ಸಮಸ್ಯೆಗಳ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡರೆ ಸಾಧನೆ ಸರಳ-ವಿಶ್ವೇಶ

KannadaprabhaNewsNetwork |  
Published : Aug 04, 2025, 12:30 AM IST
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಾಧಿಸುವ ಛಲ ಹೊಂದಿದವರಿಗೆ ಉದ್ಭವಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮಾಭಿಮಾನ ಮೈಗೂಡಿಸಿಕೊಂಡರೆ ಸಾಧನೆ ಸರಳವಾಗುತ್ತದೆ ಎಂದು ಹುಬ್ಬಳ್ಳಿಯ ವಾಗ್ಮಿ ಎಚ್.ವಿ. ವಿಶ್ವೇಶ ಹೇಳಿದರು.

ಗಜೇಂದ್ರಗಡ: ಸಾಧಿಸುವ ಛಲ ಹೊಂದಿದವರಿಗೆ ಉದ್ಭವಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮಾಭಿಮಾನ ಮೈಗೂಡಿಸಿಕೊಂಡರೆ ಸಾಧನೆ ಸರಳವಾಗುತ್ತದೆ ಎಂದು ಹುಬ್ಬಳ್ಳಿಯ ವಾಗ್ಮಿ ಎಚ್.ವಿ. ವಿಶ್ವೇಶ ಹೇಳಿದರು.

ಸ್ಥಳೀಯ ರೋಣ ರಸ್ತೆಯಲ್ಲಿನ ಜಗದ್ಗುರು ತೋಂಟದಾರ್ಯ ಸಿ.ಬಿ.ಎಸ್.ಸಿ. ಶಾಲೆಯಲ್ಲಿ ಭಾನುವಾರ ಇಲ್ಲಿನ ಲಕ್ಷ್ಮೀ ಅರ್ಬನ್ ಕೋ-ಆಪ್ ಬ್ಯಾಂಕನ್ ೧೧೨ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ವಿದ್ಯೆಯ ಜತೆಗೆ ನಯ, ವಿನಯತೆ, ಸಂಸ್ಕೃತಿ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಸಮಾಜ ನಿಮ್ಮನ್ನು ಗೌರವಿಸುವದಿಲ್ಲ. ಹೀಗಾಗಿ ಶಿಕ್ಷಣ ಎಷ್ಟು ಮುಖ್ಯವೋ ಜೀವನದಲ್ಲಿ ಮಾನವೀಯ ಮೌಲ್ಯಗಳು ಸಹ ಮುಖ್ಯ ಎಂಬುದನ್ನು ಶಿಕ್ಷಕರು, ಪಾಲಕರು ತಿಳಿಸಿಕೊಡುವ ಜವಾಬ್ದಾರಿಯಿದೆ ಎಂದ ಅವರು, ಜನರ ಪ್ರೀತಿ ಮತ್ತು ವಿಶ್ವಾಸದಿಂದ ೧೧೨ ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ನಡೆಸುತ್ತಿರುವ ಲಕ್ಷ್ಮೀ ಅರ್ಬನ್ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ಕಾಪಾಡುವುದರ ಜತೆಗೆ ಸಾಲ ಪಡೆಯುವ ಜನರನ್ನು ಗೌರವಿಸಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸಗಳಿಸಿದೆ ಎಂದರು. ಬ್ಯಾಂಕಿನ ಚೇರ್ಮನ್ ಸಿಎ ಎಸ್.ಕೆ. ಚನ್ನಿ ಮಾತನಾಡಿ, ಬ್ಯಾಂಕ್ ೮೨.೧೯ ಲಕ್ಷ ರು. ನಿವ್ವಳ ಲಾಭಗಳಿಸಿದೆ ಎಂದರು. ಸಿದ್ದಣ್ಣ ಬಂಡಿ ಪ್ರಾಸ್ತಾವಿಕವಾಗಿ ಹಾಗೂ ಡಾ.ಬಿ.ವ್ಹಿ. ಕಂಬಳ್ಯಾಳ ಸ್ವಾಗತ ಭಾಷಣವನ್ನು ಮಾಡಿದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಬಿ.ವ್ಹಿ. ಕಂಬಳ್ಯಾಳ, ಡಾ.ಆರ್.ಎಸ್. ಜೀರೆ ಹಾಗೂ ಕೀರ್ತಿ ಬಸವರಾಜ ಕೊಟಗಿ ಹಾಗೂ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. "ಪ್ರತಿಭೆಗೆ ಪುರಸ್ಕಾರ ಸಿಗುವುದು ಕ್ಷೀಣಿಸಿರುವ ಸಂದರ್ಭದಲ್ಲಿ ಲಕ್ಷ್ಮೀ ಅರ್ಬನ್ ಕೋ-ಆಪ್ ಬ್ಯಾಂಕ್ ಸಾಧಕರನ್ನು, ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಹಾಗೂ ಸನ್ಮಾನ ಮಾಡುವ ಮೂಲಕ ಸಮಾಜದ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹದ ಜತೆಗೆ ಜವಾಬ್ದಾರಿ ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಅನುಕರಣೀಯ ಎಂದು ಸನ್ಮಾನಿತರು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಂಕಿನ ನಿದೇರ್ಶಕರಾದ ಎಸ್.ಎಸ್. ಪಟ್ಟೇದ, ಪಿ.ಎಸ್. ಕಡ್ಡಿ, ಪಿ.ವಾಯ್. ತಳವಾರ, ಪಿ.ಬಿ. ಮ್ಯಾಗೇರಿ, ಎಸ್.ಕೆ. ಕನಕೇರಿ, ಆರ್‌.ಬಿ. ನಿಡಗುಂದಿ, ಕಲ್ಲಪ್ಪ ಸಜ್ಜನರ, ರಾಜಮತಿ ಹೂಲಿ, ಸುಜಾತಾ ಮೆಣಸಗಿ, ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಕ ಹೊಸಂಗಡಿ ರಾಜು ಹೊಸಂಗಡಿ, ಎಂ.ಎಸ್. ಇಂಡಿ, ಪ್ರದೀಪ ಮ್ಯಾಗೇರಿ, ಎನ್.ಕೆ. ಹೊಸಂಗಡಿ, ವಿ.ಡಿ. ಕೆಂಬಾವಿ, ವಿಜಯಲಕ್ಷ್ಮೀ ಆಲೂರ, ವೀರಮ್ಮ ಜಡಿಮಠ, ಸಿದ್ದಣ್ಣ ರಂಜಣಗಿ, ವಿಶ್ವನಾಥ ಕರಬಾಶೆಟ್ಟಿ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು
ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುತ್ತಿರುವ ಪ್ರಶಂಸಾರ್ಹ: ಎಂ.ಎನ್.ಪಾಟೀಲ