ಮೈಸೂರಿನ ಕೆ.ರಾಘವೇಂದ್ರ, ಉತ್ತರಕನ್ನಡ ಜಿಲ್ಲೆಯ ಅರುಣ ಬುಕ್ಕಾ ಗುಡಿಗಾರ ಸೇರಿ 10 ಮಂದಿ ಸಾಧಕರು ‘ಗೌರವ ಪ್ರಶಸ್ತಿ’ಗೆ ಮತ್ತು ಹತ್ತು ಮಂದಿ ಕಲಾವಿದರು ‘ಶಿಲ್ಪಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2024 ಮತ್ತು 2025ನೇ ಸಾಲಿನ ‘ಗೌರವ ಪ್ರಶಸ್ತಿ’ ಹಾಗೂ 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ಮೈಸೂರಿನ ಕೆ.ರಾಘವೇಂದ್ರ, ಉತ್ತರಕನ್ನಡ ಜಿಲ್ಲೆಯ ಅರುಣ ಬುಕ್ಕಾ ಗುಡಿಗಾರ ಸೇರಿ 10 ಮಂದಿ ಸಾಧಕರು ‘ಗೌರವ ಪ್ರಶಸ್ತಿ’ಗೆ ಮತ್ತು ಹತ್ತು ಮಂದಿ ಕಲಾವಿದರು ‘ಶಿಲ್ಪಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್, 2024ನೇ ಸಾಲಿನ ಗೌರವ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯ ಎ.ಪಿ.ಶ್ರೀಕಂಠಾಚಾರ್ಯ (ಸಂಪ್ರದಾಯ ಶಿಲ್ಪ), ಧಾರವಾಡದ ಸಾಯಿನಾಥ ಭೀಮರಾಯಪ್ಪ (ಸಂಪ್ರದಾಯ ಶಿಲ್ಪ), ಹಾವೇರಿಯ ಸೋಮಾಚಾರಿ (ಸಂಪ್ರದಾಯ ಶಿಲ್ಪ), ಮೈಸೂರಿನ ರಾಜಬಾಬು (ಸಿಮೆಂಟ್ ಶಿಲ್ಪ), ವಿಜಯನಗರ ಜಿಲ್ಲೆಯ ಎಂ.ಕೆ ಗಿರೀಶ್‌ಕುಮಾರ್ (ಸಮಕಾಲೀನ ಶಿಲ್ಪ) ಆಯ್ಕೆಯಾಗಿದ್ದಾರೆ ಎಂದರು.
2025ನೇ ಸಾಲಿನ ಗೌರವ ಪ್ರಶಸ್ತಿಗೆ ಕಲಬುರಗಿಯ ಕಲ್ಲಣ್ಣ ಸಾಯಬಣ್ಣ ಕಂಬಾರ (ಸಂಪ್ರದಾಯ ಶಿಲ್ಪ), ರಾಯಚೂರಿನ ಅರವಿಂದ ವಿ ಬಡಿಗೇರ (ರಥ ಶಿಲ್ಪ), ಗದಗದ ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ (ಸಂಪ್ರದಾಯ ಶಿಲ್ಪ), ಉತ್ತರ ಕನ್ನಡದ ಅರುಣ ಬುಕ್ಕಾ ಗುಡಿಗಾರ (ಸಂಪ್ರದಾಯ ಶಿಲ್ಪ), ಮೈಸೂರಿನ ಕೆ.ರಾಘವೇಂದ್ರ (ಸಮಕಾಲೀನ ಶಿಲ್ಪ) ಅವರು ಅಯ್ಕೆಗೊಂಡಿದ್ದಾರೆ.2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಗೆ ಬಸ್ತಿ ಸದಾಶಿವ ಶೆಣೈ- (ದಕ್ಷಿಣ ಕನ್ನಡ), ದೇವಿಪ್ರಸಾದ್ ಎಂ.ಮಾಯಾಚಾರ್ಯ (ಬಾಗಲಕೋಟೆ), ಮಂಜುನಾಥ ಡಿ. ಬಾರ್ಕಿ(ಹಾವೇರಿ), ರಾಜೇಶ್ ಎಂ.ಪತ್ತಾರ (ಗದಗ), ಆನಂದ ಹಾವನೂರು (ಬೆಳಗಾವಿ), ನವೀನ್ ಕಡ್ಲಾಸ್ಕರ್ (ಧಾರವಾಡ), ಕೆ.ಎನ್.ಕೃಷ್ಣಮೂರ್ತಿಚಾರ್(ಚಿತ್ರದುರ್ಗ), ವಿಪಿನ್ ಭದೌರಿಯಾ (ಬೆಂಗಳೂರು), ಸಿ.ಪಿ. ವಿಶ್ವನಾಥ್ (ತುಮಕೂರು), ಮತ್ತು ಎಂ. ಶರಣ್ (ಬೆಂಗಳೂರು ದಕ್ಷಿಣ) ಅವರು ಭಾಜನರಾಗಿದ್ದಾರೆ.
ಅಕಾಡೆಮಿ ಬಹುಮಾನಕ್ಕೆ ಶಿಲ್ಪ ಕಲಾಕೃತಿ ಆಯ್ಕೆ:ವಿಜಯನಗರದ ಬಿ.ಬ್ರಹ್ಮಚಾರಿ(ಕಾಲಭೈರವ-ಕಲ್ಲು), ಶಿವಮೊಗ್ಗದ ಎಲ್.ಪುರುಷೋತ್ತಮ (ದೇವಿ-ಮರ), ಎನ್.ರಾಘವೇಂದ್ರ (ಬುದ್ಧ- ಮರ), ಡಿ.ಎಂ.ಪ್ರದೀಪ್‌ಕುಮಾರ್ (ಧ್ಯಾನ ಸಂಗಮ-ಮಿಶ್ರಮಾಧ್ಯಮ), ಉಡುಪಿಯ ವಿಶ್ವೇಶ್ವರ ಪರ್ಕಳ (ಶೀರ್ಷಿಕೆ ರಹಿತ- ಮಿಶ್ರಮಾಧ್ಯಮ) ಮತ್ತು ಮಂಡ್ಯದ ಕೆ.ಎಸ್. ಸ್ವಾತೀಶ್ (ಭದ್ರತೆ-ಮಿಶ್ರಮಾಧ್ಯಮ) ಆಯ್ಕೆಯಾಗಿದ್ದಾರೆ.
ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನದ ದತ್ತಿ ಪ್ರಶಸ್ತಿಗೆ ರಾಯಚೂರಿನ ಈರಣ್ಣ (ಸಗರನಾಡಿನ ಜಾನಪದ ಗ್ರಾಮದೇವತೆ-ಮರ), ಜಯಪುರದ ಮನೋಹರ ಕಾಳಪ್ಪ ಪತ್ತಾರ ದತ್ತಿ ಪ್ರಶಸ್ತಿಗೆ ವಾದಿರಾಜ ಕಲಬುರಗಿಯ ಎಂ.ಬಡಿಗೇರ (ವೃಷಭವಾಹನ ಶಿವ-ಮರ),ತಲ್ಲೂರು ಫ್ಯಾಮಿಲಿ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಬೆಂಗಳೂರಿನ ರೂಪ ಖಂಗೋವಿ (ಅಜ್ಜನ ಸನ್‌ಡಕ್ ಕಾಯುತ್ತಿರುವ ಮಿಯ್ಯಾವ್- ಮಿಶ್ರ ಮಾಧ್ಯಮ), ಬೆಂಗಳೂರು ದಕ್ಷಿಣದ ಪಿ.ಎಸ್.ಕೃಷ್ಣಮೂರ್ತಿ ( ನೆಸ್ಟ್ ಆಫ್ ಥ್ರೆಡ್ಡಿಮಗ್- ರೇಷ್ಮೆ), ಬೆಂಗಳೂರಿನ ಅರೇನಾ ಅನಿಮೇಷನ್- ಬೆಂಗಳೂರಿನ ವೇದಾತ್ಮ ಕಾಲೇಜ್ ಆಫ್ ಡಿಸೈನ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ದತ್ತಿ ಪ್ರಶಸ್ತಿಗೆ ಬಾಗಲಕೋಟೆಯ ಆನಂದ ಬಿಳಗಿ (ಅಭಿನವ ಶ್ರೀ- 3ಡಿ ಪ್ರಿಂಟ್ ಪ್ಲಾಸ್ಟಿಕ್ ಫಿಲಮೆಂಟ್) ಆಯ್ಕೆಗೊಂಡಿದ್ದಾರೆ.
ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗಳಿಗೆ ತಲಾ ₹50 ಸಾವಿರ ನಗದು ಮತ್ತು ಶಿಲ್ಪಶ್ರೀ ಸೇರಿ ಇತರೆ ಎಲ್ಲ ಪ್ರಶಸ್ತಿಗಳಿಗೆ ತಲಾ ₹25 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಫೆಬ್ರವರಿ ಕೊನೆ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ತಿಳಿಸಿದರು.