ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿಸಿ: ಎಸ್.ಎಚ್.ಪೂರ್ಣೇಶ್

KannadaprabhaNewsNetwork |  
Published : Feb 08, 2026, 02:15 AM IST
೦೫ಬಿಹೆಚ್‌ಆರ್ ೬: ಬಾಳೆಹೊನ್ನೂರಿನಲ್ಲಿ ನಡೆದ ಹೋಬಳಿ ಕಸಾಪ ಸದಸ್ಯರ ಸಭೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿದರು. ಸಂತೋಷ್‌ಕುಮಾರ್, ವೆಂಕಟೇಶ್, ಸತೀಶ್ ಅರಳೀಕೊಪ್ಪ, ಎಂ.ವಿ.ಶ್ರೀನಿವಾಸ, ನಂದಿನಿ ಆಲಂದೂರು ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕಿನ ಬೆಳ್ಳೂರಿನಲ್ಲಿ ಫೆ.21, 22ರಂದು ನಡೆಯಲಿರುವ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಸಾಹಿತ್ಯಾಭಿಮಾನಿಗಳು ಅರ್ಥಪೂರ್ಣವಾಗಿಸಿ ಯಶಸ್ವಿಗೊಳಿಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.

ತಾಲೂಕು ಕಸಾಪದ ಬಾಳೆಹೊನ್ನೂರು ಹೋಬಳಿ ಸದಸ್ಯರ ಸಭೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು:

ಎನ್.ಆರ್.ಪುರ ತಾಲೂಕಿನ ಬೆಳ್ಳೂರಿನಲ್ಲಿ ಫೆ.21, 22ರಂದು ನಡೆಯಲಿರುವ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಸಾಹಿತ್ಯಾಭಿಮಾನಿಗಳು ಅರ್ಥಪೂರ್ಣವಾಗಿಸಿ ಯಶಸ್ವಿಗೊಳಿಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.ಪಟ್ಟಣದಲ್ಲಿ ನಡೆದ ತಾಲೂಕು ಕಸಾಪದ ಬಾಳೆಹೊನ್ನೂರು ಹೋಬಳಿ ಸದಸ್ಯರ ಸಭೆಯಲ್ಲಿ ಮಾತನಾಡಿ,ಕಳೆದ ಹಲವು ವರ್ಷಗಳ ನಂತರ ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದು, ತಾಲೂಕಿನ ಕಸಬಾ ಮತ್ತು ಬಾಳೆ ಹೊನ್ನೂರು ಹೋಬಳಿ ಸಮಸ್ತ ಕನ್ನಡಾಭಿಮಾನಿ, ಸಾಹಿತ್ಯಾಭಿಮಾನಿಗಳ ಸಹಕಾರ ನಿರೀಕ್ಷಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸಾಹಿತ್ಯದ ಕಾರ್ಯಕ್ರಮ ಮನೆ ಮನೆಗೆ ತಲುಪುತ್ತದೆ ಎಂಬ ಆಶಯದೊಂದಿಗೆ ಸಮ್ಮೇಳನವನ್ನು ಹಳ್ಳಿ ಭಾಗದಲ್ಲಿ ಸಂಘಟಿಸಲಾಗಿದೆ ಎಂದರು.

ಸಮ್ಮೇಳನಕ್ಕಾಗಿ ಈಗಾಗಲೇ ಸಿದ್ಧತೆ ಆರಂಭಗೊಂಡಿದ್ದು, ಬೆಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಮ್ಮೇಳನದ ಯಶಸ್ವಿಗೆ ತಯಾರಿ ನಡೆಸಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಬೆಮ್ಮನೆ ದಯಾನಂದ ಅವರನ್ನು ಆಯ್ಕೆ ಮಾಡಿ ಈಗಾಗಲೇ ಅಧಿಕೃತ ಆಹ್ವಾನ ನೀಡಲಾಗಿದೆ. ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿ ಗಳನ್ನು ರಚಿಸಿದ್ದು, ಎಲ್ಲರೂ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಫೆ.21ರಂದು ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮೂಲಕ ಚಾಲನೆ ದೊರೆಯಲಿದ್ದು, ಬೆಳ್ಳೂರಿನಿಂದ ಹಳ್ಳಿಬೈಲಿನವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸಾಹಿತಿ ಮುನಿರಾಜ ರೆಂಜಾಳ ಭಾಗವಹಿಸಲಿದ್ದಾರೆ. ಮೊದಲ ದಿನ ಉದ್ಘಾಟನಾ ಕಾರ್ಯಕ್ರಮದ ನಂತರ ಜಾನಪದ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.22ರಂದು ಬೆಳಿಗ್ಗೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಯೋಧರ ಗೋಷ್ಠಿ ನಡೆಯಲಿದ್ದು, ಈ ಗೋಷ್ಠಿಯಲ್ಲಿ ಶೃಂಕೋನ ನಿವೃತ್ತ ಯೋಧರ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನಿವೃತ್ತ ಯೋಧ ಎಚ್.ಡಿ. ಸುರೇಶ್ ಉಪನ್ಯಾಸ, ಶೃಂಗೇರಿ ಎ.ಎಸ್.ನಯನಾ ಮಾತನಾಡಲಿದ್ದಾರೆ.ಕೃಷಿ ಗೋಷ್ಠಿ ನಡೆಯಲ್ಲಿ ಭದ್ರಾ ಕಾಡಾ ಮಾಜಿ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹಾಗೂ ಸಾವಯವ ಕೃಷಿ ಬಗ್ಗೆ ಗಣೇಶ್ ಕೊನೋಡಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸಕಿ ಹರಿಣಾಕ್ಷಿ ಶೃಂಗೇರಿ, ರೇಖಾ ನಾಗರಾಜ್ ರಾವ್, ಶಬನಾ ಅಂಜುಮ್ ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್, ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್, ತಾಲೂಕು ಕಜಾಪ ಅಧ್ಯಕ್ಷ ಸತೀಶ್ ಅರಳೀಕೊಪ್ಪ, ಕಾರ್ಯದರ್ಶಿ ನಂದಿನಿ ಆಲಂದೂರು, ಆಡುವಳ್ಳಿ ಗ್ರಾಪಂ ಅಧ್ಯಕ್ಷ ಎಂ.ವಿ. ಶ್ರೀನಿವಾಸಗೌಡ, ಹೋಬಳಿ ಕಸಾಪ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ, ಕಾಫಿ ಬೆಳೆಗಾರ ಬಿ.ಎಸ್.ಸಾಗರ್ ಪಟೇಲ್, ಪಿಎಸಿಎಸ್ ಉಪಾಧ್ಯಕ್ಷ ಕೋಕಿಲಮ್ಮ, ಪ್ರಮುಖರಾದ ಎ.ಆರ್.ಲತಾ, ಶ್ರೀಕೃಷ್ಣಭಟ್, ಎಚ್.ಎನ್.ವಿಶ್ವನಾಥ್, ಶೇಖರ್ ಇಟ್ಟಿಗೆ, ಚೇತನ್ ಜಕ್ಕಣಕ್ಕಿ ಮತ್ತಿತರರು ಹಾಜರಿದ್ದರು.೦೫ಬಿಹೆಚ್‌ಆರ್ ೬:

ಬಾಳೆಹೊನ್ನೂರಿನಲ್ಲಿ ನಡೆದ ಹೋಬಳಿ ಕಸಾಪ ಸದಸ್ಯರ ಸಭೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿದರು. ಸಂತೋಷ್‌ಕುಮಾರ್, ವೆಂಕಟೇಶ್, ಸತೀಶ್ ಅರಳೀಕೊಪ್ಪ, ಎಂ.ವಿ.ಶ್ರೀನಿವಾಸ, ನಂದಿನಿ ಆಲಂದೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ