ಬಾಳೆಹೊನ್ನೂರು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶ್ರದ್ಧೆ, ಆಸಕ್ತಿ ಹೊಂದಿದರೆ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಜೇಸಿಐ ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್ ಹೇಳಿದರು.
ಚಿನ್ನದ ಪದಕ ಪಡೆದ ವಸಂತಕುಮಾರ್‌ಗೆ ಜೇಸಿಐ ಸನ್ಮಾನಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶ್ರದ್ಧೆ, ಆಸಕ್ತಿ ಹೊಂದಿದರೆ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಜೇಸಿಐ ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್ ಹೇಳಿದರು.ಸಂಗಮೇಶ್ವರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ ಸಾಧನೆಗೆ ಸನ್ಮಾನ- ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಎಂಎ ಸ್ನಾತಕೋತ್ತರ ಪದವಿಯಲ್ಲಿ ಹತ್ತು ಚಿನ್ನದ ಪದಕ ಪಡೆದ ವಸಂತಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.ಪ್ರಪಂಚದಲ್ಲಿ ಮನುಷ್ಯ ಅತೀ ವಿಶೇಷ ವ್ಯಕ್ತಿಯಾಗಿದ್ದು, ಜ್ಞಾನಕ್ಕಿಂತ ಮಿಗಿಲಾದ ವಸ್ತು ಬೇರೊಂದಿಲ್ಲ. ವಿದ್ಯೆ ಜೀವನದಲ್ಲಿ ಅತೀ ಪವಿತ್ರವಾದದ್ದು. ಜಾನದಿಂದಲೇ ಇಹ, ಪರ. ಜ್ಞಾನವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಮನುಷ್ಯನ ಜೀವನದಲ್ಲಿ ಜ್ಞಾನ ಬಹಳ ಮುಖ್ಯವಾದದ್ದು ಎಂದರು.ಜ್ಞಾನ, ಶ್ರದ್ಧೆ, ಆಸಕ್ತಿ ಇದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡ ಬಹುದು. ಜೀವನದಲ್ಲಿ ಯಶಸ್ಸು ಕಾಣಲು ಆತ್ಮವಿಶ್ವಾಸ, ಶಿಸ್ತುಬದ್ಧ, ಸೃಜನಶೀಲತೆ, ಸಮಯಪ್ರಜ್ಞೆ ಇರಬೇಕು. ಈ ನಿಟ್ಟಿನಲ್ಲಿ ವಸಂತಕುಮಾರ್ ಅಧ್ಯಯನಶೀಲರಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.ಮುಖ್ಯಶಿಕ್ಷಕ ಅಂಜನಪ್ಪ ಮಾತನಾಡಿ, ಸರ್ಕಾರಿ ಶಾಲೆಗೆ ಬರುವ ಹೆಚ್ಚಿನ ಮಕ್ಕಳು ಕೂಲಿ ಕಾರ್ಮಿಕರು, ಮದ್ಯಮ ವರ್ಗದಿಂದ ಬಂದಿದ್ದು, ಹಲವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಶಿಕ್ಷಣ ಎಂಬುದು ಎಲ್ಲ ಅಂಧಃಕಾರ ದೂರ ಮಾಡಲಿದ್ದು, ಪ್ರಪಂಚದಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಆಯುಧ ಶಿಕ್ಷಣವಾಗಿದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದರೆ ಜಗತ್ತಿನಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದಾಗಿದೆ ಎಂದರು.
ಉದ್ಯಮಿ ಕಾಫಿ ಗಿರೀಶ್ ಮಾತನಾಡಿ, ಹತ್ತು ಚಿನ್ನದ ಪದಕ ಪಡೆದ ವಸಂತ್ ಅವರ ಸಾಧನೆ ಚಿಕ್ಕಮಗಳೂರು ಜಿಲ್ಲೆಗೆ ಮಾದರಿ. ವಸಂತ್ ಅವರಲ್ಲಿ ಗುರಿ ಹಾಗೂ ಸ್ಪಷ್ಟತೆಯಿದ್ದು, ಅದು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯ ಎಂದರು.
ಇಂದಿನ ಹಲವರು ಸಾಧನೆ ಮಾಡಿದ ಬಳಿಕ ವಾಸ್ತವವನ್ನೆ ಮರೆಯುತ್ತಾರೆ. ಆದರೆ ವಸಂತ್ ಘಟಿಕೋತ್ಸವದಲ್ಲಿ ಪದಕ ಪಡೆದ ಬಳಿಕ ತಮ್ಮ ಸ್ವಗ್ರಾಮ, ತಂದೆ, ತಾಯಿಯರನ್ನು ಮೊದಲು ನೆನೆದಿದ್ದಾರೆ. ಇದು ಅವರ ಉತ್ತಮ ನಡವಳಿಕೆಗೆ ಸಾಕ್ಷಿ ಎಂದರು.
ಸನ್ಮಾನ ಸ್ವೀಕರಿಸಿದ ವಸಂತಕುಮಾರ್ ಮಾತನಾಡಿ, ಜೇಸಿಐ ಸಂಸ್ಥೆ ಕುವೆಂಪುರವರ ಆಶಯದಂತೆ ಮನುಜ ಮತ, ವಿಶ್ವ ಪಥಕ್ಕೆ ಸರಿ ಸಮನಾದ ಸಂಸ್ಥೆಯಾಗಿದ್ದು, ಎಲ್ಲ ಜಾತಿ, ಮತ, ಪಂಥದ ಜನರು ಒಗ್ಗೂಡಿ ಸಂಸ್ಥೆ ಮುನ್ನಡೆಸುತ್ತಿರುವುದು ಶ್ಲಾಘನೀಯ. ದೇಶ ಕಟ್ಟಲು ಯುವಜನರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟ, ಇಷ್ಟಪಟ್ಟು ಓದಿದರೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಹಕಾರಿ. ನಾನು ಸಹ ಪ್ರಾಥಮಿಕ ಶಾಲೆಯಿಂದ ಎಂಎವರೆಗೆ ಸರ್ಕಾರಿ ಶಾಲಾ, ಕಾಲೇಜು ಗಳಲ್ಲಿಯೇ ಶಿಕ್ಷಣ ಪಡೆದಿದ್ದು ಶಿಕ್ಷಕ, ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಜೆ.ಜಯಶೀಲ್, ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಪೂರ್ವಾಧ್ಯಕ್ಷ ಸುಧಾಕರ್, ಮನುಕುಮಾರ್, ಪ್ರಮುಖರಾದ ಯತೇ ಶ್ಯಾಮ್, ವಿ.ಅಶೋಕ, ಕೆ.ಆರ್.ತಿಲಕ್, ವಿನಯ್ ಉಜ್ಜಿನಿ, ರಂಜಿತ್, ಎಚ್.ಪಿ.ಕಾರ್ತಿಕ್ ಹೊಸಮನೆ, ಓ.ಡಿ.ಸ್ಟೀಫನ್, ಬಿ.ಎಸ್.ನಾಗರಾಜಭಟ್ ಮತ್ತಿತರರು ಹಾಜರಿದ್ದರು.೦೮ಬಿಹೆಚ್‌ಆರ್ ೧:
ಕುವೆಂಪು ವಿವಿ ಎಂಎ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಹತ್ತು ಚಿನ್ನದ ಪದಕ ಪಡೆದ ವಸಂತಕುಮಾರ್ ಅವರನ್ನು ಬಾಳೆಹೊನ್ನೂರು ಜೇಸಿಐ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಇಬ್ರಾಹಿಂ ಶಾಫಿ, ಸೈಯ್ಯದ್ ಫಾಜಿಲ್, ಕಾಫಿ ಗಿರೀಶ್, ಎಸ್.ಜೆ.ಜಯಶೀಲ್, ಅಂಜನಪ್ಪ, ಶಶಿಧರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.