ವಿದ್ಯಾರ್ಥಿಗಳು ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಿ

KannadaprabhaNewsNetwork |  
Published : Nov 16, 2025, 02:45 AM IST
ಕಂಪ್ಲಿಯ ಸೋಮಪ್ಪ ಕೆರೆ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಜರುಗಿತು. | Kannada Prabha

ಸಾರಾಂಶ

ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು.

ಕಂಪ್ಲಿ: ಪಟ್ಟಣದ ಐತಿಹಾಸಿಕ ಸೋಮಪ್ಪ ಕೆರೆ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಜರುಗಿತು.

ಸಾರ್ವಜನಿಕ ಗ್ರಂಥಾಲಯದ ಗ್ರಂಥಾಲಯ ಸಹಾಯಕ ಜಗದೇವಪ್ಪ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಹುದ್ದೆ ಗಳಿಸಲು ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಆಕರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಶ್ರೀನಿವಾಸರೆಡ್ಡಿ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಕೃತಿಗಳನ್ನು ಅಧ್ಯಯನ ಮಾಡಲು ಗ್ರಂಥಾಲಯ ಸೂಕ್ತವಾದ ಸ್ಥಳವಾಗಿದೆ. ಗ್ರಂಥಾಲಯವನ್ನು ನಿತ್ಯ ಬಳಸುವ ಕೌಶಲ್ಯಾ ಹವ್ಯಾಸವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಸಪ್ತಾಹ ನಿಮಿತ್ತ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿ.ಇಂದುಮುನಿ (ಪ್ರಥಮ), ಬಿ.ಸುಮ (ದ್ವಿತೀಯ), ಎನ್.ಹರೀಕಾ (ತೃತೀಯ), ಚಿತ್ರಕಲೆಯಲ್ಲಿ ಕೆ.ರೇಖಾ (ಪ್ರಥಮ), ಆಫ್ರೀನಾ, ಸುಹಾನಾ (ದ್ವಿತೀಯ), ಎ.ತುಳಸಿ (ತೃತೀಯ), ರಸಪ್ರಶ್ನೆ ಸ್ಪರ್ಧೆಯಲ್ಲಿ ಚಂದ್ರಕಾಂತ ತಂಡ (ಪ್ರಥಮ), ಅನುಷಾಸಿಂಗ್ ತಂಡ (ದ್ವಿತೀಯ) ಸಂಧ್ಯಾತಂಡ (ತೃತೀಯ), ಜಾನಪದ ಗೀತೆಯಲ್ಲಿ ಎ.ರೇಣುಕಾ, ಶರಣಬಸವ (ಪ್ರಥಮ), ಭಾವಗೀತೆಯಲ್ಲಿ ಅಹ್ಮದ್‌ಬಾಷ, ಭೂಮಿಕಾ (ಪ್ರಥಮ) ಬಹುಮಾನ ಗಳಿಸಿದರು.

ಈ ಸಂದರ್ಭದಲ್ಲಿ ಕೆಸಿಆರ್‌ಒ ಸದಸ್ಯ ಡಾ.ಎಚ್.ಸಿ. ರಾಘವೇಂದ್ರ, ಕಚೇರಿ ಸಹಾಯಕ ಎಚ್.ಪ್ರಹ್ಲಾದ ನಾಯಕ, ಸೋಮಪ್ಪ ವಾಯುವಿಹಾರ ತಂಡದ ಸದಸ್ಯರಾದ ರಾಘವೇಂದ್ರ ಶೇಷ್ಠಿ, ಜಿ.ಎಂ. ಸುರೇಶ, ವಿಶ್ವನಾಥ ಸಜ್ಜನ, ಪತ್ನಿ ಮಂಜುನಾಥ, ವಿ.ಮೃತ್ಯುಂಜಯ, ಪ್ರಮುಖರಾದ ಇಂದ್ರಜಿತ್‌ಸಿಂಗ್, ಕಾಲೇಜಿನ ಗ್ರಂಥಪಾಲಕ ಎ.ಜಿ. ವೀರಭದ್ರಪ್ಪ, ಉಪನ್ಯಾಸಕರಾದ ರಾಜ್ಞಾ ಟಿ.ಎಂ.ಆರ್., ಡಾ.ಕೆ.ಮಹೇಶ್, ಡಾ.ಚಂದ್ರಶೇಖರ ವಿ.ಬಿಳಿಗುಡ್ಡ, ಖಲೀಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ