ಕನ್ನಡಪ್ರಭ ವಾರ್ತೆ ಕೋಲಾರನಮ್ಮ ದೇಶದ ಇತಿಹಾಸದಲ್ಲಿ ಅನೇಕ ರಾಜರುಗಳ ಆಡಳಿತ ನಡೆಸಿರುವಂತ ಅನೇಕ ದಾಖಲೆಗಳು ಶಾಸನಗಳಲ್ಲಿರುವುದನ್ನು ಧೃಡಪಡಿಸಿಬಹುದಾಗಿದೆ, ಶಾಸನಗಳ ಚಿಂತನೆಗಳು ಮತ್ತು ಅಧ್ಯಯದಿಂದ ಇತಿಹಾಸ ಕಟ್ಟಿ ಬೆಳೆಸಲು ಪೂರಕವಾಗಿವೆ, ಸಾಹಿತ್ಯ ಹಾಗೂ ಇತಿಹಾಸದ ದೃಷ್ಟಿಯಿಂದ ಶಾಸನಗಳು ಮುಖ್ಯವಾಗಿವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಶಾಸನ ತಜ್ಞ ಪ್ರೊ.ಕೆ.ಆರ್.ನರಸಿಂಹನ್ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಭವನದಲ್ಲಿ ಓದುಗ ಕೇಳುಗ-ನಮ್ಮ ನಡೆಯ ೩೭ನೇ ತಿಂಗಳ ಕಾರ್ಯಕ್ರಮದಲ್ಲಿ ಬಿ.ಎಲ್. ರೈಸ್ ಅವರ ಎಪಿಗ್ರಾಫಿಯ ಕರ್ನಾಟಕ ಕೃತಿಯ ಸಂಪುಟ ೧೦ ಹಾಗೂ ಕೋಲಾರದ ಶಾಸನಗಳು ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ನೀಡಿ, ಶಾಸನಗಳನ್ನು ಮೂಲ ರೂಪದಲ್ಲಿ ನೋಡುವ ಕೃತಿಗಳು ನಮ್ಮಲ್ಲಿ ಇಲ್ಲವಾಗಿದ್ದರೂ ಮೊಬೈಲ್‌ಗಳಲ್ಲಿ ಅವುಗಳ ಮಾಹಿತಿ ಕಾಣಬಹುದಾಗಿದೆ ಎಂದರು.10ನೇ ಸಂಪುಟದಲ್ಲಿ ಕೋಲಾರ ಶಾಸನ
ಮೈಸೂರಿಗೆ ವಿಶೇಷ ಸ್ತಾನ
ಶಾಸನಗಳ ಕ್ರೋಡೀಕರಣದಲ್ಲಿ ಮೈಸೂರು ವಿಶೇಷ ಸ್ಥಾನಮಾನ ಪಡೆದಿದೆ. ೧೯೦೬ರಿಂದ ೨೨ರವರೆಗೆ ರಾವ್ ಅವರು ನಿದೇರ್ಶಕರಾಗಿದ್ದರು. ನರಸಿಂಹಚಾರ್ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ೪೧೫ ಹೊಸ ಶಾಸನಗಳು ಸೇರ್ಪಡೆಯಾಗಿದೆ, ೧೯೮೬ರಲ್ಲಿ ಕೊರ್ಗ್ ಜಿಲ್ಲೆಯ ವ್ಯಾಲಂನಲ್ಲಿ ಸೇರ್ಪಡೆ ಮಾಡಿದರೆ, ೧೯೦೫ರಲ್ಲಿ ಕೋಲಾರ, ಬೆಂಗಳೂರು, ತುಮಕೂರು ಇತ್ಯಾದಿಗಳ ಜಿಲ್ಲೆಗಳದ್ದು ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.ಕೋಲಾರದಲ್ಲಿ ೧೩೪೭ರಲ್ಲಿನ ಶಾಸನವೊಂದು ಪತ್ತೆಯಾಗಿರುವ ಬಗ್ಗೆ ೧೭ನೇ ವ್ಯಾಲಂನಲ್ಲಿ ದಾಖಲಾಗಿದೆ. ಕೋಲಾರದಲ್ಲಿ ಸುಮಾರು ೨ ಸಾವಿರ ಶಾಸನಗಳು ಪತ್ತೆಯಾಗಿದೆ. ಸಾಮಾನ್ಯವಾಗಿ ಶಾಸನಗಳು ವಿಶಿಷ್ಟವಾದ ಗ್ರಂಥಲಿಪಿ, ಭಾಷೆ, ಇತಿಹಾಸ ಒಳಗೊಂಡಿದ್ದವು ದೇವಾಲಯ, ಕೆರೆಗಳು, ವೀರರ, ಮಠಗಳು, ದಾನ, ಧರ್ಮಗಳು ಇತ್ಯಾದಿಗಳ ಕೊರಿತು ಆಡಳಿತದಲ್ಲಿನ ಕಾನೂನುಗಳ ವಿವರಗಳನ್ನು ಒಳಗೊಂಡಿದೆ.ಕೃಷ್ಣದೇವರಾಯ ಕುರಿತು ಶಾಸನ
ಕೃಷ್ಣದೇವರಾಯ ಪಟ್ಟಾಭಿಷೇಕ ಕಾಳಹಸ್ತಿಯಲ್ಲಿ ಮಾಡಿಕೊಂಡಿದ್ದು, ಚಂದ್ರಗಿರಿಯಲ್ಲಿ ಮರಣವನ್ನಾಪ್ಪಿದ್ದು ಸೇರಿದಂತೆ ಅನೇಕ ದಾಖಲೆಗಳು ಶಾಸನದಲ್ಲಿ ಪತ್ತೆಯಾಗಿದೆ. ಅನೇಕ ಸಂದೇಶಗಳು ಅಧ್ಯಯನದ ಮೂಲಕ ಇತಿಹಾಸದಲ್ಲಿ ಮುಂದುವರೆಯಲು ಶಾಸನಗಳು ಪ್ರೇರಣೆಯಾಗಿದೆ. ತಾವು ಬರೆದಿರುವ ಹಲವು ಕೃತಿಗಳ ಪರಿಚಯ ತಿಳಿಸಿದರು.ರಾಜ್ಯದಲ್ಲಿ ದ್ರಾವಿಡರು. ಚೋಳರು, ಗಂಗರು, ಕದಂಬರು, ನೊಣಬರು, ಹೊಯ್ಸಳರು ಸೇರಿದಂತೆ ಅನೇಕ ವಂಶಸ್ಥರು ಆಳ್ವಿಕೆ ನಡೆಸಿದ್ದಾರೆ. ಅನೇಕ ಶಾಸನಗಳು ರಾಜ್ಯದ ವಿವಿಧಡೆ ಇದೆ. ಆದರೆ ಇವುಗಳು ಬೆಳಕಿಗೆ ಬಾರದೆ ಆಗ್ಗಾಗ್ಗೆ ಪತ್ತೆಯಾಗುತ್ತಿರುವ ಕುರಿತು ನೆನಪಿಸಿದರು. ಇದೇ ಸಂದರ್ಭದಲ್ಲಿ ಎಪಿಗ್ರಾಫಿಯ ಕರ್ನಾಟಕ ಕೃತಿಯ ಸಂಪುಟದ ಪ್ರಾತ್ಯಕ್ಷತೆ ಪ್ರದರ್ಶಿಸಿ ವಿವರಿಸಿದರು.ಆದಿಮ ಎನ್.ಗೋವಿಂದಪ್ಪ ಪ್ರಸ್ತಾವಿಕ ನುಡಿಗಳಾಡಿ, ಶಾಸನಗಳ ಪಿತಾಮಹ ರೈಸ್ ಅವರ ೯ ಸಾವಿರ ಶಾಸನಗಳು ೧೨ ವ್ಯಾಲಂನಲ್ಲಿ ಪ್ರಕಟವಾಗಿದೆ, ಇದರಲ್ಲಿ ಕೋಲಾರದಲ್ಲಿ ದೊರೆತ ೧೩೦೫ ಶಾಸನಗಳು ದಾಖಲಾಗಿದೆ. ಕಾಲಿಟ್ಟ ಕಡೆ ಶಾಸನಗಳು ವೀರಗಲ್ಲುಗಳು ಪತ್ತೆಯಾಗಿದೆ ಎಂದರು. ನಗರದ ಸರ್ಕಾರಿ ಕಾಲೇಜು ಉಪನ್ಯಾಸಕ ಹಾಗೂ ಚಿಂತಕ ಡಾ.ಜಿ.ಶಿವಪ್ಪ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿ.ಎಸ್.ಎಸ್.ಶಾಸ್ತ್ರಿ, ಉಪನ್ಯಾಸಕ ನಾಗಾನಂದ್ ಕೆಂಪರಾಜ್, ಜೆ.ಜಿ.ನಾಗರಾಜ್. ಸಿ.ಮುನಿಯಪ್ಪ, ಡಾ.ರಘುರಾಮೇಗೌಡ, ಡಾ.ಹರೀಶ್, ಹೆಚ್.ಎ.ಪುರೋತ್ತಮ್ ರಾವ್ ಇದ್ದರು.೨೬ಕೆಎಲ್‌ಆರ್-೬ಕೋಲಾರ ನಗರದ ಕಾರ್ಯನಿರತ ಪತ್ರಕರ್ತ ಸಂಘದ ಭವನದಲ್ಲಿ ಓದುಗ ಕೇಳುಗ-ನಮ್ಮ ನಡೆಯ ೩೭ನೇ ತಿಂಗಳ ಕಾರ್ಯಕ್ರಮದಲ್ಲಿ ಪ್ರೊ.ಕೆ.ಆರ್.ನರಸಿಂಹನ್ ಮಾತನಾಡಿದರು.