ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ

KannadaprabhaNewsNetwork |  
Published : Nov 24, 2025, 03:45 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಮಕ್ಕಳು ಜೀವನದಲ್ಲಿ ಸಾಕಷ್ಟು ಕಷ್ಟಗಳು ಬಂದರೂ ಕೂಡಾ ಅವುಗಳನ್ನು ಎದುರಿಸುವುದರೊಂದಿಗೆ ಓದಿನಲ್ಲಿ ಮುನ್ನುಗ್ಗಬೇಕು. ಓದು ಜೀವನಕ್ಕೆ ಅಡಿಪಾಯವಾಗಲಿದೆ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದುಳಿದ ವರ್ಗಗಳ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈ ಯೋಜನೆಗಳ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಉಪನಿರ್ದೇಶಕ ಮಹೇಶ ಪೊದ್ದಾರ ಹೇಳಿದರು.

ಪಟ್ಟಣದ ಟಿಪ್ಪುನಗರ ಬಡಾವಣೆಯಲ್ಲಿರುವ ಡಾ.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಆವರಣದಲ್ಲಿ ಜಿಪಂ ವಿಜಯಪುರ, ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಸಹಯೋಗದಲ್ಲಿ ನಡೆದ ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಸತಿ ನಿಲಯಗಳಲ್ಲಿಯ ವ್ಯವಸ್ಥೆ ಮತ್ತು ಸೌಲಭ್ಯಗಳು ಮಕ್ಕಳಿಗೆ ಯಾವ ರೀತಿ ಸಿಗುತ್ತಿದೆ. ಮಕ್ಕಳ ಶಿಕ್ಷಣ ಗುಣಮಟ್ಟ ಹೆಗಿದೆ ಎಂಬ ಹಲವಾರು ವಿಷಯ ತಿಳಿದುಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ದಿನ ಸಂಪೂರ್ಣ ವಸತಿ ನಿಲಯದಲ್ಲಿ ಎಲ್ಲ ಅಧಿಕಾರಿಗಳಿದ್ದು ಮಕ್ಕಳೊಂದಿಗೆ ಬೆರೆಯುವುದರೊಂದಿಗೆ ಸಮಸ್ಯೆಗಳನ್ನು ಆಲಿಸಿ ಸರಿಪಡಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ವಿದ್ಯಾರ್ಥಿಗಳು ಏನೇ ಸಮಸ್ಯೆಗಳಿದ್ದರೂ ಕೂಡಾ ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮುದ್ದೇಬಿಹಾಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಬಿ.ಜಿ.ಮಠ ಮಾತನಾಡಿ, ಈ ಕಾರ್ಯಕ್ರಮದಿಂದ ಮಕ್ಕಳಿಗೆ ಸೌಲಭ್ಯಗಳು ಸರಿಯಾಗಿ ಮುಟ್ಟುವುದರ ಜೊತೆಗೆ ಎಸ್ಎಸ್ಎಲ್‌ಸಿ ಫಲಿತಾಂಶಕ್ಕೂ ಮುನ್ನುಡಿ ಬರೆದಂತಾಗಿದೆ ಎಂದರು.

ಜೆಎಸ್‌ಜಿ ಕಾಲೇಜಿನ ಉಪನ್ಯಾಸಕ ಮಹೇಶ ಹಡಪದ ಹಾಗೂ ಗೊಟಗುಣಕಿ ಮುರಾರ್ಜಿ ವಸತಿ ನಿಲಯದ ಪ್ರಾಚಾರ್ಯ ದಯಾನಂದ ಹಿರೇಮಠ ಮಾತನಾಡಿ, ಮಕ್ಕಳಲ್ಲಿ ಓದಿನ ಜೊತೆಗೆ ಸಾಕಷ್ಟು ಕಲೆಗಳು ಅಡಗಿರುತ್ತವೆ. ಅಂತಹ ಕಲೆಯನ್ನು ಗುರುತಿಸುವುದರೊಂದಿಗೆ ಮುಖ್ಯ ವೇದಿಕೆಗೆ ತರಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯವಾಗಿದೆ. ಮಕ್ಕಳು ಜೀವನದಲ್ಲಿ ಸಾಕಷ್ಟು ಕಷ್ಟಗಳು ಬಂದರೂ ಕೂಡಾ ಅವುಗಳನ್ನು ಎದುರಿಸುವುದರೊಂದಿಗೆ ಓದಿನಲ್ಲಿ ಮುನ್ನುಗ್ಗಬೇಕು. ಓದು ಜೀವನಕ್ಕೆ ಅಡಿಪಾಯವಾಗಲಿದೆ ಎಂದು ಹೇಳಿದರು.

ಇದೇ ವೇಳೆ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಾಸ್ತವ್ಯದ ಮರುದಿನ ಬೆಳಗಿನ ಜಾವ ಯೋಗ ಪಟು ಉಪಾಧ್ಯ ನೇತೃತ್ವದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಕ್ಕಳಿಗೆ ಯೋಗ ಕಾರ್ಯಕ್ರಮ ನಡೆಸಲಾಯಿತು. ತಾಲೂಕು ತಹಸೀಲ್ದಾರ್‌ ಡಾ.ವಿನಯಾ ಹೂಗಾರ ಅಧ್ಯಕ್ಷತೆ ವಹಿಸಿದ್ದರು.

ಮೆಂಟರ್‌ಗಳಾಗಿ ಗಿರೀಶ ಹಲ್ಕೋಡೆ, ಪುರಸಭೆ ಕಂದಾಯ ನಿರೀಕ್ಷಕ ಸುರೇಶ ಅಮರಣ್ಣವರ, ತಮದಡ್ಡಿ ಪ್ರಾಚಾರ್ಯ ಚಂದ್ರಶೇಖರ ಸಜ್ಜನ, ಎಸ್.ಜಿ.ವಾಲಿಕಾರ, ದಲಿತ ಮುಖಂಡ ನಾಗೇಶ ಕಟ್ಟಿಮನಿ, ಬಸವರಾಜ ಕಾಮಗುಂಡಿ, ನಿಲಯ ಪಾಲಕರಾದ ಎಸ್.ಎನ್. ಮಲ್ಲಾಡೆ, ಎನ್.ವಿ.ಕೋರಿ, ಎಸ್.ಎಂ.ಕಲಬುರ್ಗಿ, ಎಸ್.ಎಂ.ಬಾಸಗಿ, ನಾಗರಾಜ ಗುಡಗಂಟಿ, ಶ್ರೀಕಾಂತ ಸಲಗಾರ್, ಸಿದ್ದು ಭಾಸಗಿ, ಎಂ.ಎಸ್. ತಾಳಿಕೋಟಿ, ವಾಣಿ ಹನಗಂಡಿ, ಎಂ.ಜಿ.ನರಸಾಣಗಿ, ಎನ್.ಎಸ್.ಇಜೇರಿ, ರಾಮನಗೌಡ ಭಂಟನೂರ, ಶ್ರೀನಿವಾಸ ಅಂಗಡಿ, ರವಿಕಿರಣ ಉಂಡಿಗೇರಿ, ರೇಣುಕಾ ಪಾಟೀಲ ಮೊದಲಾದವರಿದ್ದರು. ಎಸ್.ಎಂ.ಮಲ್ಲಾಡೆ ಸ್ವಾಗತಿಸಿ, ಎನ್.ವ್ಹಿ.ಕೋರಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ