- ಇಸ್ರೋ ಸೆಟಲೈಟ್ ಕೇಂದ್ರ ವಿಜ್ಞಾನಿ ಎಚ್.ಎಲ್.ನಿವಾಸ್
ದಾವಣಗೆರೆ: ಇಂದಿನ ಯುವಸಮೂಹ ಮುಂದಿನ ಉತ್ತಮ ಭವಿಷ್ಯಕ್ಕೆ ಸರಿಯಾದ ಅಡಿಪಾಯ ಹಾಕಬೇಕಿದೆ. ಭಾರತೀಯರಾದ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಚಂದ್ರಯಾನ-3, ಮಂಗಳಯಾನ ಯಶಸ್ವಿಯಾಗಿ ಪೂರೈಸಿರುವುದೇ ಸಾಕ್ಷಿ ಎಂದು ಬೆಂಗಳೂರಿನ ಇಸ್ರೋ ಸೆಟಲೈಟ್ ಕೇಂದ್ರ ವಿಜ್ಞಾನಿ ಎಚ್.ಎಲ್. ನಿವಾಸ ಹೇಳಿದರು.
ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಹಾಲಮ್ಮ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಿಂದ ನಡೆದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಮತ್ತು ವಿಭಾಗದ ಫೋರಂ ವಿಸೋನಿಕ್ಸ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಾಸಾದ ವಿಜ್ಞಾನಿಗಳು ಇಂದು ನಮ್ಮ ಇಸ್ರೋ ವಿಜ್ಞಾನಿಗಳೊಡನೆ ತಾಂತ್ರಿಕ ವಿಷಯವಾರು ಸಂವಾದ ನಡೆಸುತ್ತಿದ್ದಾರೆ. ದೇಶ ಪ್ರಗತಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ನಾವೆಲ್ಲರೂ ಅದಕ್ಕೆ ಕೈ ಜೋಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಫೋರಂ ವಿಸೋನಿಕ್ಸ್ ಅಡಿಯಲ್ಲಿ ನಡೆದ ವಿವಿಧ ಚಟುವಟಿಕೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
- - - -24ಕೆಡಿವಿಜಿ35ಃ: