ಸರ್ಕಾರಿ ನೌಕರರ ತಾಲೂಕು ನಿರ್ದೇಶಕರ 24 ಸ್ಥಾನಗಳಿಗೆ 70 ನಾಮಪತ್ರ ಸಲ್ಲಿಕೆ: ಸಿ.ರಮೇಶ್

KannadaprabhaNewsNetwork |  
Published : Oct 23, 2024 12:36 AM IST
19ಕೆಎಂಎನ್ ಡಿ23 | Kannada Prabha

ಸಾರಾಂಶ

ಕೃಷಿ ಇಲಾಖೆಯಿಂದ ಒಂದು, ಪಶು ಮತ್ತು ಪಶು ಪಾಲನೆ ಮೀನುಗಾರಿಕೆ ಇಲಾಖೆ ವತಿಯಿಂದ ಎರಡು, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯಿಂದ ಒಂದು, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದಿಂದ ಒಂದು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆ ಸಂಘದ 24 ನಿರ್ದೇಶಕರ ಸ್ಥಾನಗಳಿಗೆ ಅ.28 ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶುಕ್ರವಾರ ಸಂಜೆ ವೇಳೆಗೆ ಒಟ್ಟು 70 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಿ.ರಮೇಶ್ ತಿಳಿಸಿದರು.

ಕೃಷಿ ಇಲಾಖೆಯಿಂದ ಒಂದು, ಪಶು ಮತ್ತು ಪಶು ಪಾಲನೆ ಮೀನುಗಾರಿಕೆ ಇಲಾಖೆ ವತಿಯಿಂದ ಎರಡು, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯಿಂದ ಒಂದು, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದಿಂದ ಒಂದು ನಾಮಪತ್ರ ಸಲ್ಲಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆ ಮೂರು, ಪ್ರೌಢಶಾಲೆ ಎರಡು, ಸಾರ್ವಜನಿಕ ಆಡಳಿತ ಕಚೇರಿ ಒಂದು, ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಎರಡು, ಸಮಾಜ ಕಲ್ಯಾಣ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತ ಇಲಾಖೆ ತಲಾ ಮೂರು, ಅರಣ್ಯ ಇಲಾಖೆ ಒಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಪೌರಾಡಳಿತ ಕಚೇರಿ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ.

ತೋಟಗಾರಿಕೆ, ರೇಷ್ಮೆ ಇಲಾಖೆ, ಖಜಾನೆ, ಭೂಮಾಪನ. ಕಂದಾಯ, ದಾಖಲೆ ತಲಾ ಒಂದು, ನ್ಯಾಯಾಂಗ ಇಲಾಖೆ ಒಂದು, ತಾಪಂ ಕಚೇರಿ ಎರಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಂದು, ಆಹಾರ ಮತ್ತು ನಾಗರಿಕ, ಎಪಿಎಂಸಿ, ಸಹಕಾರ ಇಲಾಖೆ ಒಂದು, ಲೆಕ್ಕ ಪರಿಶೀಲನ ಇಲಾಖೆ ಒಂದು, ಅಬಕಾರಿ ಮತ್ತು ಕಾರ್ಮಿಕ ಇಲಾಖೆ ಒಂದು ಕೈಗಾರಿಕಾ ತರಬೇತಿ ಸಂಸ್ಥೆ ಒಂದು ಸೇರಿದಂತೆ 24 ಕ್ಷೇತ್ರಗಳಿಂದ ಒಟ್ಟು 70 ಮಂದಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ರಮೇಶ್ ತಿಳಿಸಿದ್ದಾರೆ. ಸಹಾಯಕಚುನಾವಣಾ ಅಧಿಕಾರಿ ಶಿವಣ್ಣ ಇದ್ದರು.

PREV