ಯೋಗಕ್ಕೆ ಭಾರತವೇ ವಿಶ್ವ ಗುರುವಾಗಿದೆ. ಯೋಗಾಭ್ಯಾಸದಲ್ಲಿ ನರಗುಂದದ ನಾದಬ್ರಹ್ಮಾನಂದರು ವಿಶ್ವಮಾನ್ಯವಾಗಿದ್ದರು. ಅವರಿಗೆ ಅಮೆರಿಕಾದ ಅಧ್ಯಕ್ಷರ ಮನೆಗೆ ನೇರ ಪ್ರವೇಶವಿತ್ತು. ಆದ್ದರಿಂದ ಯೋಗಕ್ಕೂ ನರಗುಂದಕ್ಟೂ ಅವಿನಾಭಾವ ಸಂಬಂಧವಿದೆ. ಎಲ್ಲಾ ವಿದ್ಯಾರ್ಥಿಗಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನರಗುಂದ: ಯೋಗಕ್ಕೆ ಭಾರತವೇ ವಿಶ್ವ ಗುರುವಾಗಿದೆ. ಯೋಗಾಭ್ಯಾಸದಲ್ಲಿ ನರಗುಂದದ ನಾದಬ್ರಹ್ಮಾನಂದರು ವಿಶ್ವಮಾನ್ಯವಾಗಿದ್ದರು. ಅವರಿಗೆ ಅಮೆರಿಕಾದ ಅಧ್ಯಕ್ಷರ ಮನೆಗೆ ನೇರ ಪ್ರವೇಶವಿತ್ತು. ಆದ್ದರಿಂದ ಯೋಗಕ್ಕೂ ನರಗುಂದಕ್ಟೂ ಅವಿನಾಭಾವ ಸಂಬಂಧವಿದೆ. ಎಲ್ಲಾ ವಿದ್ಯಾರ್ಥಿಗಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಆನಂತರ ಮಾತನಾಡಿದರು. ನರಗುಂದದಲ್ಲಿ ಹುಟ್ಟಿ ಋಷಿಕೇಷವನ್ನು ಕರ್ಮಭೂಮಿಯನ್ನಾಗಿಸಿ ಯೋಗದಲ್ಲಿ ಅಪಾರ ಪಾಂಡಿತ್ಯ ಹೊಂದಿದರು. ವಿಶ್ವಕ್ಕೆ ಯೋಗಶಕ್ತಿ ಮಹತ್ವ ಸಾರಿದ ಯೋಗ ವ್ಯಕ್ತಿಯಾಗಿದ್ದರು. ಅವರು ಅಮೆರಿಕಾದ ಅಧ್ಯಕ್ಷರ ಮನೆಯಲ್ಲಿ ಯೋಗದ ಪರೀಕ್ಷೆ ಸಂದರ್ಭದಲ್ಲಿ ನಿರ್ವಾತ ಹೊಂದಿದ ಪ್ರತ್ಯೇಕ ಪೆಟ್ಟಿಗೆಗಳಲ್ಲಿ ನಾದ ಬ್ರಹ್ಮಾನಂದರು ಹಾಗೂ ಮಂಗವನ್ನು ಇಟ್ಟಾಗ ಮಂಗ ಸಾಯುತ್ತದೆ. ನಾದಬ್ರಹ್ಮಾನಂದರು ಯೋಗ ಶಕ್ತಿಯಿಂದ ಬದುಕುತ್ತಾರೆ. ಇದೇ ಅವರು ರೂಢಿಸಿಕೊಂಡ ಯೋಗಶಕ್ತಿಗೆ ಸಾಕ್ಷಿಯಾಗಿದೆ. ಯೋಗ ದೇಹದ ಮೇಲೆ ಎಂದೂ ದುಷ್ಪರಿಣಾಮ ಬೀರದು. ಜಿಮ್‌ಗೆ ಹೋಗುವುದು ದೇಹದ ಆಕರ್ಷಣೆಗೋ, ಸಿನಿಮಾ ಧಾರಾವಾಹಿಗಳಲ್ಲಿ ಅಂಗಾಂಗ ಪ್ರದರ್ಶನಕ್ಕೆ ಮೀಸಲಾಗುತ್ತದೆ. ಆದರೆ ಯೋಗ ದೇಹ ಹಾಗೂ ಮನಸ್ಸನ್ನು ಶುದ್ಧಗೊಳಿಸುತ್ತದೆ. ಆದ್ದರಿಂದ ಎಲ್ಲರೂ ಯೋಗ ಮಾಡಿ ರೋಗದಿಂದ ದೂರವಿರಬೇಕು. ತಾಲೂಕಿನ ಎಲ್ಲ ಶಾಲೆಗಳಲ್ಲಿ ವಾರಕ್ಕೆ ಒಂದು -ಎರಡೂ ದಿನವಾದರೂ ಯೋಗ ಮಾಡಿಸಲು ವ್ಯವಸ್ಥೆ ರೂಪಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಂದ, ಅಧಿಕಾರಿಗಳಿಂದ, ಶಿಕ್ಷಕರಿಂದ ಯೋಗ ಪ್ರದರ್ಶನ ನಡೆಯಿತು. ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಂಗೀತ ಶಿಕ್ಷಕ ಪುಟ್ಟರಾಜರಿಂದ ಯೋಗ ಗೀತೆ ಹಾಡಲಾಯಿತು. ಸಮಾರಂಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ನಿರ್ದೇಶಕರಾದ ಜಿ.ಬಿ. ಕುಲಕರ್ಣಿ, ಸಿ.ಎಸ್. ಸಾಲೂಟಗಿಮಠ, ಎಸ್.ಎಸ್. ಪಾಟೀಲ, ವಿಜಯಕುಮಾರ್ ಬೇಲೇರಿ, ಪುರಸಭೆ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ತಹಸೀಲ್ದಾರ್ ಶ್ರೀಶೈಲ ತಳವಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ್ ಹೂಗಾರ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಬಿ.ಎಂ. ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಬ್ಯಾಳಿ , ಪವಾಡೆಪ್ಪ ವಡ್ಡಿಗೇರಿ, ಹನಮಂತ ಹವಾಲ್ದಾರ, ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಇದ್ದರು. ಕನ್ನಡ ಉಪನ್ಯಾಸಕ ಡಾ. ಬಸವರಾಜ ಹಲಕುರ್ಕಿ ಸ್ವಾಗತಿಸಿದರು. ಕೋಆರ್ಡಿನೇಟರ್ ಪ್ರೇರಣಾ ಪಾತ್ರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.