ಮಂಡ್ಯದಲ್ಲಿ ಜು.೨೯ರಂದು ಸುಭಾಷ್ ಪಾಳೇಕರ್ ಕೃಷಿ ಕಾರ್ಯಾಗಾರ

KannadaprabhaNewsNetwork |  
Published : Jul 25, 2025, 12:30 AM IST
ಜು.೨೯ರಂದು ಸುಭಾಷ್ ಪಾಳೇಕರ್ ಕೃಷಿ ಕಾರ್ಯಾಗಾರ | Kannada Prabha

ಸಾರಾಂಶ

ನಿರ್ಮಲ ಭೂಮಾತಾ ಟ್ರಸ್ಟ್ ವತಿಯಿಂದ ಡಾ.ಸುಭಾಷ್ ಪಾಳೇಕಾರ್ ಅವರ ೭೬ನೇ ಜನ್ಮದಿನದ ಅಂಗವಾಗಿ ಗುರುವಂದನೆ, ಎಸ್‌ಪಿಕೆ (ಸುಭಾಷ್ ಪಾಳೇಕಾರ್ ಕೃಷಿ ಕಾರ್ಯಾಗಾರ) ರೈತರ ಸೇರ್ಪಡೆ ಹಾಗೂ ಒಂದು ದಿನದ ಜಿಲ್ಲಾ ಮಟ್ಟದ ಕೃಷಿ ಕಾರ್ಯಾಗಾರವನ್ನು ಜು.೨೯ರ ಬೆಳಗ್ಗೆ ೯ರಿಂದ ಸಂಜೆ ೪ವರೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿರ್ಮಲ ಭೂಮಾತಾ ಟ್ರಸ್ಟ್ ವತಿಯಿಂದ ಡಾ.ಸುಭಾಷ್ ಪಾಳೇಕಾರ್ ಅವರ ೭೬ನೇ ಜನ್ಮದಿನದ ಅಂಗವಾಗಿ ಗುರುವಂದನೆ, ಎಸ್‌ಪಿಕೆ (ಸುಭಾಷ್ ಪಾಳೇಕಾರ್ ಕೃಷಿ ಕಾರ್ಯಾಗಾರ) ರೈತರ ಸೇರ್ಪಡೆ ಹಾಗೂ ಒಂದು ದಿನದ ಜಿಲ್ಲಾ ಮಟ್ಟದ ಕೃಷಿ ಕಾರ್ಯಾಗಾರವನ್ನು ಜು.೨೯ರ ಬೆಳಗ್ಗೆ ೯ರಿಂದ ಸಂಜೆ ೪ವರೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಜೆ.ಅನಂತರಾವ್ ತಿಳಿಸಿದರು.

ಸುಭಾಷ್ ಪಾಳೇಕಾರ್ ಕೃಷಿಯನ್ನು ಹೊಸದಾಗಿ ಸ್ವಯಂಪ್ರೇರಿತವಾಗಿ ಪ್ರಾರಂಭಿಸಲು ಇಚ್ಛಿಸುವ ರೈತರ ಸೇರ್ಪಡೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ ಸಿಇಓ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಂಟಿ ಕೃಷಿ ನಿರ್ದೇಶಕ, ಸಹಾಯಕ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನುರಿತ ನೈಸರ್ಗಿಕ ಕೃಷಿಕರಿಂದ ತರಬೇತಿ ಕಾಯಾಗಾರ ಇರಲಿದ್ದು, ಜಿಲ್ಲೆಯ ಪ್ರತಿ ತಾಲೂಕಿನಿಂದ ೫೦ ಮಂದಿ ರೈತರು ಭಾಗವಹಿಸುವಂತೆ ಮನವಿ ಮಾಡಿದ್ದು, ಅದರಂತೆ ಜಿಲ್ಲೆಯಿಂದ ೩೦೦ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಎಸ್‌ಪಿಕೆ ಮಾದರಿಯಲ್ಲಿ ೧೦ ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದು ಬೆಲ್ಲ ತಯಾರಿಸಿ ನೇರ ಮಾರಾಟದಿಂದ ೧ ಲಕ್ಕ ರು.ಗೂ ಅಧಿಕ ಆದಾಯ ಗಳಿಕೆ ಸಾಧ್ಯವಿದೆ. ರಾಜಮುಡಿ ಬೆಳೆಯ ಭತ್ತದಿಂದ ೧ ಎಕರೆಗೆ ೧೩ ಕ್ವಿಂಟಲ್ ಅಕ್ಕಿ ದೊರೆಯಲಿದ್ದು, ಒಂದು ಕೆಜಿಗೆ ರಾಜಮುಡಿ ಅಕ್ಕಿಯ ಬೆಲೆ ೧೦೦ ರು.ಗಳಿದ್ದು, ೧.೩೦ ಲಕ್ಷ ರು. ಗಳಿಸಬಹುದಾಗಿದೆ ಎಂದು ವಿವರಣೆ ನೀಡಿದರು.

ಕಾರ್ಯಾಗಾರದಲ್ಲಿ ರಾಸಾಯನಿಕ ಬಳಸದೆ, ವಿಷಮುಕ್ತವಾಗಿ ಬೀಜಾಮೃತ, ಜೀವಾಮೃತ, ಹೊದಿಕೆ, ಆದ್ರತೆ ಬಳಸಿ ಭತ್ತ, ರಾಗಿ, ತರಕಾರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ವಿಸ್ತಾರ ತರಬೇತಿ ಇರಲಿದೆ. ಭಾಗವಹಿಸಲು ನೋಂದಾಯಿಸುವವರು ಮೊಬೈಲ್ ನಂ: ೯೭೩೯೫೯೭೫೯೦, ೯೬೬೩೪೩೮೭೦೦, ೯೯೭೨೮೪೮೨೦೧, ೯೯೮೬೮೮೩೭೯೯, ೯೯೧೬೨೩೧೮೦೪, ೯೪೧೭೬೩೦೪೨೧, ೮೯೭೦೭೭೭೭೮೯ ಸಂಖ್ಯೆಗೆ ಸಂಪರ್ಕಿಸಿ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್, ಕಾರ್ಯದರ್ಶಿ ದಯಾನಂದ, ಸದಸ್ಯರಾದ ಚಂದ್ರಶೇಖರ್, ವೆಂಕಟೇಶ್ ಇದ್ದರು.

ಆ.2ರಂದು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಮಂಡ್ಯ: ಆಗಸ್ಟ್ 2 ರಂದು 2025-26ನೇ ಸಾಲಿನ 2025ರ ಜೂನ್ ಮಾಹೆವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜುಲೈ 30 ರಂದು ನಿಗಧಿಪಡಿಸಿದ್ದ ಸಭೆಯನ್ನು ಕಾರಣಾಂತರಗಳಿಂದ ಸದರಿ ಮುಂದೂಡಲ್ಪಟ್ಟಿದ್ದು, ಆಗಸ್ಟ್ 2 ರ ಬೆಳಗ್ಗೆ:10.30 ಗಂಟೆಗೆ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಧಿಕಾರಿಗಳು ಸಭೆಗೆ ತಮ್ಮ ಅಧೀನ ಸಿಬ್ಬಂದಿ, ಅಧಿಕಾರಿಗಳನ್ನು ನಿಯೋಜಿಸದೇ ಸಂಬಂಧಪಟ್ಟ ಅಧಿಕಾರಿಗಳೇ ಮಾಹಿತಿಯೊಡನೆ ಖುದ್ದು ಹಾಜರಾಗಬೇಕೆಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ