ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಯಬೇಕು: ವಿಧುಶೇಖರ ಶ್ರೀ

KannadaprabhaNewsNetwork |  
Published : Aug 05, 2025, 12:30 AM IST
್ಿಿ | Kannada Prabha

ಸಾರಾಂಶ

ಶೃಂಗೇರಿ, ವಿದ್ಯಾರ್ಥಿಗಳಿಗೆ ವಿನಯ, ವಿವೇಕ, ಉತ್ತಮ ಸಂಸ್ಕೃತಿ ಇರಬೇಕು. ವಿದ್ಯೆಯೊಂದಿಗೆ ಸಂಸ್ಕಾರ ಕಲಿಯಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥರು ಹೇಳಿದರು.

ಶ್ರೀ ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ಸಂಸ್ಕ್ರೃತೋತ್ಸವ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ವಿದ್ಯಾರ್ಥಿಗಳಿಗೆ ವಿನಯ, ವಿವೇಕ, ಉತ್ತಮ ಸಂಸ್ಕೃತಿ ಇರಬೇಕು. ವಿದ್ಯೆಯೊಂದಿಗೆ ಸಂಸ್ಕಾರ ಕಲಿಯಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥರು ಹೇಳಿದರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ಸಂಸ್ಕ್ರೃತೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿದ್ಯೆ ಜೊತೆ ಸಂಸ್ಕಾರ ಕಲಿತರೆ ಮಾತ್ರ ಕಲಿತ ವಿದ್ಯೆಗೆ ಬೆಲೆ ಬರುತ್ತದೆ. ಸಂಸ್ಕೃತ ಎಲ್ಲಾ ರೀತಿಯ ಜ್ಞಾನದ ಅಗರ ಎಂದರು.

ಆಧುನಿಕ ಯುಗದಲ್ಲಿ ಮನುಷ್ಯ ತನ್ನಲ್ಲಿರುವ ಅಪಾರ ಮೇಧಾಶಕ್ತಿಯಿಂದ ಯಾವುದನ್ನೆಲ್ಲ ಕಂಡುಹಿಡಿದರೂ ಕೂಡ ಆಧ್ಯಾತ್ಮಿಕ ಜ್ಞಾನಕ್ಕಾಗಿ ಭಾರತೀಯ ಆಧ್ಯಾತ್ಮ ಶಾಸ್ತ್ರವನ್ನೇ ಆಶ್ರಯಿಸಬೇಕಾಯಿತು. ಪರಂಪರಾಗತವಾದ ನಮ್ಮ ಭಾರತೀಯ ಶಾಸ್ತ್ರಗಳಲ್ಲಿ ಮಾತ್ರವೇ ಐಹಿಕ ಮತ್ತು ಪಾರಲೌಕಿಕ ಶ್ರೇಯಸ್ಸನ್ನು ಪ್ರತಿಪಾದಿಸಲಾಗಿದೆ.

ಪ್ರತಿಯೊಬ್ಬ ವ್ಯಕ್ತಿ ಪರಮಪುರುಷಾರ್ಥದ ಸಾಧನೆ ಸಂಸ್ಕೃತ ಮತ್ತು ಶಾಸ್ತ್ರಗಳ ಅಧ್ಯಯನದ ಜೊತೆಗೆ ಸಮಾಜದಲ್ಲಿ ಭಾರತೀಯ ವಿದ್ಯೆಗಳನ್ನು ಪ್ರಚಾರ ಮಾಡುವ ಕಾರ್ಯ ಕೈಗೊಳ್ಳಬೇಕು. ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿ ಹೆಸರಿನಲ್ಲಿ ಶಾಸ್ತ್ರದ ಉನ್ನತ ಅಧ್ಯಯನಕ್ಕೆ ಆರಂಭಗೊಳ್ಳುತ್ತಿರುವ ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ರೂಪದಲ್ಲಿ ಪರಿಸರ ಇನ್ನಷ್ಟು ಅಭಿವೃದ್ದಿಯಾಗಲಿ ಎಂದು ಆಶೀರ್ವಚಿಸಿದರು.

ಸಂಸ್ಕ್ರೃತೋತ್ಸವ ಕಾರ್ಯಕ್ರಮದಲ್ಲಿ ವಾಕ್ಯಾರ್ಥ ಭಾರತಿ ಎಂಬ ಶೋಧ ಪತ್ರಿಯನ್ನು ಜಗದ್ಗುರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ನಿರ್ದೇಶಕ ಪ್ರೊ.ಹಂಸಧರ ಝಾ, ಪ್ರೊ.ಚಂದ್ರಕಾಂತ್, ಪ್ರೊ.ಹರಿಪ್ರಸಾದ್ ಮತ್ತಿತರರು ಇದ್ದರು.

3 ಶ್ರೀ ಚಿತ್ರ 1-ಶೃಂಗೇರಿ ಕೇಂದ್ರಿಯ ಸಂಸ್ಕ್ರೃತ ವಿಶ್ವವಿದ್ಯಾಲಯದ ಶ್ರೀ ಭಾರತೀ ತೀರ್ಥ ಶಾಸ್ತ್ರಸಮುತ್ಕರ್ಷ ಕೇಂದ್ರ ಸಂಸ್ಕ್ರೃತೋತ್ಸವ ಸಮಾರಂಭದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ವಾಕ್ಯಾರ್ಥ ಶೋದ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ