ಆರ್ಥಿಕವಾಗಿ ಸಬಲರಾಗಬೇಕೆಂಬ ಹಂಬಲವಿದ್ದರೆ ಯಶಸ್ಸು ಸಾಧ್ಯ: ಎಸ್.ಆರ್.ಗೌಡ

KannadaprabhaNewsNetwork |  
Published : Nov 14, 2025, 01:15 AM IST
೧೩ಶಿರಾ೩: ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ ಕ್ಷೀರ ಸಂಜೀವಿನಿ ಹಂತ ೫.ರ ಯೋಜನೆಯಡಿ ಫಲಾನುಭವಿಗಳಿಗೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಚೆಕ್ ವಿತರಿಸಿದರು. ಉಪ ವ್ಯವಸ್ಥಾಪಕ ಬಿ.ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ನಿತ್ಯ ಕೂಲಿ ಮಾಡುವುದಕ್ಕಿಂತ ಮೂರು ಹಸುಗಳನ್ನು ಕಟ್ಟಿ ಸಾಕಾಣಿಕೆ ಮಾಡಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, ಹಾಲು ಅಮೃತವಿದ್ದಂತೆ, ಹಾಲಿನ ಉತ್ಪನ್ನಗಳು ಮನುಷ್ಯನ ಆರೋಗ್ಯವನ್ನು ಸ್ಥಿರವಾಗಿಡುವಲ್ಲಿ ಸಹಕಾರಿಯಾಗುತ್ತವೆ.

ಕನ್ನಡಪ್ರಭ ವಾರ್ತೆ ಶಿರಾ

ದುಡಿಯಬೇಕೆಂಬ ಹಂಬಲ, ಅಚಲ ವಿಶ್ವಾಸ, ಆರ್ಥಿಕವಾಗಿ ಸಬಲರಾಗಬೇಕೆಂಬ ಸಂಕಲ್ಪ ಪ್ರತಿಯೊಬ್ಬ ಮಹಿಳೆಯಲ್ಲೂ ಇದ್ದರೆ ಹೈನುಗಾರಿಕೆ ಕ್ಷೇತ್ರ ಯಶಸ್ಸು ನೀಡಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಅವರು ತಾಲೂಕಿನ ಗೌಡಗೆರೆ ಹೋಬಳಿಯ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ ಕ್ಷೀರ ಸಂಜೀವಿನಿ ಹಂತ ೫ರ ಯೋಜನೆಯಡಿ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿತ್ಯ ಕೂಲಿ ಮಾಡುವುದಕ್ಕಿಂತ ಮೂರು ಹಸುಗಳನ್ನು ಕಟ್ಟಿ ಸಾಕಾಣಿಕೆ ಮಾಡಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, ಹಾಲು ಅಮೃತವಿದ್ದಂತೆ, ಹಾಲಿನ ಉತ್ಪನ್ನಗಳು ಮನುಷ್ಯನ ಆರೋಗ್ಯವನ್ನು ಸ್ಥಿರವಾಗಿಡುವಲ್ಲಿ ಸಹಕಾರಿಯಾಗುತ್ತವೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ೧೪ ಜನ ಮಹಿಳೆಯರಿಗೆ ಹಸು ಖರೀದಿ ಮಾಡಲು ತಲಾ ೪೬ ಸಾವಿರ ರು.ನಂತೆ ೬.೫ ಲಕ್ಷ ರು. ಪ್ರೋತ್ಸಾಹಧನ ನೀಡಿದ್ದೇವೆ, ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಂಡು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸುವತ್ತ ಮುನ್ನಡೆಯಬೇಕು ಎಂದರು.

ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರಪ್ಪ, ಮಾಜಿ ಅಧ್ಯಕ್ಷ ಶಾಂತರಾಜು, ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಸ್ಟೆಪ್ ಮುಖ್ಯಸ್ಥೆ ಮಧು, ಪಶುವೈದ್ಯ ಶ್ರೀಕಾಂತ್, ಡಾ. ಇಟ್ಲಾಸ್, ಸಮಾಲೋಚಕರಾದ ಬಾಬಾ ಫಕ್ರುದ್ದೀನ್ ಪಿ.ಎಂ., ಪ್ರವೀಣ್, ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷ ಕೆ. ರಾಧಾ, ಮುಖಂಡ ಮುದ್ದು ಗಣೇಶ್, ಆರೋಗ್ಯ ಇಲಾಖೆಯ ಚಂದ್ರಪ್ಪ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಸವಿತಾ ವಿಠ್ಠಲ್, ಡಾ. ಶೈಲಜಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಸ್ಟೆಪ್ ಅಧಿಕಾರಿಗಳಾದ ಭವ್ಯ, ಕಿರಣ್ ಸೇರಿ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ