
ಕೊಪ್ಪಳ:
ಅಪ್ಪನೊಂದಿಗೆ ಬಂದ ಮಕ್ಕಳು:
ಪ್ರತಿ ಆಧಾರ್ ಕಾರ್ಡ್‌ಗೆ ಎರಡು ಚೀಲ ಯೂರಿಯಾ ಗೊಬ್ಬರ ನೀಡಲಾಗುತ್ತಿದೆ. ಹೀಗಾಗಿ ತಾಲೈಕಿ ಕಾಟ್ರಳ್ಳಿಯ ರೈತ ಮಕ್ಕಳಾದ ಶಿವಕುಮಾರ ಹಾಗೂ ಬಸವರಾಜ ಎಂಬುವವರನ್ನು ಶಾಲೆ ಬಿಡಿಸಿ ಗೊಬ್ಬರ ಖರೀದಿಸಲು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಗೆ ಆಗಮಿಸಿದ್ದರು. ಆದರೆ, ಗೊಬ್ಬರವೂ ಸಿಗದೆ ಅತ್ತ ಶಾಲೆಗೂ ಹೋಗಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿದರು. ಇದೇ ರೀತಿ ಜಿಲ್ಲಾದ್ಯಂತ ಘಟನೆಗಳು ನಡೆಯುತ್ತಿದ್ದರೂ ರೈತರಿಗೆ ಮಾತ್ರ ಗೊಬ್ಬರ ಮಾತ್ರ ಸಿಗುತ್ತಿಲ್ಲ.ಯೂರಿಯಾ ಅಭಾವ:
ಕೊಪ್ಪಳ ಸೇರಿದಂತೆ ಯಲಬುರ್ಗಾ, ಕುಕನೂರು, ಗಂಗಾವತಿ, ಕುಷ್ಟಗಿಯಲ್ಲಿಯೂ ರೈತರು ಯೂರಿಯಾ ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ನಿತ್ಯವೂ ಅಂಗಡಿಗಳಿಗೆ ಹೋಗಿ ಪರಿತಪಿಸುತ್ತಿದ್ದಾರೆ. ಆದರೆ, ಕಾಳಸಂತೆಯಲ್ಲಿ ಯೂರಿಯಾ ರಸಗೊಬ್ಬರ ಅವ್ಯಾಹತವಾಗಿ ದೊರೆಯುತ್ತಿದೆ. ಗೊಬ್ಬರದೊಂದಿಗೆ ಇತರೆ ಔಷಧಿ ಅಥವಾ ಜಿಪ್ಸಮ್ ಖರೀದಿಸಿದರೆ ಮಾತ್ರ ರಸಗೊಬ್ಬರ ನೀಡಲಾಗುತ್ತದೆ. ಇದರಿಂದ ರೈತರು ರೋಸಿ ಹೋಗಿದ್ದಾರೆ.ಅಭಾವವಿಲ್ಲ:
ಜಿಲ್ಲಾಡಳಿತ ಯೂರಿಯಾ ರಸಗೊಬ್ಬರದ ಅಭಾವವಿಲ್ಲ. ರೈತರಿಗೆ ಬೇಕಾಗುವಷ್ಟು ಮಾರುಕಟ್ಟೆಗೆ ಪೂರೈಕೆ ಮಾಡಲಾಗಿದೆ. ಯಾರಾದರೂ ಕಾಳಸಂತೆಯಲ್ಲಿ ಮಾರಾಟ ಮಾಡಿದರೇ ಕ್ರಮವಹಿಸುವುದಾಗಿ ಹೇಳಿದೆ. ಅಧಿಕ ದರಕ್ಕೆ ಮಾರುತ್ತಿದ್ದ ಹತ್ತಕ್ಕೂ ಹೆಚ್ಚು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಹೇಳಿದೆ. ಊರಿನೆಲ್ಲ ಹುಡುಕಿದರೂ ಒಂದು ಚೀಲ ಯೂರಿಯಾ ಗೊಬ್ಬರ ಬಡ ರೈತರಿಗೆ ಸಿಗುತ್ತಿಲ್ಲ. ಆದರೆ, ನಮ್ಮೂರಲ್ಲಿರುವ ಶ್ರೀಮಂತರ ಸಾಕಷ್ಟು ಯೂರಿಯಾವನ್ನು ತಂದು ಜಮೀನಿಗೆ ಹಾಕುತ್ತಿದ್ದಾರೆ. ನಾಲು ನಾಲ್ಕು ದಿನ ಸುತ್ತಾಡಿದರೂ ಸಿಗುತ್ತಿಲ್ಲ.ಮರಿಯಪ್ಪ ರೈತ ಗೊಂಡಬಾಳಯೂರಿಯಾ ರಸಗೊಬ್ಬರ ಅಭಾವವಿಲ್ಲ. ಆದರೆ, ರೈತರು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡುವುದನ್ನು ನಿಯಂತ್ರಿಸಲು ಮನವಿ ಮಾಡಿದ್ದೇವೆ. ಯೂರಿಯಾ ರಸಗೊಬ್ಬರ ಬದಲಿಗೆ ಮಾರುಕಟ್ಟೆಯಲ್ಲಿ ನ್ಯಾನೋ ಯೂರಿಯಾ ಲಭ್ಯವಿದ್ದು ಅದನ್ನು ಬಳಸಬೇಕು.
ರುದ್ರೇಶಪ್ಪ ಟಿ. ಜೆಡಿ ಕೃಷಿ ಇಲಾಖೆ