, ಆನೆ ದಾಳಿಗೆ ಸಿಲುಕಿದ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕತ್ಲೇಖಾನ್ ಕಾಫಿ ಎಸ್ಟೇಟ್‌ನಲ್ಲಿ ಶನಿವಾರ ನಡೆದಿದೆ.
ತರೀಕೆರೆ : ಆನೆ ದಾಳಿಗೆ ಸಿಲುಕಿದ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕತ್ಲೇಖಾನ್ ಕಾಫಿ ಎಸ್ಟೇಟ್‌ನಲ್ಲಿ ಶನಿವಾರ ನಡೆದಿದೆ.
ವಿಜಯನಗರ ಜಿಲ್ಲೆ, ಹರಪ್ಪನಹಳ್ಳಿ ತಾಲೂಕು ಶಿವಪುರ ಗ್ರಾಮದ ವಿನೋದಬಾಯಿ (40) ಮೃತ ಮಹಿಳೆ. ವಿನೋದಬಾಯಿ ಮತ್ತು ಅವರ ಕುಟುಂಬ ಕಾಫಿ ಕೆಲಸಕ್ಕಾಗಿ ಕತ್ಲೇಖಾನ್ ಎಸ್ಟೇಟ್‌ಗೆ ಬಂದಿದ್ದರು. ವಿನೋದಬಾಯಿ ಮತ್ತು ಇತರೆ ಕಾರ್ಮಿಕರು ಕೆಲಸಕ್ಕೆ ಹೊರಟಿದ್ದರು. ಶನಿವಾರ ಬೆಳಿಗ್ಗೆ ರಸ್ತೆ ಬದಿ ನಿಂತಿದ್ದ ಮೂರು ಕಾಡಾನೆಗಳು ಕಾಫಿ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ದಾಳಿ ನಡೆಸಿವೆ. ಏಕಾಏಕಿ ಆನೆ ದಾಳಿಗೆ ಹೆದರಿದ ಇತರೆ ಕಾರ್ಮಿಕರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಆದರೆ ಆನೆ ವಿನೋದಬಾಯಿ ಮೇಲೆ ದಾಳಿ ನಡೆಸಿದ್ದರಿಂದ ಸ್ಥಳದಲ್ಲಿಯೇ ಆಕೆ ಸಾವನ್ನಪ್ಪಿದ್ದಾರೆ.ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತ ವಿನೋದಬಾಯಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕಾಡು ಪ್ರಾಣಿಗಳು ಬೆಳೆಗಳ ಮೇಲೆ ಮತ್ತು ಮಾನವರ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿವೆ. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ. ರೈಲ್ವೇ ಬ್ಯಾರಿಕೇಡ್ ಅಳವಡಿ ಸುವಂತೆ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಡುಪ್ರಾಣಿಗಳ ಹಾವಳಿ ನಡೆಯುತ್ತಿರುವುದರಿಂದ ವಿದ್ಯುತ್ ಬೇಲಿ ಅಳವಡಿಸಿಕೊಳ್ಳುವಂತೆ ಸಂಬಂಧಿಸಿದ ಎಸ್ಟೇಟ್ ಮಾಲೀಕರಿಗೆ ತಿಳಿಸಲಾಗಿದೆ. ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಮೃತರ ಕುಟುಂಬಕ್ಕೆ ₹15 ಲಕ್ಷ ಚೆಕ್ ನೀಡಲಾಯಿತು.ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್‌ರೆಡ್ಡಿ, ರಮೇಶ್‌ಬಾಬು, ನಂದೀಶ್, ಎಸಿಎಫ್‌ಗಳಾದ ಸಂತೋಷ್‌ಸಾಗರ್, ಶಿವರಾತ್ರಿಸ್ವಾಮಿ, ಆರ್‌ಎಫ್‌ಒ ಸುಧಾಕರ್ ಹಾಗೂ ಇತರರು ಹಾಜರಿದ್ದರು.8ಕೆಟಿಆರ್.ಕೆ.12ಃ
ಕತ್ಲೇಖಾನ್ ಎಸ್ಟೇಟ್‌ನಲ್ಲಿ ಆನೆ ದಾಳಿಯಿಂದ ಮೃತಪಟ್ಟ ವಿನೋದಬಾಯಿ.