ಗೊಂದಲ ಅಧ್ಯಯನ ಮಾಡಿ ಜಾತಿ ಸಮೀಕ್ಷೆ ಮಾಡಿ: ಡಾ.ಶಿವಮೂರ್ತಿ ಸ್ವಾಮೀಜಿ

KannadaprabhaNewsNetwork |  
Published : Sep 17, 2025, 01:06 AM IST
ಹೊನ್ನಾಳಿ ‍ಫೋಟೋ 14ಎಚ್.ಎಲ್.ಐ1.  ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆಯ ಡಾ. ಶಿವಮೊರ್ತಿ ಶಿವಾಚಾರ್ಯ ಮಹಾಸ್ವಾಮೀಜಿ. | Kannada Prabha

ಸಾರಾಂಶ

ಜಾತಿ ಸಮೀಕ್ಷೆಗೆ ತಮ್ಮ ವಿರೋಧ ಇಲ್ಲ, ಆದರೆ ಜಾತಿಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಅನೇಕ ಗೊಂದಲಗಳ ಬಗ್ಗೆ ಹಿಂದುಳಿಗ ಆಯೋಗ ಇನ್ನೂ ಹೆಚ್ಚಿನ ಅಧ್ಯಯನ ಮಾಡಿ, ಸ್ಪಷ್ಟತೆಯನ್ನು ಕಂಡುಕೊಂಡು ಸಮೀಕ್ಷೆ ಮುಂದುವರಿಸಲಿ ಎಂದು ತರಳಬಾಳು ಜಗದ್ಗುರು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಾತಿ ಸಮೀಕ್ಷೆಗೆ ತಮ್ಮ ವಿರೋಧ ಇಲ್ಲ, ಆದರೆ ಜಾತಿಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಅನೇಕ ಗೊಂದಲಗಳ ಬಗ್ಗೆ ಹಿಂದುಳಿಗ ಆಯೋಗ ಇನ್ನೂ ಹೆಚ್ಚಿನ ಅಧ್ಯಯನ ಮಾಡಿ, ಸ್ಪಷ್ಟತೆಯನ್ನು ಕಂಡುಕೊಂಡು ಸಮೀಕ್ಷೆ ಮುಂದುವರಿಸಲಿ ಎಂದು ತರಳಬಾಳು ಜಗದ್ಗುರು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಿರಿಗೆರೆ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 33ನೇ ಶ್ರದ್ದಾಂಜಲಿ ಸಮಾರಂಭದ ದಾಸೋಹಕ್ಕೆ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕುಗಳಿಂದ ಭಕ್ತಿ ಸಮರ್ಪಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇದೇ 22ರಿಂದ ಪ್ರಾರಂಭವಾಗುವ ಜಾತಿ ಸಮೀಕ್ಷೆ ಬಗ್ಗೆ ಭಕ್ತಿ ಸಮಪರ್ಣಾ ಸಮಾರಂಭದಲ್ಲಿ ಅರಕೆರೆ ಹನುಂತಪ್ಪ ಹಾಗೂ ಅರಬಗಟ್ಟೆ ರಮೇಶ್ ಈ ಇಬ್ಬರು ಜಾತಿ ಸಮೀಕ್ಷೆಯಲ್ಲಿ ಏನು ಬರೆಯಿಸಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿದಾಗ, ಈ ಕುರಿತು ಮಾತನಾಡಿದ ಶ್ರೀಗಳು, ಹಿಂದುಳಿದ ವರ್ಗಗಳ ಆಯೋಗ ಜಾತಿ ಸಮೀಕ್ಷೆಗಾಗಿ ಜಾತಿಗಳ ಹೆಸರು ಹಾಗೂ ಕೋಡ್ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಸಾಕಷ್ಟು ಗೊಂದಲಗಳು ಇರುವುದು ಕಂಡು ಬರುತ್ತಿದೆ, ಈ ಬಗ್ಗೆ ಆಯೋಗದ ಅಧ್ಯಕ್ಷರು ಸಾರ್ವಜನಕರಿಗೆ ಸ್ಪಷ್ಟನೆಯೊಂದಿಗೆ ಇರುವ ಗೊಂದಲಗಳನ್ನು ಬಗೆಹರಿಸಿ ಜಾತಿ ಸಮೀಕ್ಷೆ ನಡೆಸಲು ಅಡ್ಡಿ ಇಲ್ಲ, ಹಿಂದುಳಿದ ವರ್ಗದ ಆಯೋಗ ಜಾತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದಂತೆ ಕಾಣುತ್ತಿಲ್ಲ, ಒಂದು ವಾರದಲ್ಲಿ ಆರು ಕೋಟಿ ಜನಸಂಖ್ಯೆಯ ಜಾತಿ ಸಮೀಕ್ಷೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಉಧಾಹರಣೆಗೆ ಜಾತಿ ಪಟ್ಟಿಯಲ್ಲಿನ ಕೋಡ್ ಸಂಖ್ಯೆ 1079 ರಲ್ಲಿ ರೆಡ್ಡಿ ಲಿಂಗಾಯತ, 11107ರಲ್ಲಿ ಲಿಂಗಾಯತ ರೆಡ್ಡಿ, 792 ರಲ್ಲಿ ಲಿಂಗಾಯತ ವೀರಶೈವ, 1366ರಲ್ಲಿ ವೀರಶೈವ ಲಿಂಗಾಯತ. ಇದೇ ರೀತಿ 975ರಲ್ಲಿ ನೊಳಂಬ ಲಿಂಗಾಯತ, 976ರಲ್ಲಿ ನೊಣಬ ಲಿಂಗಾಯತ, 1010 ರಲ್ಲಿ ಪಂಚಮಸಾಲಿ ಲಿಂಗಾಯತ, 1317ರಲ್ಲಿ ವೀರಶೈವ ಪಂಚಮಸಾಲಿ ಹಾಗೂ 1117ರಲ್ಲಿ ಸಾಧು ಲಿಂಗಾಯತ 1116ರಲ್ಲಿ ಸಾಧರು ಹೀಗೆ ಎಲ್ಲಾ ಜಾತಿಗಳಲ್ಲೂ ಗೊಂದಲಗಳಿವೆ. ಆದ್ದರಿಂದ ಹಿಂದುಳಿದ ಆಯೋಗದ ಅಧ್ಯಕ್ಷರು ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಹಾಗೂ ಸ್ಪಷ್ಟತೆಯೊಂದಿಗೆ ಜಾತಿ ಸಮೀಕ್ಷೆ ನಡೆಸಲಿ ಎಂದು ಅಭಿಪ್ರಾಯಪಟ್ಟರು.

ಜಾತ್ಯತೀತ ದೇಶದಲ್ಲಿ ಜಾತಿ ಸಮೀಕ್ಷೆ ನಡೆಸುವುದು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿದೆ.ಇದರ ಬದಲಿಗೆ ಎಲ್ಲಾ ಜಾತಿ ಸಮುದಾಯಗಳ ಆರ್ಥಿಕ ಸಮೀಕ್ಷೆ ನಡೆಸಿದರೆ ಎಲ್ಲಾ ಜಾತಿಯ ಸಮುದಾಯಗಳಿಗೆ ನ್ಯಾಯ ಸಿಗುವ ಅವಕಾಶ ಇದೆ ಎಂದರು.

ಸರ್ಕಾರ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ಜಾತ್ಯತೀತವಾಗಿ ನೀಡಿದಾಗ ನಾವು ಕೂಡ ಸ್ವಾಗತಿಸಿದ್ದೆವು ಎಂದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ