ಪ್ರತಿಭೆಗಳ ಅನಾವರಣಕ್ಕೆ ವಿದ್ಯಾರ್ಥಿಗಳು ಶ್ರಮವಹಿಸಬೇಕು

KannadaprabhaNewsNetwork |  
Published : Jun 13, 2024, 12:45 AM IST
ಕುಂಬಳೂರಿನ ಕಾಲೇಜಲ್ಲಿ ಅರುಣಾ ದಿವಾಕರ್ ಮಾತನಾಡಿದರು. | Kannada Prabha

ಸಾರಾಂಶ

ಶಾಲೆಗಳು ದೇವಾಲಯಗಳಂತೆ ಕಂಗೊಳಿಸಲು ವಿದ್ಯಾರ್ಥಿಗಳು ಪರಿಶ್ರಮ ವಹಿಸಬೇಕು. ಉತ್ತಮ ಪರಿಶ್ರಮದಿಂದ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥೆ ಅರುಣಾ ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.

- ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥೆ ಅರುಣಾ ದಿವಾಕರ್ ಸಲಹೆ ।

- ಕುಂಬಳೂರಿನ ಸರ್ಕಾರಿ ಕಾಲೇಜಿನಲ್ಲಿ ಶೌಚಾಲಯ ಉದ್ಘಾಟನೆ - - -

ಕನ್ನಡಪ್ರಭ ವಾರ್ತೆ. ಮಲೇಬೆನ್ನೂರು

ಶಾಲೆಗಳು ದೇವಾಲಯಗಳಂತೆ ಕಂಗೊಳಿಸಲು ವಿದ್ಯಾರ್ಥಿಗಳು ಪರಿಶ್ರಮ ವಹಿಸಬೇಕು. ಉತ್ತಮ ಪರಿಶ್ರಮದಿಂದ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥೆ ಅರುಣಾ ದಿವಾಕರ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಕುಂಬಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಟ್ರಸ್ಟ್‌ ವತಿಯಿಂದ ನಿರ್ಮಿಸಿದ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಗುವಿನಲ್ಲಿ ಅಪಾರ ಪ್ರತಿಭೆ ಅಡಗಿರುತ್ತದೆ. "ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ " ಎಂಬಂತೆ ಪರೀಕ್ಷೆ ಸಮೀಪ ಬಂದಾಗ ಮಾತ್ರವೇ ಓದು, ಬರವಣಿಗೆ ಅಭ್ಯಾಸ ಒಳ್ಳೆಯದಲ್ಲ. ಇದು ನಿರಂತರ ಪ್ರಕ್ರಿಯೆ ಆಗಿರಬೇಕು ಎಂದರು.

ಶಾಲೆ, ಕಾಲೇಜುಗಳು ಸಾಮಾಜಿಕ ಆಸ್ತಿಯಾಗಿವೆ. ಶಿಕ್ಷಣ ಸಂಸ್ಥೆ ನಮ್ಮದು ಎಂಬ ಭಾವನೆ ಬಂದಾಗ ಜೀವನ ಸುಂದರವಾಗುತ್ತದೆ. ಸಾಧನೆಗೆ ಕಷ್ಟಗಳು ಅಡ್ಡಿಯಾಗಬಾರದು. ಕಷ್ಟಪಟ್ಟರೆ ಎಲ್ಲ ಸಾಧನೆ ಸಾಧ್ಯವಿದೆ. ನಿಮಗೇ ನೀವೇ ಮಾನಸಿಕವಾಗಿ ಸ್ಟ್ರಾಂಗ್ ಆಗಬೇಕು. ಆಗ ನಿಮ್ಮ ಹಾದಿ ರಾಜಮಾರ್ಗವಾಗಿ ಬದಲಾಗುತ್ತದೆ ಎಂದು ತಿಳಿಸಿದ ಅವರು, ತುಮಕೂರು, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳ ಸುಮಾರು 6 ಸಾವಿರ ವಿದ್ಯಾರ್ಥಿನಿಯರಿಗೆ ಸುರಕ್ಷಿತವಾಗಿರಲು ನ್ಯಾಪ್‌ಕಿನ್‌ಗಳನ್ನು ವಿತರಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ಹನುಮಂತಯ್ಯ ಮಾತನಾಡಿ, ಮಾನಸಿಕ ಸಂಕಲ್ಪಗಳು ದೈವದ ಹಾದಿಯನ್ನು ತೆರೆಯುತ್ತವೆ. ವಿಕೃತಿಗಳು ದೈವವನ್ನು ಸ್ವೀಕರಿಸಲ್ಲ. ವಿದ್ಯಾರ್ಥಿಗಳು ಕೀಳರಿಮೆ ತೊರೆದು ಶಿಕ್ಷಣ, ಮೌಲ್ಯವನ್ನು ರೂಢಿಸಿಕೊಂಡು ಶ್ರಮ ವಹಿಸಿ ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.

ಎಸ್‌ಡಿಎಂಸಿ ಸದಸ್ಯ ಡಿ.ಕರಿಬಸಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೇ.೯೨ ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹತ್ತನೇ ತರಗತಿಯ ಐವರು ವಿದ್ಯಾರ್ಥಿಗಳಿಗೆ ತಲಾ ₹೫೦೦೧ ನೀಡುವುದಾಗಿ ಭರವಸೆ ನೀಡಿದರು.

ಡೈರಿ ಉಪಾಧ್ಯಕ್ಷ ಚಿಕ್ಕಣ್ಣ, ಮುಖ್ಯ ಶಿಕ್ಷಕ ಗೋವಿಂದಪ್ಪ, ಶಿಕ್ಷಕರಾದ ನಾಗವೇಣಿ, ಕೆ.ಆರ್. ಮಂಜುನಾಥ್ ಮಾತನಾಡಿದರು. ವಿದ್ಯಾರ್ಥಿನಿ ಯಶೊದಾ, ಅನುಷಾ ಅನಿಸಿಕೆ ಹೇಳಿದರು. ೭೦ ವಿದ್ಯಾರ್ಥಿನಿಯರಿಗೆ ನ್ಯಾಪ್‌ಕಿನ್ ವಿತರಿಸಲಾಯಿತು. ಸಿಬಿಸಿ ಸದಸ್ಯರಾದ ಎನ್.ಕಲ್ಲೇಶ್, ಬೆನ್ನೂರು ರಮೇಶ್, ಎಸ್.ಶಾರದಾ, ಮಾಜಿ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಪರಮೇಶ್ವರಪ್ಪ ಮತ್ತಿತರರು ಇದ್ದರು.

- - - ಬಾಕ್ಸ್‌ ಕೃತಗ್ಯತಾ ಟ್ರಸ್ಟ್‌ ನೆರವಿಗೆ ಋಣಿಸಿಬಿಸಿ ಸದಸ್ಯ, ಕಸಾಪ ಕಾರ್ಯದರ್ಶಿ ಎಚ್.ಎಂ. ಸದಾನಂದ ಮಾತನಾಡಿ, ಕೃತಗ್ಯತಾ ಟ್ರಸ್ಟ್‌ ವತಿಯಿಂದ ಕಳೆದ ವರ್ಷಕ್ಕೆ ಹರಿಹರ ತಾಲೂಕಿನ ಸರ್ಕಾರಿ ಶಾಲೆಯ 60 ಸಾವಿರ ಬಡ ಮಕ್ಕಳಿಗೆ ನಲಿ-ಕಲಿ ಪೀಠೋಪಕರಣಗಳು, ಶೌಚಾಲಯ, ಕ್ರೀಡಾ ಸಾಮಗ್ರಿಗಳು, ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ನ್ಯಾಪ್‌ಕಿನ್‌ಗಳು, ನೋಟ್ ಬುಕ್‌ಗಳನ್ನು ವಿತರಿಸಲಾಗಿದೆ. ಅವರಿಗೆ ಋಣಿಯಾಗಿದ್ದೇವೆ ಎಂದರು.

- - - -ಚಿತ್ರ-೧:

ಮಲೇಬೆನ್ನೂರು ಸಮೀಪದ ಕುಂಬಳೂರಿನ ಸರ್ಕಾರಿ ಕಾಲೇಜಿನಲ್ಲಿ ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಅರುಣಾ ದಿವಾಕರ್, ಎಚ್.ಎಂ. ಸದಾನಂದ, ಡಿ.ಕರಿಬಸಪ್ಪ ಮತ್ತಿತರರು ಪಾಲ್ಗೊಂಡರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ