ವಿದ್ಯಾರ್ಥಿಗಳು ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಿ

KannadaprabhaNewsNetwork |  
Published : Aug 14, 2024, 12:49 AM IST
13ಎಚ್ಎಸ್ಎನ್19 : ಚನ್ನರಾಯಪಟ್ಟಣ ತಾಲೂಕಿನ ೪೧ ಗ್ರಾಮಪಂಚಾಯಿತಿ ಅರಿವು ಕೇಂದ್ರದ ಗ್ರಂಥಪಾಲಕರು ಅವರವರ ಕೇಂದ್ರಗಳಲ್ಲಿ ದಿನಾಚರಣೆ ಆಚರಿಸಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಸಮ್ಮೇಳನಕ್ಕೆ ಭಾಗವಹಿಸಿದರು.   | Kannada Prabha

ಸಾರಾಂಶ

ದಿನನಿತ್ಯದ ಬದುಕಿನಲ್ಲಿ ಜ್ಞಾನದ ವಿಕಾಸಕ್ಕೆ ಸರ್ವರಿಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ, ಇತಿಹಾಸ, ರಾಜ್ಯಶಾಸ್ತ್ರ, ಬೌಗೋಳಿಕ ವಿಜ್ಞಾನ, ಸಂಶೋಧನೆ, ಕಥೆ ಕಾದಂಬರಿ, ಕವನಗಳ ಬಗ್ಗೆ ಹಲವಾರು ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಜಾತಿ, ಧರ್ಮ ವಯಸ್ಸು, ಯಾವುದೇ ಪಕ್ಷಪಾತವಿಲ್ಲದೆ ಗ್ರಂಥಾಲಯ ಜ್ಞಾನದೇಗುಲವಿದ್ದಂತೆ. ಇದರಿಂದ ಆತ್ಮ ಸ್ಥೈರ್ಯ ಉತ್ತಮ ಸಮಾಜಕ್ಕೆ ಸಹಕಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಯುದ್ಧದಲ್ಲಿ ಸೈನಿಕ, ಕ್ರೀಡೆಯಲ್ಲಿ ಕ್ರೀಡಾಪಟು, ಭೂಮಿಗೆ ರೈತ, ವ್ಯವಹಾರದಲ್ಲಿ ವ್ಯಾಪಾರಿ, ನೌಕರಿಯಲ್ಲಿ ಅಧಿಕಾರಿ, ಪತ್ರಿಕೆಯಲ್ಲಿ ಪತ್ರಕರ್ತ ಇಂತಹ ಹಲವಾರು ವಿವಿಧ ಕ್ಷೇತ್ರಗಳಲ್ಲಿ ಅವರದೇ ಸಾಮರ್ಥ್ಯವಿರುತ್ತದೆ. ಅವರ ಬದುಕಿಗೆ ತಕ್ಕನಾದ ಬುದ್ಧಿ, ಜ್ಞಾನ, ಸಾಮರ್ಥ್ಯ ಹೊಂದಿದ್ದಾರೆ ಎಂದು ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ತಿಳಿಸಿದರು.

ಅವರು ಮಂಗಳವಾರ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಎಸ್. ಆರ್. ರಂಗನಾಥ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪುಸ್ತಕ ಪ್ರದರ್ಶನ ವೀಕ್ಷಿಸಿ ಮಾತನಾಡುತ್ತಾ, ಸದೃಢ, ಸಾಮರ್ಥ್ಯದಿಂದ ಬದುಕನ್ನು ಕಂಡುಕೊಳ್ಳುತ್ತಾರೆ. ಸಾಮರ್ಥ್ಯ ಬಿಂಬಿಸುವ ಶಕ್ತಿ ಒಳ್ಳೆಯ ಪುಸ್ತಕ ಹಾಗೂ ಪತ್ರಿಕೆಗಳಿಗೆ ಇದೇ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಬದುಕಿನ ಭವಿಷ್ಯವನ್ನು ಕಂಡುಕೊಳ್ಳಲು ಗ್ರಂಥಾಲಯಗಳಂತಹ ವಾತಾವರಣ ಬಳಸಿಕೊಳ್ಳಬೇಕು. ಇದನ್ನು ವ್ಯವಸ್ಥಿತವಾಗಿ ಕಲ್ಪಿಸುವವರು ಗ್ರಂಥಪಾಲಕರು ಗ್ರಂಥಾಲಯ ಪಿತಾಮಹಾ ಎಸ್. ಆರ್‌. ರಂಗನಾಥ್‌ರವರ ಜನ್ಮ ದಿನಾಚರಣೆಯನ್ನು ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ, ಇದು ಅರ್ಥಪೂರ್ಣ ಆಚರಣೆಯಾಗಿದೆ.

ದಿನನಿತ್ಯದ ಬದುಕಿನಲ್ಲಿ ಜ್ಞಾನದ ವಿಕಾಸಕ್ಕೆ ಸರ್ವರಿಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ, ಇತಿಹಾಸ, ರಾಜ್ಯಶಾಸ್ತ್ರ, ಬೌಗೋಳಿಕ ವಿಜ್ಞಾನ, ಸಂಶೋಧನೆ, ಕಥೆ ಕಾದಂಬರಿ, ಕವನಗಳ ಬಗ್ಗೆ ಹಲವಾರು ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಜಾತಿ, ಧರ್ಮ ವಯಸ್ಸು, ಯಾವುದೇ ಪಕ್ಷಪಾತವಿಲ್ಲದೆ ಗ್ರಂಥಾಲಯ ಜ್ಞಾನದೇಗುಲವಿದ್ದಂತೆ. ಇದರಿಂದ ಆತ್ಮ ಸ್ಥೈರ್ಯ ಉತ್ತಮ ಸಮಾಜಕ್ಕೆ ಸಹಕಾರಿಯಾಗಿದೆ. ಈ ಗ್ರಂಥಾಲಯದಿಂದ ಹಲವಾರು ಯುವ ಮಿತ್ರರು ಸರ್ಕಾರಿ ಸೇವೆಯಲ್ಲಿ ನೌಕರರಾಗಿದ್ದಾರೆ. ಇತರೆ ಖಾಸಗಿ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಗ್ರಂಥಾಲಯದ ಗ್ರಂಥಪಾಲಕರಾದ ದೇವರಾಜು ವ್ಯವಸ್ಥೆಯ ಬಗ್ಗೆ ತಿಳಿಸಿದರು. ನಂದೀಶ್, ಲಕ್ಷ್ಮಿ, ಗ್ರಾಮಪಂಚಾಯಿತಿಗಳ ಅರಿವು ಕೇಂದ್ರಗಳ ತಾಲೂಕು ನೌಕರರ ಅಧ್ಯಕ್ಷ ಶಿವಲಿಂಗೇಗೌಡ, ತಾ.ಪಂ. ಉಪ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು