ಶಿಗ್ಗಾಂವಿ: ಇಂದಿನ ಯುವಕರೇ ನಾಳಿನ ಪ್ರಜೆಗಳಾಗಬೇಕಾದರೆ ಟಿವಿ, ಮೊಬೈಲ್, ವಾಟ್ಸಾಪ್, ಫಬ್ಬಜೀ, ದುಶ್ಚಟದಿಂದ ಮುಕ್ತರಾದರೆ ಮಾತ್ರ ಆದರ್ಶ ವಿದ್ಯಾರ್ಥಿಗಳು ಆಗಬಹುದು ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.
ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ರಂಭಾಪುರಿ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಎನ್.ಎಸ್.ಎಸ್. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಎನ್.ಎಸ್.ಎಸ್. ಯೋಜನೆಯ ಕೆಲ ಉದ್ದೇಶಗಳನ್ನು ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಅಳವಡಿಸಿಕೊಂಡರೆ ಕ್ಷೇತ್ರ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ, ದೇಶದ ಏಕ್ಯತೆ ಕಾಪಾಡಲು ಮತ್ತು ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ರಾಷ್ಟ್ರೀಯ ಸೇವಾ ಯೋಜನೆ ಬಹಳ ಉಪಕಾರಿಯಾಗಲಿದೆ ಎಂದರು.
ಪ್ರಾಚಾರ್ಯ ಎಫ್.ಎಸ್. ಶಿವಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶ ಮಹಾತ್ಮ ಗಾಂಧೀಜಿಯವರದಾಗಿತ್ತು. ಅದನ್ನು ಭಾರತ ಸರ್ಕಾರ ಕಾರ್ಯರೂಪಕ್ಕೆ ತಂದು ಗಾಂಧೀಜಿಯವರ ಕನಸು ನನಸು ಮಾಡಿದೆ ಎಂದರು.ಸಾನ್ನಿಧ್ಯವಹಿಸಿ ಸಂಗನಬಸವ ಶ್ರೀಗಳು ವಿರಕ್ತಮಠ ಶಿಗ್ಗಾಂವಿ ಆಶೀರ್ವದಿಸಿದರು. ವೇದಮೂರ್ತಿ ರೇವಣಸಿದ್ದಯ್ಯ ಹಿರೇಮಠ ಸಮ್ಮುಖ, ರಂಭಾಪುರಿ ಸಂಸ್ಥೆ ಕಾರ್ಯದರ್ಶಿ ಎಸ್.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ನಿರ್ದೇಶಕ ಪ್ರೊ. ಪಿ.ಸಿ. ಹಿರೇಮಠ, ಗ್ರಾಪಂ.ಅಧ್ಯಕ್ಷೆ ಮಂಜುಳಾ ದ್ಯಾಮಣ್ಣವರ, ಉಪಾಧ್ಯಕ್ಷ ಫಕ್ಕೀರಯ್ಯ ಹಿರೇಮಠ, ಜಿ.ಬಿ. ಬೈಲಪ್ಪಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ನಾಗಯ್ಯ ಹಿರೇಮಠ, ಕರಿಯಪ್ಪ ಮುದ್ದೇವರ, ತಾಜೀಯಾಬಾನು ಪಠಾಣ, ವೀರನಗೌಡ ನಡುವಿನಮನಿ, ಮುಖಂಡರಾದ ರಮೇಶ ಸಾತಣ್ಣವರ, ಬಾಬರ ಬಾವೋಜಿ, ಫಯಾಜ ಸವಣೂರ, ಸಂತೋಷ ಚಾಕಲಬ್ಬಿ ಸೇರಿದಂತೆ ಗ್ರಾಮಸ್ಥರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಾಕ್ರಮಾಧಿಕಾರಿ ಎಸ್.ಬಿ. ಪೂಜಾರ ನಿರ್ವಹಿಸಿದರು.