ನಿರಂತರ ಶ್ರಮದಿಂದ ಯಶಸ್ಸು ಸಾಧ್ಯ: ಜಿ.ಬಿ.ಪಾಟೀಲ್

KannadaprabhaNewsNetwork |  
Published : Jun 10, 2024, 12:54 AM IST
ಸ | Kannada Prabha

ಸಾರಾಂಶ

ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ನಿರಂತರ ಗಮನಹರಿಸಿದಾಗ ಯಶಸ್ವಿ ಹೊಂದಲು ಸಾಧ್ಯ. ಆಸಕ್ತಿಗೆ ಅನುಗುಣವಾಗಿ ಮಕ್ಕಳಿಗೆ ಪೂರಕ ಶಿಕ್ಷಣ ನೀಡಬೇಕಿದೆ.

ಹಗರಿಬೊಮ್ಮನಹಳ್ಳಿ: ಸಮಾಜದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯದ ಕನಸು ಮತ್ತು ಯೋಜನೆ ಹೊಂದಬೇಕಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿ.ಬಿ. ಪಾಟೀಲ್ ತಿಳಿಸಿದರು.

ಪಟ್ಟಣದ ಪಂಚಮಸಾಲಿ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ನಿರಂತರ ಗಮನಹರಿಸಿದಾಗ ಯಶಸ್ವಿ ಹೊಂದಲು ಸಾಧ್ಯ. ಆಸಕ್ತಿಗೆ ಅನುಗುಣವಾಗಿ ಮಕ್ಕಳಿಗೆ ಪೂರಕ ಶಿಕ್ಷಣ ನೀಡಬೇಕಿದೆ. ವಿದ್ಯೆ ಒಂದು ಉತ್ತಮ ಸಂಸ್ಕಾರ ನೀಡುವ ರಾಜಮಾರ್ಗವಾಗಿದೆ. ನಿವೃತ್ತ ನೌಕರರು ಕ್ರೀಯಾಶೀಲರಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಬೇಕು ಎಂದರು.

ನಿಡಸೋಸಿಯ ದಾರುಗುಂಡೇಶ್ವರ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪಂಚಮಸಾಲಿ ಸಮಾಜದ ಬಹುತೇಕರು ಕೃಷಿಯಲ್ಲಿ ಯಶಸ್ವಿಯಾಗಿದ್ದು, ಉನ್ನತ ಅವಿಷ್ಕಾರಗಳ ಮೂಲಕ ಮುಂಚೂಣಿಗೆ ಬರಬೇಕಿದೆ ಎಂದರು.

ಶಾಸಕ ಕೆ.ನೇಮರಾಜ ನಾಯ್ಕ ಉದ್ಘಾಟಿಸಿ ಮಾತನಾಡಿ, ಪಂಚಮಸಾಲಿ ಭವನದ ಸಂಪರ್ಕ ರಸ್ತೆಯನ್ನು ಸಿ.ಸಿ. ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದರು. ಸಮಾಜದ ತಾಲೂಕು ಆಧ್ಯಕ್ಷ ಅಕ್ಕಿ ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ, ಬಳ್ಳಾರಿ ಅಧ್ಯಕ್ಷ ಬೊಪ್ಪಖಾನ್ ಕುಮಾರಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ್ ಚಿದಾನಂದ, ಮಹಿಳಾ ಘಟಕದ ಅಧ್ಯಕ್ಷೆ ಮಂಗಳ ಮಾತನಾಡಿದರು.

ಮುನಗೋಳಿಯ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.೮೫ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಾಲೂಕು ಉಪಾಧ್ಯಕ್ಷ ಮಂಜುನಾಥ ಗೌಡ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನಿರ್ಮಲಾ ವಿ.ಮೆಣಸಿಗಿ, ವಾಣಿ ಶಿವಶಂಕರಗೌಡ, ಮಂಜುಳಾ ಬಳಿಗಾರ, ಕೊಟ್ಟೂರೇಶ್ವರಿ, ನೌಕರರ ಸಂಘದ ಅಧ್ಯಕ್ಷ ಎಚ್.ಸುರೇಶ ಇತರರಿದ್ದರು.

ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಂತ್ರಪಳ್ಳಿ ಗುರುಬಸವರಾಜ ಸೊನ್ನದ್, ಟ್ರಸ್ಟ್ ಕಾರ್ಯದರ್ಶಿ ಎಚ್.ಪಿ. ಶಿವಶಂಕರ ಗೌಡ, ಗಾಯಕಿ ಶಾರದಾ ಮಂಜುನಾಥ, ಸಂಚಿಶಿವಕುಮಾರ್, ಶಿಕ್ಷಕರಾದ ಪ್ರಭಾಕರ, ಮಂಜುನಾಥ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ