ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಿಕೊಂಡು ಅಧ್ಯಯನಶೀಲರಾದಲ್ಲಿ ಅಂತವರಿಗೆ ಜಯ ಕಟ್ಟಿಟ್ಟ ಬುತ್ತಿ, ಸಾಧನೆಯಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾ. ವೈ.ಸಿ.ಪಾಟೀಲ ಹೇಳಿದರು.
ನರೇಗಲ್ಲ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಿಕೊಂಡು
ಅಧ್ಯಯನಶೀಲರಾದಲ್ಲಿ ಅಂತವರಿಗೆ ಜಯ ಕಟ್ಟಿಟ್ಟ ಬುತ್ತಿ, ಸಾಧನೆಯಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾ. ವೈ.ಸಿ.ಪಾಟೀಲ ಹೇಳಿದರು.ಸ್ಥಳೀಯ ದತ್ತಾತ್ರೆಯ ದೇವಸ್ಥಾನದ ಸಭಾಭವನದಲ್ಲಿ ಸಾಧನಾ ಕರಿಯರ್ ಅಕಾಡೆಮಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಹಾವಳಿಯಿಂದ ಶಿಕ್ಷಣ ವಂಚಿತರಾಗುತ್ತಿದ್ದು, ತಾವುಗಳು ಅಂತಹ ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವನವನ್ನು ಹಾಳುಮಾಡಿಕೊಳ್ಳದೇ ಆದರ್ಶ ವಿದಾರ್ಥಿಗಳಾಗಿ ಇಲ್ಲಿ ಕಲಿತ ಶಿಕ್ಷಣವನ್ನು ಪುನಾವರ್ತಿತ ಮಾಡಿಕೊಂಡು ಗುರುಗಳ ಮಾರ್ಗದರ್ಶನದಂತೆ ಅಭ್ಯಾಸದಲ್ಲಿ ತೊಡಗುವುದರ ಮೂಲಕ ಉತ್ತಮ ಅಂಕಗಳನ್ನು ಪಡೆದು ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ, ತಂದೆ-ತಾಯಿಗಳಿಗೆ ಗೌರವ ತಂದುಕೊಡುವಂತವರಾಗಬೇಕು ಎಂದರು.ಉಪನ್ಯಾಸಕ ಎಫ್.ಎನ್. ಹುಡೇದ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ತಮಗೆ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ಶಿಸ್ತುಬದ್ಧ ಅಧ್ಯಯನಕ್ಕೆ ಮುಂದಾಗುವುದರ ಜೊತೆಗೆ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು, ಅಂದಾಗ ನಿಜವಾಗಿಯೂ ನಿಮ್ಮ ತಂದೆ ತಾಯಿಗಳಿಗೆ ಗೌರವ ತಂದು ಕೊಟ್ಟಂತಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮುಖಂಡ ಮುತ್ತಣ್ಣ ಕಡಗದ, ಸಂಸ್ಥೆಯ ಮುಖ್ಯಸ್ಥ ಎನ್.ಎಸ್. ಅಚ್ಚಿ, ವಿ.ಕೆ. ಸಂಗನಾಳ ಮಾತನಾಡಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದು 6 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಉದಯಕುಮಾರ ಸವದಿ, ಮುತ್ತಣ್ಣ ಗೆದಗೇರಿ, ಶರಣಯ್ಯ ಬಾಗಲತ್ತಿ, ವಿಜಯ ಕುಂಟೋಜಿ, ವಿನಯಶ್ರೀ ಪರಯ್ಯನಮಠ, ವಿದ್ಯಾ ಪಾಟೀಲ, ಸಣ್ಣಪ್ಪ ಹರ್ತಿ, ಶಿವಪ್ಪ ಕರಿಯತ್ತಿನ, ಚೇತನಾ ಕರಿಯತ್ತಿನ, ಸಾಗರ ಕುಂಬಾರ ಸೇರಿದಂತೆ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು. ಕೀರ್ತಿ ಗೆದಗೇರಿ ಸ್ವಾಗತಿಸಿದರು. ಗೌರಿ ಪಾಟೀಲ ನಿರೂಪಿಸಿದರು. ಸಂಜಯ ಯಲಿಗಾರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.