ನರಗುಂದ: ಸಾಧನೆ ಸೋಮಾರಿಯ ಸ್ವತ್ತಲ್ಲ. ಅದು ಸಾಧಕನ ಸ್ವತ್ತು. ಸಾಧನೆ ಮಾಡಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರದಿಂದ ಪ್ರೋತ್ಸಾಹ ದೊರೆಯುತ್ತದೆ. ಇದು ಒಳ್ಳೆಯ ಬೆಳವಣಿಗೆ ಎಂದು ಭೈರನಹಟ್ಟಿ ಮತ್ತು ಶಿರೋಳ ಮಠದ ಶಾಂತಲಿಂಗ ಶ್ರೀಗಳು ತಿಳಿಸಿದರು.ಪಟ್ಟಣದ ಪಂಚಮಸಾಲಿ ಸಮಾಜದಿಂದ ಇಲ್ಲಿಯ ಪಂಚಮಸಾಲಿ ಸಮುದಾಯು ಭವನ ನಿರ್ಮಾಣ ನಿವೇಶನದಲ್ಲಿ ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ಬಗ್ಗೆ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮಿಗಳು ಅಂದಿನ ಮಾನವ ಸಂಪನ್ಮೂಲ ಇಲಾಖೆಗೆ ಮಂತ್ರಿಗಳಿಗೆ ಪತ್ರ ಬರೆದರೂ ಇನ್ನೂ ಪತ್ರಾಗಾರದಲ್ಲಿ ಬದಲಾವಣೆಯಾಗಿಲ್ಲ. ವೀರರಾಣಿ ಕಿತ್ತೂರು ಚನ್ನಮ್ಮಾಜಿಯೇ ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಣೆ ಮಾಡಬೇಕು ಎಂದು ಒಕ್ಕೊರಲಿನಿಂದ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆಂದರು.
ಸಮಾಜದ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ಕಿತ್ತೂರುರಾಣಿ ಚೆನ್ನಮ್ಮ ತಾಯಿ ಬ್ರಿಟಿಷರ ವಿರುದ್ಧ ಹೋರಾಟದ ಬಗ್ಗೆ ವಿವರಿಸುತ್ತಾ, ಮುಂದಿನ ವರ್ಷದೊಳಗೆ ಸಮುದಾಯ ಭವನ ನಿರ್ಮಿಸಿ, ಭವನದಲ್ಲಿಯೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸೋಣ ಎಂಬ ಗುರಿ ಇದೆ. ಇದಕ್ಕೆ ಸಮಾಜದ ಜನರು ಆರ್ಥಿಕವಾಗಿ ಸಹಾಯ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಮಾಜದ ಮುಖಂಡ ವಿ.ಎನ್. ಕೊಳ್ಳಿಯವರ ಮಾತನಾಡಿ, ಸರ್ಕಾರದಿಂದ ಶಾಸಕ ಸಿ.ಸಿ. ಪಾಟೀಲ ಅವರು 1 ಕೋಟಿ ರು. ಸ್ವಂತ ವಂತಿಕೆ ನೀಡುವ ಮೂಲಕ ಸರ್ಕಾರದಿಂದ 4 ಕೊಟಿ ರು. ಮಂಜೂರು ಮಾಡಿಸಿದ್ದಲ್ಲದೇ ಒಟ್ಟು 12 ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದ್ದಾರೆ ಎಂದರು.