ಸವಾಲುಗಳ ಮಧ್ಯೆಯೇ ಸಾಧನೆ ಮಾಡಿ

KannadaprabhaNewsNetwork |  
Published : May 08, 2025, 12:33 AM IST
ಸನ್ಮಾನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಓದಿನೊಂದಿಗೆ ಸಾಧನೆ ಮಾಡಲು ಬಡತನ ಅಡ್ಡಿಯಾಗಲಾರದು. ನನ್ನ ಸಾಧನೆಗೆ ಕುಟುಂಬದ ಪಾತ್ರ ದೊಡ್ಡದು ಎಂದು ಯುಪಿಎಸ್‌ಸಿ ಟಾಪರ್‌ ಡಾ.ಮಹೇಶ ಮಡಿವಾಳರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಓದಿನೊಂದಿಗೆ ಸಾಧನೆ ಮಾಡಲು ಬಡತನ ಅಡ್ಡಿಯಾಗಲಾರದು. ನನ್ನ ಸಾಧನೆಗೆ ಕುಟುಂಬದ ಪಾತ್ರ ದೊಡ್ಡದು ಎಂದು ಯುಪಿಎಸ್‌ಸಿ ಟಾಪರ್‌ ಡಾ.ಮಹೇಶ ಮಡಿವಾಳರ ಹೇಳಿದರು.

ಪಟ್ಟಣದ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾಲೇಜು ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ದಿಕ್ಕನ್ನು ಬದಲಾಯಿಸುವುದೇ ಪದವಿ. ಮಹಿಳೆ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿಯಲ್ಲಿಯೇ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಓದಿನಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಣ, ಶಾಂತಿ, ಸತ್ಯ, ಅಹಿಂಸೆ ಮಾರ್ಗದಿಂದ ಮೊದಲು ಎಲ್ಲವನ್ನು ಪಾಲಿಸೋಣ. ವಿದ್ಯಾರ್ಥಿಗಳು ಓದಿನಲ್ಲಿ ನಿರಂತರತೆ ಇದ್ದರೆ ಮಾತ್ರ ಅಂದುಕೊಂಡ ಗುರಿ ಸಾಧಿಸಲು ಸಾಧ್ಯ. ಮಹಾವಿದ್ಯಾಲಯದ ಐಎಎಸ್‌, ಕೆಎಎಸ್ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ರೀತಿಯ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಹೇಳಲು ನಾನು ಸದಾ ಸಿದ್ದ ಎಂದು ಕಿವಿಮಾತು ಹೇಳಿದರು.ಮಹಿಳಾ ಪಪೂ ಕಾಲೇಜ ನಿವೃತ್ತ ಪ್ರಾಚಾರ್ಯ ಎಂ.ಎಸ್.ಹೈಯಾಳಕರ ಮಾತನಾಡಿ, ಕೀಳರಿಮೆಯಿಂದ ಹೊರಬಂದು ಬೆಳೆಯಬೇಕು. ಮಹಿಳಾ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ಸಂಸ್ಥೆ ಮತ್ತು ಕಾಲೇಜಿನ ಕೀರ್ತಿ ಬೆಳಗಿಸುವಂತೆ ತಿಳಿಸಿದರು.ಮಹಿಳಾ ವಿವಿಗೆ ರ್‍ಯಾಂಕ್‌ ಬಂದ ಬಿಎಸ್‌ಡಬ್ಲ್ಯೂ ವಿಭಾಗದ ಐಶ್ವರ್ಯ ತಮದೊಡ್ಡಿ ಹಾಗೂ ವಿವಿಯ ಖೋ-ಖೋ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆಯಾದ ವಿದ್ಯಾರ್ಥಿನಿ ಸಿದ್ದಮ್ಮ ಬಿರಾದಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರಾಚಾರ್ಯ ಎಸ್.ಎಂ.ಪೂಜಾರಿ ಮಾತನಾಡಿದರು.

ಈ ವೇಳೆ ಪ್ರಾಚಾರ್ಯ ವಿ.ಡಿ.ಪಾಟೀಲ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ವಿ.ಪಿ.ನಂದಿಕೋಲ, ಜಿ.ಎಸ್.ಕುಲಕರ್ಣಿ, ಎ.ಆರ್.ರಜಪೂತ, ಯು.ಸಿ.ಪೂಜೇರಿ, ಎಸ್.ಎನ್.ಕುಂದಗೋಳ, ಎನ್.ಬಿ.ಬಿರಾದಾರ, ಎಂ.ಕೆ.ಬಿರಾದಾರ, ಬಿ.ಬಿ.ನಂದಿಮಠ, ಜಿ.ವಿ.ಪಾಟೀಲ, ಎಂ.ಎಂ.ಈಳಗೇರ, ಎಸ್.ಎಸ್.ದುದ್ದಗಿ, ಡಿ.ಎಂ.ಪಾಟೀಲ, ಸತೀಶ ಕಕ್ಕಸಗೇರಿ, ಹೇಮಾ ಕಾಸರ, ಶಂಕರ ಕುಂಬಾರ, ಮಮತಾ ಹರನಾಳ, ವಿಜಯಲಕ್ಷ್ಮೀ ಭಜಂತ್ರಿ ಸೇರಿ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಈ ವೇಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಎಸ್.ಸಿ.ದುದ್ದಗಿ ವರದಿ ವಾಚಿಸಿದರು. ಉಪನ್ಯಾಸಕಿ ಹೇಮಾ ಹಿರೇಮಠ ಸ್ವಾಗತಿಸಿದರು. ವಿದ್ಯಾರ್ಥಿ ವಿಶಾಲಾಕ್ಷಿ ಬಿರಾದಾರ ಪ್ರಾರ್ಥಿಸಿದರು. ಮಧುಶ್ರೀ ಮತ್ತು ಸೀಮಾ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾಜ ಗೋಲಗೇರಿ ವಂದಿಸಿದರು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ