ಚಿಕ್ಕಮಗಳೂರುಚುಟುಕು ರಚನೆಗೆ ಅಧ್ಯಯನಶೀಲತೆ ಪರಿಣಾಮಕಾರಿ ಎಂದು ಖ್ಯಾತ ಕವಿ ಡುಂಡಿರಾಜ್ ಹೇಳಿದರು.ಹಿರೇಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಸುಗಮಸಂಗೀತ ಗಂಗಾ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಧ್ಯಯನದ ಕೊರತೆ ಚುಟುಕುಗಳಷ್ಟೇ ಅಲ್ಲ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕಾಡುತ್ತಿದೆ. ಹೆಚ್ಚು ಹೆಚ್ಚು ಓದುವ ಪ್ರವೃತ್ತಿ ಬೆಳೆಸಿಕೊಂಡಾಗ ಉತ್ತಮ ಸಾಹಿತ್ಯ ರಚನೆ ಸಾಧ್ಯ ವಾಗುತ್ತದೆ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ- ಸುಗಮಸಂಗೀತ ಗಂಗಾದಿಂದ ಸನ್ಮಾನ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚುಟುಕು ರಚನೆಗೆ ಅಧ್ಯಯನಶೀಲತೆ ಪರಿಣಾಮಕಾರಿ ಎಂದು ಖ್ಯಾತ ಕವಿ ಡುಂಡಿರಾಜ್ ಹೇಳಿದರು.ಹಿರೇಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಸುಗಮಸಂಗೀತ ಗಂಗಾ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಧ್ಯಯನದ ಕೊರತೆ ಚುಟುಕುಗಳಷ್ಟೇ ಅಲ್ಲ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕಾಡುತ್ತಿದೆ. ಹೆಚ್ಚು ಹೆಚ್ಚು ಓದುವ ಪ್ರವೃತ್ತಿ ಬೆಳೆಸಿಕೊಂಡಾಗ ಉತ್ತಮ ಸಾಹಿತ್ಯ ರಚನೆ ಸಾಧ್ಯ ವಾಗುತ್ತದೆ ಎಂದರು.ಕನ್ನಡ ಸಾಹಿತ್ಯ ಅತ್ಯುನ್ನತ ಪರಂಪರೆಯನ್ನು ಹೊಂದಿದೆ. ಕನ್ನಡ ಭಾಷೆ ಸುಂದರ ಹಾಗೂ ಸಮೃದ್ಧ. ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ ಅದೊಂದು ಸಂಸ್ಕೃತಿ. ಕನ್ನಡವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡವನ್ನು ಶುದ್ಧವಾಗಿ ಓದುವ ಬರೆಯುವ ಅಭ್ಯಾಸ ನಮ್ಮದಾಗಬೇಕು. ಕನ್ನಡ ಪುಸ್ತಕ, ಪತ್ರಿಕೆ ಕೊಂಡು ಓದಬೇಕು. ಕನ್ನಡದ ಹಾಡುಗಳನ್ನು ಕೇಳು ವುದು, ಕನ್ನಡದ ನಾಟಕ ಸಿನಿಮಾ ಯಕ್ಷಗಾನಗಳ ವೀಕ್ಷಣೆ ಇತರರಿಗೂ ನಮ್ಮ ಭಾಷೆ ಕಲಿಸಲು ಪ್ರಯತ್ನಿಸುವುದರಿಂದ ಕನ್ನಡದ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಡಾ.ಚಿಂತಾಮಣಿ ಕೊಡ್ಲಕೆರೆ, ಕನ್ನಡ ಸಾಹಿತ್ಯ ಪೂಜಾರಿ ಹಿರೇಮಗಳೂರು ಕಣ್ಣನ್, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್, ಸುಗಮ ಸಂಗೀತ ಗಂಗಾ ಪ್ರಧಾನ ಕಾರ್‍ಯದರ್ಶಿ ಮಂಜುನಾಥ ಕಾಮತ್, ಪ್ರಭುಲಿಂಗಶಾಸ್ತ್ರಿ, ರಮೇಶ್, ಭಾರತಿ ದುಂಡಿರಾಜ್, ಚಿತ್ತ ರಂಜನಿ, ಅನಂತಶರ್ಮ, ಯತಿರಾಜ್, ವಿದ್ವಾಂಸ ವೈಷ್ಣವಸಿಂಹ ಇದ್ದರು. 13 ಕೆಸಿಕೆಎಂ 4ಹಿರೇಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಖ್ಯಾತ ಕವಿ ದುಂಡಿರಾಜ್ ಅವರನ್ನು ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.