ವಿದ್ಯಾರ್ಥಿಗಳು ಚಂಚಲ ಮನಸ್ಸನ್ನು ಬಿಟ್ಟು ಓದಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ: ಬಿ.ಎಸ್.ಚಂದನ್

KannadaprabhaNewsNetwork |  
Published : Jul 23, 2024, 12:37 AM IST
22ಕೆಎಂಎನ್ ಡಿ13 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಓದುವ ವಿಷಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ನಿಮ್ಮ ಗುರಿ ಅಚಲವಾಗಿರಬೇಕು. ವಿಜ್ಞಾನ, ವಾಣಿಜ್ಯ, ಕಲಾ ಸೇರಿದಂತೆ ನೀವು ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡರು ಗುರಿಯತ್ತ ಸಾಗಬೇಕು. ಆಗಮಾತ್ರ ನಿಮ್ಮ ಪರಿಶ್ರಮಕ್ಕೆ ಬೆಲೆಸಿಕ್ಕಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ವಿದ್ಯಾರ್ಥಿಗಳು ಚಂಚಲ ಮನಸ್ಸನ್ನು ಬದಿಗಿಟ್ಟು ಪರಿಶ್ರಮದಿಂದ ಓದಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಐಎಎಸ್ ಅಧಿಕಾರಿ ಬಿ.ಎಸ್.ಚಂದನ್ ತಿಳಿಸಿದರು.

ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಓದುವ ವಿಷಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ನಿಮ್ಮ ಗುರಿ ಅಚಲವಾಗಿರಬೇಕು. ವಿಜ್ಞಾನ, ವಾಣಿಜ್ಯ, ಕಲಾ ಸೇರಿದಂತೆ ನೀವು ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡರು ಗುರಿಯತ್ತ ಸಾಗಬೇಕು. ಆಗಮಾತ್ರ ನಿಮ್ಮ ಪರಿಶ್ರಮಕ್ಕೆ ಬೆಲೆಸಿಕ್ಕಂತಾಗುತ್ತದೆ ಎಂದರು.

ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಜ್ಞಾನ ಹೊಂದಬೇಕು. ಗ್ರಂಥಾಲಯಗಳನ್ನು ಸರಿಯಾಗಿ ಸದ್ಬಳಕೆಮಾಡಿಕೊಂಡು ಪ್ರತೀದಿನ ಸಮಾಜದಲ್ಲಿ ನಡೆಯುವ ಪ್ರಚಲಿತ ಘಟನೆ ಬಗ್ಗೆ ಅರಿವು ಮೂಡಿಸಿಕೊಂಡು ಪ್ರಸ್ತುತ ಸಮಾಜವನ್ನು ಅರ್ಥೈಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಜಿ.ಬಿ.ಪಲ್ಲವಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆ ಗಿಟ್ಟಿಸಿಕೊಂಡು ಸಮಾಜಕ್ಕೆ ಮಾದರಿಯ ಪ್ರಜೆಗಳಾಗಬೇಕು. ಐಎಎಸ್-ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಗೊಳ್ಳಬೇಕಾದರೆ ಕಠಿಣ ಪರಿಶ್ರಮ ಪಡಬೇಕು ಎಂದರು.

ನಮ್ಮ ಗ್ರಾಮೀಣ ಪ್ರದೇದಲ್ಲಿ ಚಂದನ್ ಅವರು ಸಹ ಓದಿ ಐಎಎಸ್ ಅಧಿಕಾರಿಯಾಗಿರುವುದು ನಮ್ಮ ಜಿಲ್ಲೆಗೆ ಮತ್ತು ನಮ್ಮ ವಿದ್ಯಾಸಂಸ್ಥೆಗೆ ಹೆಮ್ಮೆ ತರುವಂತಹ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಚಂದನ್ ಅವರ ಸಾಧನೆ ಸ್ಪೂರ್ತಿದಾಯಕವಾಗಬೇದು ಕರೆ ನೀಡಿದರು.

ಇದೇ ವೇಳೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಬಿಇಟಿ ಟ್ರಸ್ಟಿಗಳಾದ ಮುದ್ದಯ್ಯ, ಉಪನ್ಯಾಸಕರಾದ ನಾಗಮಾದಯ್ಯ, ಮಾನಸ, ಸುನೀಲ್, ಶ್ರೀಕಾಂತ್ ಸೇರಿದಂತೆ ಅಧ್ಯಾಪಕ ವೃಂದ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ