ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿ, ಯೋಧರು ದೇಶದ ಗಡಿ ಕಾಯುತ್ತಿದ್ದರೆ, ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಕೂಡಾ ಸಮಾಜವನ್ನು ಕಾಯುವ ಯೋಧರಂತೆ ಎಂದರು.
ಮಹಾತ್ಮ ಗಾಂಧಿಯವರ ಮಹಾತ್ವಕಾಂಕ್ಷೆಯ ಎನ್‌ಎಸ್‌ಎಸ್ ಶಿಬಿರವು ದೇಶದಾದ್ಯಂತ ಕೋಟ್ಯಂತರ ನಾಯಕರನ್ನು ಸೃಷ್ಟಿಸಿದೆ. ನಾಯಕತ್ವವು ಸುಖಾ ಸುಮ್ಮನೆ ಬರುವಂತಹದ್ದಲ್ಲ. ಅದಕ್ಕಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡಾ ಗೌರವಿಸುವ ಪ್ರೀತಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.ಗ್ರಾಮ ಸ್ವರಾಜ್ಯದ ಕಲ್ಪನೆಯೆ ಅತ್ಯಂತ ಸುಂದರವಾದದ್ದು. ನಗರ ಪ್ರದೇಶದ ಜನರಿಗಿಂತ ಅತಿ ಹೆಚ್ಚು ಸೌಲಭ್ಯ ವಂಚಿತರಾಗಿರುವ ಗ್ರಾಮೀಣ ಜನರ ಬಳಿಗೆ ತೆರಳಿ ಅವರಿಗೆ ಸೇವೆ ಒದಗಿಸಬೇಕು. ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಗ್ರಾಮೀಣರ ಜೀವನದ ಬಗೆಗೆ ಗೌರವ ಬರುವ ರೀತಿಯ ಶಿಕ್ಷಣ ಕೊಡಬೇಕಾಗಿದೆ. ಇಂತಹ ಶಿಕ್ಷಣವನ್ನು ಈ ಶಿಬಿರದ ಮೂಲಕ ಕಲಿಯು ಅತ್ಯುತ್ತಮ ಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಪಕ ಬಿ.ಎ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಡಾ.ಜಯಕೀರ್ತಿ, ಕೆಡಿಪಿ ಸದಸ್ಯ ಮಲ್ಲಿಕಾರ್ಜುನ್, ವಿಎಸ್‌ಎಸ್‌ಎನ್ ನಿರ್ದೇಶಕ ಅಡಿಕೆ ಸ್ವಾಮಿಗೌಡ, ಮಹೇಶ್, ಗ್ರಂಥಾಲಯ ಅಧಿಕಾರಿ ಮಂಜುನಾಥ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಬೂವನಹಳ್ಳಿ ಪ್ರಕಾಶ್, ಪುಷ್ಪಲತಾ, ಕಿರಣ್, ಆನಂದ್, ಉಪನ್ಯಾಸಕರಾದ ಟಿ.ಜೆ.ದೀಪಾ, ಉಮಾ, ಕಾಲೇಜಿನ ಆಡಳಿತ ವರ್ಗದ ಶಿವರಾಮು, ಮಂಜುನಾಥ್, ಅಭಿಲಾಷ್, ನಂದಿನಿ ಸೇರಿದಂತೆ ಹಲವರಿದ್ದರು.