ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

KannadaprabhaNewsNetwork |  
Published : Aug 04, 2025, 12:30 AM IST
ರಟ್ಟೀಹಳ್ಳಿ ಪಪಂ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ. | Kannada Prabha

ಸಾರಾಂಶ

ವಾರ್ಡ್ ನಂ. 1 ಪರಿಶಿಷ್ಟ ಪಂಗಡ(ಎಸ್‌ಸಿ) ಮೀಸಲಾತಿ ಸ್ಥಾನಕ್ಕೆ ರಾಮಪ್ಪ ಕಾಟಪ್ಪ ಮಾಲ್ಮೀಕಿ, ವಾರ್ಡ್ ನಂ. 2 ಹಿಂದುಳಿದ ವರ್ಗ(ಅ) ಮಹಿಳೆ ಸ್ಥಾನಕ್ಕೆ ಮಲ್ಲಮ್ಮ ಕೋಂ ರಮೇಶ ಕಟ್ಟೆಕಾರ್, ವಾರ್ಡ್ ನಂ. 3 ಸಾಮಾನ್ಯ ಸ್ಥಾನಕ್ಕೆ ವೀರನಗೌಡ ನಾಗನಗೌಡ ಪ್ಯಾಟಿಗೌಡ್ರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ರಟ್ಟೀಹಳ್ಳಿ: ಆ. 17ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಗೆ ಭಾರಿ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ಸಿನ 15 ವಾರ್ಡ್‌ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಮಧ್ಯಾಹ್ನ ಬಿಡುಗಡೆಗೊಳಿಸಲಾಯಿತು. ವಾರ್ಡ್ ನಂ. 1 ಪರಿಶಿಷ್ಟ ಪಂಗಡ(ಎಸ್‌ಸಿ) ಮೀಸಲಾತಿ ಸ್ಥಾನಕ್ಕೆ ರಾಮಪ್ಪ ಕಾಟಪ್ಪ ಮಾಲ್ಮೀಕಿ, ವಾರ್ಡ್ ನಂ. 2 ಹಿಂದುಳಿದ ವರ್ಗ(ಅ) ಮಹಿಳೆ ಸ್ಥಾನಕ್ಕೆ ಮಲ್ಲಮ್ಮ ಕೋಂ ರಮೇಶ ಕಟ್ಟೆಕಾರ್, ವಾರ್ಡ್ ನಂ. 3 ಸಾಮಾನ್ಯ ಸ್ಥಾನಕ್ಕೆ ವೀರನಗೌಡ ನಾಗನಗೌಡ ಪ್ಯಾಟಿಗೌಡ್ರ, ವಾರ್ಡ್ ನಂ. 4 ಸಾಮಾನ್ಯ ಸ್ಥಾನಕ್ಕೆ ರವೀಂದ್ರ ಉಜ್ಜಪ್ಪ ಮುದಿಯಪ್ಪನವರ, ವಾರ್ಡ್ ನಂ.5 ಹಿಂದುಳಿದ ವರ್ಗ(ಅ) ಸ್ಥಾನಕ್ಕೆ ಕಪಿಲದೇವ ಜಯಪ್ಪ ಪೂಜಾರ, ವಾರ್ಡ್ ನಂ. 6 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅರ್ಪದಬಾನು ಕೋಂ ಸೈಯದ್ ಅಬ್ಬಾಸ ಗೋಡಿಹಾಳ ಅವರನ್ನು ಅಭ್ಯರ್ಥಿಯ್ನಾಗಿ ಘೋಷಿಸಲಾಗಿದೆ.

ವಾರ್ಡ್ ನಂ. 7 ಹಿಂದುಳಿದ ವರ್ಗ(ಬ) ಸ್ಥಾನಕ್ಕೆ ಪರಮೇಶಗೌಡ ದೊಡ್ಡಗೌಡ ಬಸನಗೌಡ್ರ, ವಾರ್ಡ್ ನಂ. 8 ಹಿಂದುಳಿದ ವರ್ಗ(ಅ) ಮಹಿಳೆ ಸ್ಥಾನಕ್ಕೆ ರೇಖಾ ಮಾಲತೇಶ ಗೊರವರ, ವಾರ್ಡ್ ನಂ. 9 ಸಾಮಾನ್ಯ ಸ್ಥಾನಕ್ಕೆ ಮನೋಜ ಕೃಷ್ಣಪ್ಪ ಗೋಣೆಪ್ಪನವರ, ವಾರ್ಡ್ ನಂ. 10 ಸಾಮಾನ್ಯ ಸ್ಥಾನಕ್ಕೆ ಸರ್ಫರಾಜ ನವಾಜ್ ಮಹಬೂಬ ಮಾಸೂರ, ವಾರ್ಡ್ ನಂ. 11 ಹಿಂದುಳಿದ ವರ್ಗ(ಅ) ಸ್ಥಾನಕ್ಕೆ ಮಖಬುಲ್ ಮಹ್ಮದ ಖಾಸಿಮಸಾಹೇಬ ಮುಲ್ಲಾ.

ವಾರ್ಡ್ ನಂ. 12 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಗೀತಾ ಎಂ.ಪಿ. ಕೋಂ ಎಂ.ಎಸ್. ಪ್ರಕಾಶ, ವಾರ್ಡ್ ನಂ. 13 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಪವಿತ್ರಾ ನಾಗರಾಜ ಜಾಧವ, ವಾರ್ಡ್ ನಂ. 14 ಪರಿಶಿಷ್ಟ ಜಾತಿ(ಎಸ್‌ಸಿ) ಸ್ಥಾನಕ್ಕೆ ಜಗದೀಶ್ವರ ಬಸಪ್ಪ ದೊಡ್ಡಮನಿ, ವಾರ್ಡ್ ನಂ. 15 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅಮೃತ ಶಂಭು ಯತ್ನಳ್ಳಿ.ಅರಿವು ಶೈಕ್ಷಣಿಕ ಸಾಲ ಸೌಲಭ್ಯ ಅರ್ಜಿ ಆಹ್ವಾನ

ಹಾವೇರಿ: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025- 26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಲ್ಲಿ ಸಿಇಟಿ, ಎನ್‌ಇಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿಎಚ್‌ಡಿಯಲ್ಲಿ ವ್ಯಾಸಂಗ ಮಾಡುವ ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹1 ಲಕ್ಷ ಸಾಲವನ್ನು ಶೇ. 2ರ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು. ವ್ಯಾಸಂಗ ಪೂರ್ಣಗೊಂಡ ನಂತರ 4 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿರಬೇಕು. ಅರ್ಹ ಅಭ್ಯರ್ಥಿಗಳು ಅ. 31ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 9448451111 ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ