ಸುಭಾಷ್ ಚಂದ್ರ ಬೋಸ್ ಭವಿಷ್ಯ ಭಾರತದ ಬಗ್ಗೆ ಹೆಚ್ಚಿನ ಕನಸು ಕಂಡಿದ್ದರು: ಕೇಶವಮೂರ್ತಿ

KannadaprabhaNewsNetwork |  
Published : Jan 24, 2025, 12:47 AM IST
23ಕೆಎಂಎನ್ ಡಿ11 | Kannada Prabha

ಸಾರಾಂಶ

ದೇಶದ ಹೊರಗೆ ಉಳಿದುಕೊಂಡು ಬ್ರಿಟಿಷರ ವಿರುದ್ಧವೇ ಹೋರಾಟಲು ಶಕ್ತಿಯುತವಾದ ಸೈನ್ಯ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ, ನೇತಾಜಿ ಅವರು ತಮ್ಮ ಚಾಣಾಕ್ಷತನದಿಂದ ಒಂದು ಬಲಿಷ್ಟ ಸೈನ್ಯ ಕಟ್ಟಿದ್ದರು. ಸುಭಾಷ್ ಅವರನ್ನು ಕಂಡರೆ ಬ್ರಿಟಿಷರಿಗೆ ನಡುಕ ಉಂಟುತ್ತಿತ್ತು. ನೇತಾಜಿ ಅವರು ಮಂದಗಾಮಿ ಹೋರಾಟದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂಬ ಮನೋಭಾವ ಹೊಂದಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಷ್ ಚಂದ್ರ ಬೋಸ್ ಭವಿಷ್ಯ ಭಾರತದ ಬಗ್ಗೆ ಅತ್ಯಂತ ಹೆಚ್ಚಿನ ಕನಸು ಕಂಡಿದ್ದರು ಎಂದು ಫ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘ ಮತ್ತು ನೇತಾಜಿ ಕ್ರೀಡಾ ಬಳಗ ಗುರುವಾರ ಆಯೋಜಿಸಿದ್ದ ಸುಭಾಷ್ ಚಂದ್ರ ಬೋಸ್ ಅವರ 128ನೇ ಜಯಂತಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದ ಹೊರಗೆ ಉಳಿದುಕೊಂಡು ಬ್ರಿಟಿಷರ ವಿರುದ್ಧವೇ ಹೋರಾಟಲು ಶಕ್ತಿಯುತವಾದ ಸೈನ್ಯ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ, ನೇತಾಜಿ ಅವರು ತಮ್ಮ ಚಾಣಾಕ್ಷತನದಿಂದ ಒಂದು ಬಲಿಷ್ಟ ಸೈನ್ಯ ಕಟ್ಟಿದ್ದರು ಎಂದರು.

ಸುಭಾಷ್ ಅವರನ್ನು ಕಂಡರೆ ಬ್ರಿಟಿಷರಿಗೆ ನಡುಕ ಉಂಟುತ್ತಿತ್ತು. ನೇತಾಜಿ ಅವರು ಮಂದಗಾಮಿ ಹೋರಾಟದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂಬ ಮನೋಭಾವ ಹೊಂದಿದ್ದರು. ದೇಶದ ಸ್ವಾತಂತ್ರ್ಯಕ್ಕೂ ಮುನ್ನ ನೇತಾಜಿ ಅವರು ಅಂಡೋಮನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸ್ವಾತಂತ್ರ್ಯ ಕೊಡಿಸಿದ್ದರು. ಬಳಿಕ ಅಲ್ಲಿದ್ದ ಕಾರಾಗೃಹ ಸುಟ್ಟುಹಾಕಿ, ಸಾವಿರಾರು ಭಾರತೀಯರ ಹೋರಾಟಗರರು ಇದ್ದ ಕಾರಾಗೃಹಕ್ಕೆ ಕೈಮುಗಿದಿದ್ದರು ಎಂದರು.

ಉಪನ್ಯಾಸಕಿ ವೀಣಾ ಮಾತನಾಡಿ, ದೇಶದ ಸ್ವಾಂತ್ರ್ಯ ಸಂಗ್ರಾಮ ಎಂದರೆ ನೂರಾರು ಹೋರಾಟಗಾರು ನೆನಪಿಗೆ ಬರುತ್ತಾರೆ. ಅದರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಅಗ್ರಗಣ್ಯರು ಕೇಳಿದ ತಕ್ಷಣ ನರ ನಾಡಿಗಳ ಎದ್ದು ನಿಲ್ಲುತ್ತದೆ ಎಂದರು.

ಹೋರಾಟದಲ್ಲಿ ಅಂತಹ ಮಹಾನ್ ಚೈತನ್ಯ ಹೊಂದಿದ್ದ ವ್ಯಕ್ತಿ ಎಂದರೆ ತಪ್ಪಗಲಾರದು. ಸುಭಾಷ್ ಚಂದ್ರ ಬೋಸ್ ಅವರು ಹುಟ್ಟಿದ ದಿನವನ್ನು ಶೌರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೈ ಹಿಂದ್, ಭಾರತ ಮಾತೆಗೆ ಜೈ ಎಂಬ ಘೋಷ ವಾಕ್ಯಗಳು ಮೊದಲಿಗೆ ಹೇಳಿದ್ದೇ ನೇತಾಜಿ ಅವರು, ಬಾಲ್ಯದಲ್ಲೇ ಬೋಸ್ ಅವರಿಗೆ ಉದಾತ ಚಿಂತನೆಗಳಿದ್ದವು ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟಿಷರರ ವರ್ತನೆಯನ್ನು ಖಂಡಿಸುವ ಧೈರ್ಯ ಮಾಡಿದ್ದರು. ಸುಭಾಷ್ ಚಂದ್ರ ಬೋಸ್ ಅವರಿಗೆ ಪಾಠ ಹೇಳಿಕೊಟ್ಟ ಶಿಕ್ಷಕರು ಒಂದು ಕಡೆ ಪ್ರಭಾವ ಬೀರಿದ್ದರು. ಅದಕ್ಕಿಂತ ಹೆಚ್ಚಾಗಿ ಸ್ವಾಮಿ ವಿವೇಕಾನಂದರ ಅಖಂಡ ಪ್ರಭಾವಕ್ಕೆ ಒಳಗಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆಂಪೇಗೌಡ, ನಿವೃತ್ತ ದೈಹಿಕ ಶಿಕ್ಷಕ ಮಲ್ಲಿಕಾರ್ಜುನೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಮಂಜುನಾಥ್ ದೈಹಿಕ ಶಿಕ್ಷಕರಾದ ಕಡತನಾಳು ಶ್ರೀನಿವಾಸ್ ಇತರರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ