ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳಿದರು.ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ವಿದ್ಯಾಗಿರಿಯ ಬಿವಿವಿ ಸಂಘದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಬಹಳ ಮಹತ್ವದು, ಈ ಎರಡು ವರ್ಷ ತಪ್ಪಿಸನಂತೆ ಅಧ್ಯಯನ ಮಾಡಬೇಕು. ಮೊಬೈಲ್‌ನ್ನು ಹಿತಮಿತವಾಗಿ ಬಳಕೆ ಮಾಡಿ ಅಧ್ಯಯನ ಶೀಲರಾಗಿ ಯಶಸ್ಸು ಸಾಧಿಸಿ ಕುಟುಂಬ ಹಾಗೂ ಸಮಾಜಕ್ಕೆ ಕಿರ್ತಿ ತರುವ ವ್ಯಕ್ತಿಗಳಾಗಿ ಎಂದು ತಿಳಿಸಿದರು.ಕಾಲೇಜುಗಳ ಆಡಳಿತ ಮಂಡಳಿಯ ಕಾಯಾಧ್ಯಕ್ಷ ಗುರುಬಸವ ಸೂಳಿಭಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತಮ್ಮದೆಯಾದ ವಿಶೇಷ ಪ್ರತಿಭೆಯಿದೆ. ಅದನ್ನು ಗುರುತಿಸಿ ಆ ನಿಟ್ಟಿನಲ್ಲಿ ಸಾಗುವಂತಾಗಬೇಕು. ಕಲಾ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಸರಿಸಮಾನಾದವುಗಳು ಆಯಾ ವಿಭಾಗದಲ್ಲಿ ಅಧ್ಯಯನ ನಿರಂತರಾದವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಹಾಕಿ ಕೈಗಾರಿಕೋದ್ಯಮ ಹಾಗೂ ವಿಶೇಷ ವ್ಯಾಘ್ಮಿಗಳಾಗಿ, ಆಡಳಿತಗಾರರಾಗಿ ಇನ್ನಾವುದೇ ಕ್ಷೇತ್ರದ ವಿಶೇಷ ಪರಿಣಿತರಾಗಿ ಸಮಾಜ ತಮ್ಮತ್ತ ನೋಡುವಂತಹ ವ್ಯಕ್ತಿಗಳಾಗಿ ತಮ್ಮ ಸಾಧನೆಗೆ ಬೇಕಾದ ಎಲ್ಲ ಸೌಲಭ್ಯವನ್ನು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಒದಗಿಸುತ್ತದೆ. ಸದಕ್ಕೆ ಪೂರಕವಾಗಿ ಎಲ್ಲ ಸೌಲಭ್ಯವನ್ನು ಸನ್ಮಾನ್ಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠರವರು ಒದಗಿಸಿ ಕೊಡುತ್ತಿದ್ದಾರೆ. ಜತೆಗೆ ಬಾಗಲಕೋಟೆಯು ಯಾವುದೇ ರೀತಿಯಿಂದ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದವರಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ರಂಗಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಪದಕಗಳನ್ನು ನೀಡಿ ಗೌರವಿಹಿಸಲಾಯಿತು. ಜತೆಗೆ ಇತಿಹಾಸ ವಿಷಯದ ಉಪನ್ಯಾಸಕ ಡಾ.ಪ್ರವೀನ ಚಿತ್ರಗಾರ ಅವರು ಪಿಎಚ್.ಡಿ ಪದವಿ ಪಡೆದ ನಿಮಿತ್ತ ಗೌರವಿಸಲಾಯಿತು.ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಚ್.ವಟವಟಿಯವರು ಸ್ವಾಗತಿಸಿದರು. ಎನ್.ಎಸ್.ಎಸ್ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ಮಾರುತಿ ಪಾಟೋಳಿಯವರು ಪರಿಚಯಿಸಿದರು. ಸಾಂಸ್ಕೃತಿಕ ಚಟುವಟಿಕೆಯ ಅಧ್ಯಕ್ಷ ಸ್ನೇಹಾ.ಪಿ.ಬಂಗಿಯವರು ವರದಿವಾಚನ ಮಾಡಿದರು. ಕ್ರೀಡಾ ನಿರ್ದೇಶಕ ಬಿ.ಐ.ಬೋಡನಾಯಕದಿನ್ನಿ ವಂದಿಸಿದರು. ಡಾ.ಎಸ್.ಆರ್.ಕುಲಕರ್ಣಿ ನಿರೂಪಿಸಿದರು. ಎ.ಎಂ.ಪಾಟೀಲ ಹಾಗೂ ವೀಣಾ ಕುಂದರಗಿ, ಎಂ.ಎಚ್.ಕಟಗೇರಿ, ಆರ್.ಸಿ.ಚಿನ್ನಾಕರ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.