾಲತ್‌ ಅಂಚೆ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಡಿ. 31ರಂದು ಮಧ್ಯಾಹ್ನ 3 ಗಂಟೆಗೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿದೆ.ದೂರು ಮತ್ತು ಸಲಹೆಗಳನ್ನು ಅಂಚೆ ಅಧೀಕ್ಷಕರು, ಕಾರವಾರ ವಿಭಾಗ ಕಾರವಾರ ಇವರ ಕಾರ್ಯಾಲಯಕ್ಕೆ ಡಿ. 30ರೊಳಗಾಗಿ ತಲುಪುವಂತೆ ಕಳುಹಿಸಬೇಕು. ಈ ವಿಭಾಗೀಯ ಅಂಚೆ ಅದಾಲತ್‌ನಲ್ಲಿ ಸಾಮಾನ್ಯ ಮಟ್ಟದ ಅಂದರೆ ಈ ವಿಭಾಗದ ಅಂಚೆ ಕಚೇರಿಗಳಿಂದ ಈಗ ಕೊಡುತ್ತಿರುವ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಅವುಗಳನ್ನು ಸುಧಾರಿಸುವ ಸಲಹೆ ಸೂಚನೆಗಳನ್ನು ಚರ್ಚಿಸಲಾಗುವುದು ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article