ವಿದ್ಯಾರ್ಥಿಗಳು ಆರೋಗ್ಯಕರ ಬದುಕಿಗೆ ಆದ್ಯತೆ ನೀಡಿ

KannadaprabhaNewsNetwork |  
Published : Sep 10, 2025, 01:03 AM IST
ವಿದ್ಯಾರ್ಥಿಗಳು ಕ್ರೀಡೆ, ಕಲೆ, ಸಾಹಿತ್ಯಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ : ಶಾಸಕ ಕೆ.ಷಡಾಕ್ಷರಿ. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಓದಿನ ಜೊತೆಗೆ ದೈಹಿಕ ಸದೃಢತೆ ಹಾಗೂ ಮಾನಸಿಕ ಸ್ಥಿರತೆ ಮತ್ತು ಆರೋಗ್ಯಕರ ಬದುಕಿಗೆ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ಕಟ್ಟಿಕೊಳ್ಳಬೇಕೆಂದು ತಿಪಟೂರಿನ ವಿಧಾನಸಭಾ ಕ್ಷೇತ್ರದ ಶಾಸಕ. ಕೆ.ಷಡಕ್ಷರಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ವಿದ್ಯಾರ್ಥಿಗಳು ಓದಿನ ಜೊತೆಗೆ ದೈಹಿಕ ಸದೃಢತೆ ಹಾಗೂ ಮಾನಸಿಕ ಸ್ಥಿರತೆ ಮತ್ತು ಆರೋಗ್ಯಕರ ಬದುಕಿಗೆ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ಕಟ್ಟಿಕೊಳ್ಳಬೇಕೆಂದು ತಿಪಟೂರಿನ ವಿಧಾನಸಭಾ ಕ್ಷೇತ್ರದ ಶಾಸಕ. ಕೆ.ಷಡಕ್ಷರಿ ತಿಳಿಸಿದರು.

ತಾಲೂಕಿನ ಕಲ್ಪತರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯೆಂಬುದು ಶಿಕ್ಷಣಾರ್ಥಿಗಳ ಬದುಕಿನ ಘಟ್ಟವನ್ನೇ ಬದಲಾಯಿಸುವ ಶಕ್ತಿಯನ್ನೊಂದಿದೆ. ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯಗಳಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ತಮ್ಮ ಮನದಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ವಿಕಾಸ ಮಾಡಿಕೊಳ್ಳತ್ತಾ ಆತ್ಮವಿಶ್ವಾಸದಿಂದ ಆಟೋಟಗಳಲ್ಲಿ ಭಾಗವಹಿಸುವ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ವೈಯಕ್ತಿಕ ಸಾಧನೆಗಾಗಿ ಕ್ರೀಡೆಗಳಲ್ಲಿ ಭಾಗವಹಿಸದೆ ದೇಶದ ಗೌರವವನ್ನು ಹೆಚ್ಚಿಸುವ ಹಾಗೂ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ವಿಕಾಸ ಮಾಡಿಕೊಳ್ಳುವತ್ತ ಮುಂದಾಗಬೇಕು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲೂ ಕ್ರೀಡೆಗಳು ಹೆಚ್ಚು ಸಹಕಾರಿಯಾಗುತ್ತವೆಂಬುದನ್ನು ಯುವಶಕ್ತಿ ಮನದಟ್ಟು ಮಾಡಿಕೊಡಬೇಕಾಗಿದೆ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಸೋಲು-ಗೆಲುವನ್ನು ಲೆಕ್ಕಿಸದೆ ಆಟವನ್ನು ಆಟಕ್ಕಾಗಿಯೇ ಆಡುತ್ತಾ, ಗೆಲುವು ಸಾದಿಸುತ್ತ ಈ ಮೂಲಕ ಸರ್ಕಾರ, ಸಂಘ ಸಂಸ್ಥೆಗಳಿಂದ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಓದಿಗಿಂತ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಆಸಕ್ತರಾಗಿ ಅವುಗಳಲ್ಲಿ ತೊಡಗಿಸಿಕೊಂಡು ಕ್ರೀಡೆಗಳ ಮಹತ್ವವನ್ನು ಎತ್ತಿಹಿಡಿಯಬೇಕು. ಮಾನಸಿಕ ಗೊಂದಲಗಳು ಹಾಗೂ ಉದಾಸೀನ, ನಿರ್ಲಿಪ್ತ ಚಿಂತನೆಗಳಿಂದ ಹೊರಬರಲು ಹೆಚ್ಚು ಸಹಾಯಕವಾಗುವಂತೆ ನೋಡಿಕೊಳ್ಳಬೇಕಾಗಿದೆ. ಬಹುಮಾನ, ಪ್ರಶಸ್ತಿಗಳಿಗಾಗಿಯೇ ಕ್ರೀಡಾಚಟುವಟಿಕೆಗಳನ್ನು ಬಳಸಿಕೊಳ್ಳದೆ ಆತ್ಮಸ್ಥೈರ್ಯದಿಂದ ತಮ್ಮ ವರ್ಚಸ್ಸನ್ನೇ ಇಮ್ಮಡಿಗೊಳಿಸಿಕೊಳ್ಳುವಂತೆ ಎಚ್ಚರಿಕೆ ವಹಿಸಬೇಕಾಗಿದೆ. ಇಂದು ತಾಲ್ಲೂಕಿನ ಎಲ್ಲ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡೆಗಳನ್ನು ಆಹ್ಲಾದಕರವಾಗಿ ಆನಂದಿಸುತ್ತಾ ಕ್ರೀಡಾಲೋಕವನ್ನೇ ಅನಾವರಣಗೊಳಿಸುವಂತಹ ವಾತಾವರಣವನ್ನೇ ಸೃಷ್ಠಿಮಾಡಲಾಗಿದೆ ಎಂದು ತಿಳಿಸಿದರು. ನಗರಸಭಾ ಸದಸ್ಯ ಯೋಗೀಶ್ ಮಾತನಾಡಿ, ಕ್ರೀಡೆಗಳಲ್ಲಿ ಗಂಡು, ಹೆಣ್ಣು ಮಕ್ಕಳೆಂಬ ತಾರತಮ್ಯವಿಲ್ಲದೆ ಭಾಗವಹಿಸಬೇಕು. ಸಾಧನೆ ಮಾಡುವ ದೃಢವಾದ ಸಂಕಲ್ಪ ಮಾಡಿಕೊಂಡು ಉತ್ಸಾಹದಿಂದ ಆಟವಾಡುವ ಮನೋಭೂಮಿಕೆಯನ್ನು ಸಿದ್ದಪಡಿಸಿಕೊಂಡು ಅದರಂತೆ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಎಂ.ಡಿ ಶಿವಕುಮಾರ್ ಮಾತನಾಡಿ ಈ ಬಾರಿ ಟೈಮ್ಸ್ ಕಾಲೇಜಿನವರು ಉಸ್ತುವಾರಿ ವಹಿಸಿಕೊಂಡು ಸುಸೂತ್ರವಾಗಿ ನಡೆಸುತ್ತಿದ್ದು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಸಮಾರಂಭದಲ್ಲಿ ತುಮಕೂರು ಜಿಲ್ಲಾ ಉಪನಿರ್ದೇಶಕರ ಕಚೇರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಬಸವರಾಜು, ಪ್ರಾಂಶುಪಾಲ ಪರಶಿವಮೂರ್ತಿ, ಕೆ.ಎನ್.ರೇಣುಕಯ್ಯ, ಟೈಮ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಂಗಾಧರ್, ಆಡಳಿತಾಧಿಕಾರಿ ಅನೂಪ್, ಪ್ರದೀಪ್, ಸಚ್ಚಿದಾನಂದ ಮೂರ್ತಿ, ಚಂದ್ರಶೇಖ ಷಡಾಕ್ಷರಿ, ಭೈರೇಶ್, ಗೋಪಾಲಸ್ವಾಮಿ, ಕುಮಾರಸ್ವಾಮಿ, ಜಿ.ಸಿ.ಚನ್ನೇಗೌಡ ಹಾಗೂ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಕ್ರೀಡಾಪಟುಗಳು ಭಾಗವಹಿಸಿದ್ದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ