ಕಾಯಕ ನಿಷ್ಠೆ ಕಾರ್ಯದಿಂದ ಜೀವನದಲ್ಲಿ ಸಾಧನೆ

KannadaprabhaNewsNetwork |  
Published : Jan 24, 2025, 12:47 AM IST
ಕಾರ್ಯಕ್ರಮವನ್ನ ಸಾಹಿತಿ ಬಿ.ಎಂ.ಹರಪ್ಪನಹಳ್ಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವ್ಯಾಪಾರಿಗಳು ದುರ್ಮಾರ್ಗಳಿಗೆ ಇಳಿದು ವ್ಯಾಪಾರ ಮಾಡಿದ ಎಲ್ಲ ಹಣ ಕಳೆದುಕೊಳ್ಳಬೇಡಿ, ನಿಮ್ಮ ವ್ಯಾಪಾರದ ಮೇಲೆ ಇಡೀ ನಿಮ್ಮ ಕುಟುಂಬ ಅವಲಂಬಿತವಾಗಿರುತ್ತೇ ಅವರಿಗೆ ಮೊಸ ಮಾಡಬೇಡಿ. ಹೀಗೆ ಒಗ್ಗಟಾಗಿ ವ್ಯಾಪಾರ ನಡೆಸಿ

ಮುಳಗುಂದ: ಬಿಸಿಲು, ಗಾಳಿ, ಮಳೆ ಎನ್ನದೆ ತಮ್ಮ ವ್ಯಾಪಾರದ ಮೂಲಕ ಸ್ವಾಭಿಮಾನದ ಜೀವನ ನಡೆಸುತ್ತಾರೆ‌. ಕಾಯಕದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದವರು ಜೀವನದಲ್ಲಿ ಸಾಧನೆ ಮಾಡುತ್ತಾರೆ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.

ಪಟ್ಟಣದ ಗಾಂಧಿಕಟ್ಟಿ ಹತ್ತಿರದ ವಾಣಿಜ್ಯ ಮಳಿಗೆ ಮೇಲಗಡೆ ಕರ್ನಾಟಕ ಬೀದಿ ವ್ಯಾಪಾರಿ ಸಂಘಟನೆಗಳು ಒಕ್ಕೂಟ ಹಾಗೂ ವಿಕಾಸ ಪ್ರಧಾನ ಮಂತ್ರಿ ಸಮಾನ ಮನಸ್ಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ, ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವ ಹಾಗೂ ಸುಭಾಷಚಂದ್ರ ಭೋಷರ 128ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವ್ಯಾಪಾರಿಗಳು ದುರ್ಮಾರ್ಗಳಿಗೆ ಇಳಿದು ವ್ಯಾಪಾರ ಮಾಡಿದ ಎಲ್ಲ ಹಣ ಕಳೆದುಕೊಳ್ಳಬೇಡಿ, ನಿಮ್ಮ ವ್ಯಾಪಾರದ ಮೇಲೆ ಇಡೀ ನಿಮ್ಮ ಕುಟುಂಬ ಅವಲಂಬಿತವಾಗಿರುತ್ತೇ ಅವರಿಗೆ ಮೊಸ ಮಾಡಬೇಡಿ. ಹೀಗೆ ಒಗ್ಗಟಾಗಿ ವ್ಯಾಪಾರ ನಡೆಸಿ,ಅಭಿವೃದ್ಧಿ ಹೊಂದಿ ನಿಮ್ಮ ಜೀವನ ಸಂತೋಷದಿಂದ ಕಳೆಯಿರಿ ಎಂದರು.

ಸಾಹಿತಿ ಬಿ.ಎಂ. ಹರಪ್ಪನಹಳ್ಳಿ ಮಾತನಾಡಿ, ಕಲಿಯುಗದಲ್ಲಿ ಸಂಘಟನೆ ಮಾಡಿದರೆ ಅದೇ ಒಂದು ಶಕ್ತಿ. ಬೀದಿ ಬದಿ ವ್ಯಾಪಾರಿಗಳು ತಮ್ಮ ಕುಂದು ಕೊರತೆ ಬಗೆಹರಿಸಿಕೊಳ್ಳಲು ಪ್ರತಿ ತಿಂಗಳು ಸಭೆ ಸೇರಿ ಸಮಸ್ಯೆ ಬಗೆ ಹರಿಸಿಕೊಳ್ಳಿ, ನಿಮ್ಮದೆಯಾದ ಸಹಕಾರಿ ಸಂಘ, ಸಂಸ್ಥೆ ಮಾಡಿಕೊಂಡು ಸರ್ಕಾರದಿಂದ ಲಭ್ಯವಾಗುವ ಸಬ್ಸಿಡಿ, ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದರು.

ಸ್ವಾಮಿ ವಿವೇಕಾನಂದ ಅವರೊಬ್ಬ ವೀರ ಸನ್ಯಾಸಿ, ವಿದೇಶಗಳಲ್ಲಿ ಭಾವನಾತ್ಮಕ ಸಂಬಂಧಗಳೇ ಇಲ್ಲದ ಸಂದರ್ಭದಲ್ಲಿ ಅಲ್ಲಿ ಭಾವನಾತ್ಮಕ ಸಂಬಂಧ ಬಿತ್ತಿದವರು ಸ್ವಾಮಿ ವಿವೇಕಾನಂದರು. ಹಿಂದೂ ದೇಶದ ಸಾರ ವಿಶ್ವಾದ್ಯಂತ ಪರಿಚಯಿಸಿದವರು. ಅದೇ ರೀತಿ ನೇತಾಜಿ ಸುಭಾಷ್ ಚಂದ್ರ ಬೋಸ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಮಹಾನ್ ವೀರರು ಎಂದರು.

ಸಂಘದ ಅಧ್ಯಕ್ಷ ಭೀಮಪ್ಪ ಕೋಳಿ ಮಾತನಾಡಿ, ಪಟ್ಟಣದ ಮುಖ್ಯರಸ್ತೆಯು ಬಹಳ ಇಕ್ಕಟ್ಟಾಗಿದ್ದು, ವಾಹನ ದಟ್ಟನೆ ಹೆಚ್ಚಾಗಿದ್ದು, ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.ಆದ್ದರಿಂದ ಮಾರುಕಟ್ಟೆ ರಸ್ತೆ ಅಗಲೀಕರಣ ಮಾಡಲು ಚಿಂತನೆ ನಡೆಸಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುತ್ತೆ ಸಂಚಾರವು ಸುಗಮವಾಗುತ್ತೇ ಎಂದು ಮನವಿ ಮಾಡಿದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಎಸ್‌.ಸಿ. ಚವಡಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಸಮುದಾಯ ಸಂಘಟನಾಧಿಕಾರಿ ವಾಣಿಶ್ರೀ ನಿರಂಜನ ಸೇರಿದಂತೆ ಇತರರು ಮಾತನಾಡಿದರು.

ಪಪಂ ಅಧ್ಯಕ್ಷತೆ ಯಲ್ಲವ್ವ ಕವಲೂರ, ವಿ.ಡಿ.ಕಣವಿ, ಪಪಂ ಸದಸ್ಯ ಎಸ್‌.ಸಿ. ಬಡ್ನಿ, ಎ.ಎಸ್.ಐ ಈಶ್ವರ ಸಾದರ, ದೀಪಾ ಬಡಿಗೇರ, ಪ್ರಕಾಶ ಮದ್ದಿನ, ಶಿವಪ್ಪ ಕಾಳಿ, ನಾಗವ್ವ ಚಲವಾದಿ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!