ಹೊನ್ನಾವರ: ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲಿ ಇರುವ ಅಂತಃಶಕ್ತಿ. ಅದನ್ನು ಗುರುತಿಸುವ ಕೆಲಸವಾಗಬೇಕು. ಪ್ರತಿಭೆಯನ್ನು ಅನಾವರಣ ಮಾಡಲು ಸೂಕ್ತ ವೇದಿಕೆ ಸಿಗಬೇಕು ಎಂದು ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಮುಜುಗರ ಸ್ವಭಾವವನ್ನು ಬೆಳೆಸಿಕೊಳ್ಳಬಾರದು. ಪ್ರತಿಭಾ ಪುರಸ್ಕಾರಗಳಿಂದ ವಿದ್ಯಾರ್ಥಿಗಳು ಪ್ರೇರಣೆಯನ್ನು ಹೊಂದಬೇಕು. ವಿದ್ಯಾರ್ಥಿಗಳು ಸಮಾಜಮುಖಿಗಳಾಗಬೇಕು. ಹಿರಿಯರನ್ನು ಗೌರವಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಜನರು ಹಾಕುವ ಬಟ್ಟೆಯಿಂದ ಯಾರನ್ನು ಅಳೆಯಬಾರದು. ಪಾಲಕರ ಬಗ್ಗೆ ಹೆಮ್ಮೆಯನ್ನು ಇಟ್ಟುಕೊಳ್ಳಿ ಎಂಬ ಕಿವಿಮಾತನ್ನು ಹೇಳಿದರು.
ಎಂಪಿಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ ಮಾತನಾಡಿ, ದೇವರು ಪ್ರತಿಭೆಯನ್ನು ಎಲ್ಲರಿಗೂ ನೀಡಿರುತ್ತಾನೆ. ಅದನ್ನು ಗುರುತಿಸುವ ಕೆಲಸವಾಗಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರತಿಭಾ ಪುರಸ್ಕಾರಗಳು ಕಾರಣವಾಗುತ್ತದೆ ಎಂದರು.ಇದೇ ವೇಳೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಪಡೆದ ಬಾಲಪ್ರತಿಭೆಗಳಾದ ಸ್ವರಶ್ರೀ ಗುರುರಾಜ್ ಹೆಗಡೆ ಹಾಗೂ ಆಶ್ರೀತ್ ಪ್ರಸನ್ನ ಶೇಟ್ ಅವರನ್ನು ಸನ್ಮಾನಿಸಲಾಯಿತು.
ಶ್ರಾವಣಿ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟ ಸಲಹೆಗಾರ ಶ್ರೀರಾಮ್ ಭಟ್ ಸ್ವಾಗತಿಸಿದರು. ಉಪನ್ಯಾಸಕ ರಾಮ್ ಅವಬ್ರತ ವಂದಿಸಿದರು. ಉಪನ್ಯಾಸಕರಾದ ಹೇಮಾ ಭಟ್ ಹಾಗೂ ಎಂ.ಎನ್. ಅಡಿಗುಂಡಿ ನಿರೂಪಿಸಿದರು.