ಭಗವಂತನಲ್ಲಿ ನಂಬಿಕೆಯಿಟ್ಟು ದುಡಿದಲ್ಲಿ ಯಶಸ್ಸು

KannadaprabhaNewsNetwork |  
Published : Aug 12, 2024, 01:07 AM IST
ಹೊನ್ನಾಳಿ ಫೋಟೋ 9ಎಚ್.ಎಲ್ ಐ1. ಹಿರೇಕಲ್ಮಠದಲ್ಲಿ ಶ್ರಾವಣ ಮಾಸದ ಪುಜಾ ಮತ್ತು ರಥೋತ್ಸವ ಅಂಗವಾಗಿ ಪ್ರತಿ ದಿನ ವೀರಶೈವ ಸಿದ್ದಾಂತ ಶಿಖಾಮಣಿ ಪ್ರವಚನದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು | Kannada Prabha

ಸಾರಾಂಶ

ಪ್ರತಿಯೊಬ್ಬರು ದಿನನಿತ್ಯದ ಕಾಯಕ ಮಾಡುವಾಗ ನಂಬಿಕೆಯಿಂದ ಭಗವಂತನನ್ನು ನೆನೆದರೆ ಯಾವ ಭಯ ಮತ್ತು ಕಷ್ಟ ಬರುವುದಿಲ್ಲ ಎಂದು ಡಾ. ಒಡೆಯರ ಚನ್ನಮಲ್ಲಿಕಾರ್ಜನ ಶಿವಚಾರ್ಯ ಸ್ವಾಮೀಜಿ ಹೊನ್ನಾಳಿಯಲ್ಲಿ ನುಡಿದಿದ್ದಾರೆ.

- ಶಿವಾನುಭವ ಮಂಟಪದಲ್ಲಿ ವೀರಶೈವ ಸಿದ್ದಾಂತ ಶಿಖಾಮಣಿ ಪ್ರವಚನ ಸಭೆ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರತಿಯೊಬ್ಬರು ದಿನನಿತ್ಯದ ಕಾಯಕ ಮಾಡುವಾಗ ನಂಬಿಕೆಯಿಂದ ಭಗವಂತನನ್ನು ನೆನೆದರೆ ಯಾವ ಭಯ ಮತ್ತು ಕಷ್ಟ ಬರುವುದಿಲ್ಲ ಎಂದು ಡಾ. ಒಡೆಯರ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹಿರೇಕಲ್ಮಠದ ಶಿವಾನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಶ್ರಾವಣ ಮಾಸದ ಪೂಜಾ ಮತ್ತು ರಥೋತ್ಸವ ಅಂಗವಾಗಿ ಪ್ರತಿದಿನ ವೀರಶೈವ ಸಿದ್ಧಾಂತ ಶಿಖಾಮಣಿ ಪ್ರವಚನದ 3ನೇ ದಿನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿ ಒಳ್ಳೆಯ ಕೆಲಸಕ್ಕೆ ದೈವ ಸಂಸ್ಕೃತಿಯಿಂದ ಜೀವನ ರೂಢಿಸಿಕೊಂಡು ಕೆಲಸ ಮಾಡಿದರೆ ಯಶಸ್ಸು ಕಟ್ಟಿಬುತ್ತಿ. ಪುರಾಣ ಪ್ರವಚನ ಗ್ರಂಥ ಬರೆಯು ಸಾಹಿತಿಗಳು ದೈವಬಲ ಮಹಾಶಕ್ತಿ, ಪಂಚಪೀಠ ಪರಮಾತ್ಮನನ್ನು ನೆನೆಯುತ್ತಾ ಬರೆದರೆ ವಿಷಯಗಳು ಒಂದಕ್ಕೊಂದು ಅಥಪೂರ್ಣ ಆಗುತ್ತವೆ ಎಂದರು.

ಕೆಲಸ ಕಾರ್ಯ ಮಾಡುವಾಗ ಅಂದರೆ ಕೃಷಿಯಲ್ಲಿ ರೈತರು ತಮ್ಮ ಎತ್ತುಗಳಿಗೆ ಸಮಸ್ಕಾರ ಮಾಡಿ ದೈವನನ್ನು ನೆನದು ಕೃಷಿ ಚುಟುವಟಿಕೆ ಮಾಡುತ್ತಾರೆ. ಯಾವುದೇ ಅವಘಡಗಳು ಸಂಭವಿಸದಂತಾಗಲು ವಾಹನಕ್ಕೆ ನಮಸ್ಕಾರ ಮಾಡುತ್ತಾ ದೈವನನ್ನು ನೆನೆದು ತಮ್ಮ ಕಾರ್ಯಚಟುವಟಿಕೆ ಮಾಡುತ್ತಾರೆ ಇದೇ ರೀತಿ ಮನುಷ್ಯ ಎಲ್ಲ ರೀತಿ ಕಾಯಕ ಮಾಡುವವರು ದೈವವನ್ನು ನೆನೆಯುತ್ತಾ ತಮ್ಮ ಕಾರ್ಯಚಟುವಟಿಗಳನ್ನು ಮುಂದುವರೆಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ ಅವರು ಶ್ರೀಗಳಿಂದ ವಿಶೇಷ ಸನ್ಮಾನಿಸಲಾಯಿತು. ಸಿದ್ದಾಂತ ಶಿಖಾಮಣಿ ಪ್ರವಚನವನ್ನು ಮಠದ ಗುರುಕುಲ ಸಾಧಕರಾದ ಮಂಜುನಾಥ ದೇವರು ನಡೆಸಿಕೊಟ್ಟರುಶ್ರೀಚನ್ನಮಲ್ಲಿಕಾರ್ಜನ ಪುರಾಣ ಪ್ರವಚವನ್ನು ಹಾವೇರಿ ಜಿಲ್ಲೆ ಹಾಲದಕಟ್ಟೆ ಹಿರೇಮಠದ ವೇದ ಪಂಡಿತ ಬಸವರಾಜಶಾಸ್ತ್ರೀ ನಡೆಸಿಕೊಟ್ಟರು. ಈ ಸಂದರ್ಭ ಚಿಕ್ಕಗೋಣಿಗೆರೆ ಜ್ಯೋತಿಗಂಗಮ್ಮ, ಮಹಾದೇವಪ್ಪ, ಆಡಳಿತ ಮಂಡಳಿ ಕಾರ್ಯಧರ್ಶಿ ಚನ್ನಯ್ಯ ಬೆನ್ನೂರು ಮಠ, ಕೆ.ಜಿ.ರುದ್ರಪ್ಪ,ಎಂ.ಪಿ.ಎಂ.ಚನ್ನಬಸಯ್ಯ, ಕೋರಿ ಮಲ್ಲಿಕಾರ್ಜನಪ್ಪ,ರವೀಶ್,ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ,ಕೋರಿಗುರುಲಿಂಗಪ್ಪ,ಕಡ್ಡದಕಟ್ಟೆ ತಿಮ್ಮಣ್ಣ,ದಾನಪ್ಪ,ಪರಮೇಶ್ವರಚಾರ್,ನರೇಂದ್ರಚಿರಡೋಣಿ,ಸುನೀತಾ ತೀರ್ಥಯ್ಯ ಚಿನ್ನಿಕಟ್ಟೆ, ನರಸಗೊಂಡನಹಳ್ಳಿ ಗುರುಪ್ರಸಾದ, ಕೆ.ಎನ್. ರೇವಣಸಿದ್ದಪ್ಪ ಶಿರೂರು, ಬಸವರಾಜಸ್ವಾಮಿ ಶ್ರೀಚನ್ನಪ್ಪಸ್ವಾಮಿ ಗಾನಕಲಾ ಬಳಗದರು ಇದ್ದರು.

- - - -9ಎಚ್.ಎಲ್ ಐ1.:

ಹಿರೇಕಲ್ಮಠದಲ್ಲಿ ಶ್ರಾವಣ ಮಾಸದ ಪುಜಾ ಮತ್ತು ರಥೋತ್ಸವ ಅಂಗವಾಗಿ ಪ್ರತಿ ದಿನ ವೀರಶೈವ ಸಿದ್ದಾಂತ ಶಿಖಾಮಣಿ ಪ್ರವಚನದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!